March 22, 2026
Sunday, March 22, 2026
spot_img

ಇಂಡಿಯಾ AI ಇಂಪ್ಯಾಕ್ಟ್ ಸಮಿಟ್ ನಲ್ಲಿ ಮೋದಿ ತಿಳಿಸಿದ MANAV ವಿಷನ್‌ ಅಂದರೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೆಹಲಿ ಭಾರತ ಮಂಟಪದಲ್ಲಿ ನಡೆಯುತ್ತಿರುವ ಇಂಡಿಯಾ AI ಇಂಪ್ಯಾಕ್ಟ್ ಸಮಿಟ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಈ MANAV ದೃಷ್ಟಿಕೋನವನ್ನು ಜಗತ್ತಿನ ಮುಂದೆ ತೆರೆದಿಟ್ಟಿದ್ದಾರೆ.

21ನೇ ಶತಮಾನದ ಎಐ ಆಧಾರಿತ ಜಗತ್ತಿನಲ್ಲಿ ಮಾನವೀಯತೆಯ ಕಲ್ಯಾಣಕ್ಕಾಗಿ ಭಾರತದ ಈ MANAV ದೃಷ್ಟಿಕೋನವು ಒಂದು ಪ್ರಮುಖ ಕೊಂಡಿಯಾಗಲಿದೆ ಎಂದು ಹೇಳಿದ ಮೋದಿ, ಐದು ಪ್ರಮುಖ ತತ್ವಗಳನ್ನು ವಿವರಿಸಿದ್ದಾರೆ.

ಎಐ ಕ್ರಾಂತಿಯನ್ನು ನಾಗರಿಕತೆಯ ದಿಕ್ಕನ್ನು ಮರುಹೊಂದಿಸುವ ಮತ್ತು ಅಭಿವೃದ್ಧಿಯ ವೇಗವನ್ನು ಹೆಚ್ಚಿಸುವ ಐತಿಹಾಸಿಕ ತಿರುವುಗಳಿಗೆ ಹೋಲಿಸಿದ ಮೋದಿ, ಬೆಂಕಿಯ ಆವಿಷ್ಕಾರದಿಂದ ಲಿಪಿಗಳು ಬಂದವು ಬಳಿಕ ವೈರ್‌ಲೆಸ್ ಸಂವಹನದ ಆವಿಷ್ಕಾರ ನಡೆಯಿತು. ಹಿಂದಿನ ತಾಂತ್ರಿಕ ಬದಲಾವಣೆಗಳು ಹರಡಲು ವರ್ಷಗಳೇ ತೆಗೆದುಕೊಂಡಿದ್ದವು. ಆದರೆ ಎಐನಿಂದಾಗಿ ಬಹಳ ವೇಗವಾಗಿ ಜಗತ್ತಿನಲ್ಲಿ ತಾಂತ್ರಿಕ ಬದಲಾವಣೆ ಆಗುತ್ತಿದೆ ಎಂದರು.

ಹಿಂದೆ ಯಂತ್ರಗಳಿಂದ ಕಲಿಕೆ ಎನ್ನುವುದು ಸಾಮಾನ್ಯವಾಗಿತ್ತು. ಆದರೆ ಈಗ ಯಂತ್ರಗಳಿಗೇ ಕಲಿಸುವ ಕಾಲಕ್ಕೆ ಬಂದಿದ್ದೇವೆ. ಎಐ ಎಂದಿಗಿಂತಲೂ ವೇಗವಾಗಿ, ಆಳವಾಗಿ ಬದಲಾಗುತ್ತಿದೆ ಎಂದು ಹೇಳಿದರು.

ಇನ್ನು ಹಿಂದಿಯಲ್ಲಿ ಮಾನವ್ (MANAV) ಎಂದರೆ ಮನುಷ್ಯ ಎಂದರ್ಥ. ಈ ಪದ ಎಐ ಐದು ಪ್ರಮುಖ ತತ್ವಗಳನ್ನು ಪ್ರತಿನಿಧಿಸುವ ಸಂಕ್ಷಿಪ್ತ ರೂಪವಾಗಿ ಕಾರ್ಯನಿರ್ವಹಿಸುತ್ತದೆ ಎಂದು ವಿವರಿಸಿದರು.

ಮೋದಿ MANAV ವಿಷನ್‌:
M ಅಂದರೆ ನೈತಿಕ ಮತ್ತು ನೈತಿಕ ವ್ಯವಸ್ಥೆಗಳು. ಇದು ಎಐ ತಂತ್ರಜ್ಞಾವು ನೈತಿಕ ಮಾರ್ಗಸೂಚಿಯ ಅಡಿಯಲ್ಲಿ ಮಾರ್ಗದರ್ಶನ ನೀಡಬೇಕು.
A ಅಂದರೆ ಜವಾಬ್ದಾರಿ. ಇದು ಆಡಳಿತವು ಪಾರದರ್ಶಕ ನಿಯಮಗಳು ಮತ್ತು ಮೇಲ್ವಿಚಾರಣೆಯೊಂದಿಗೆ ಹೊಣೆಗಾರಿಕೆಯನ್ನು ಖಚಿತಪಡಿಸಿಕೊಳ್ಳಬೇಕು.
N ಅಂದರೆ ರಾಷ್ಟ್ರೀಯ ಸಾರ್ವಭೌಮತ್ವದ ಸಂಕೇತ. ಒಂದು ದೇಶದೊಳಗೆ ಉತ್ಪತ್ತಿಯಾಗುವ ಡೇಟಾ ಆ ರಾಷ್ಟ್ರಕ್ಕೆ ಸೇರಿರಬೇಕು ಮತ್ತು ಅದರ ಅಧಿಕಾರ ವ್ಯಾಪ್ತಿಯಲ್ಲಿ ಉಳಿಯಬೇಕು.
A ಅಂದರೆ ಒಳಗೊಳ್ಳುವಿಕೆ ಮತ್ತು ಲಭ್ಯತೆಯನ್ನು ಸೂಚಿಸುತ್ತದೆ. ಎಐ ತಂತ್ರಜ್ಞಾನ ಯಾರದ್ದೋ ಒಬ್ಬರ ಸ್ವತ್ತಾಗಬಾರದು ಅಥವಾ ಏಕಸ್ವಾಮ್ಯ ಆಗಬಾರದು ಎಂಬುವುದನ್ನು ಸೂಚಿಸುತ್ತದೆ.
V ಅಂದರೆ ಮಾನ್ಯ ಮತ್ತು ಕಾನೂನುಬದ್ಧ. ನಿರಂತರ ಪರಿಶೀಲನೆಗೆ ಸಾಧ್ಯವಾಗಿರಬೇಕು ಎಂಬುವುದನ್ನು ಸೂಚಿಸುತ್ತದೆ. ಮೂಲಕ ಎಐ ತಂತ್ರಜ್ಞಾನ ಮಾನವ ಕೇಂದ್ರಿತ ಆಗಿಗಬೇಕು ಎಂಬುವುದು ಉದ್ದೇಶವಾಗಿದೆ.

ಮಾನವ ಕೇಂದ್ರಿತ ಎಐ ಆದರೆ ಆ ತಂತ್ರಜ್ಞಾದ ಮೇಲೆ ಜನರಲ್ಲಿ ಹೆಚ್ಚಿನ ನಂಬಿಕೆ ಬರಲು ಸಾಧ್ಯ. ಎಐ ತಂತ್ರಜ್ಞಾನದಿಂದ ಉದ್ಯೋಗ ಕಳೆದುಕೊಳ್ಳುವ ಬದಲಾಗಿ ಇದರ ಸಹಕಾರದಿಂದ ಮನುಷ್ಯರು ತಮ್ಮ ಕೆಲಸವನ್ನು ಪರಿಣಾಮಕಾರಿಯಾಗಿ ಮಾಡಲು ಸಾಧ್ಯವಾಗಲಿದೆ ಎಂಬುವುದು ಉದ್ದೇಶವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !