ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮ್ಮ ಬಜೆಟ್ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾಷಣದಲ್ಲಿ ಆರೆಂಜ್ ಎಕನಾಮಿ ವಿಚಾರದ ಕುರಿತು ಪ್ರಸ್ತಾಪ ಮಾಡಿದ್ದಾರೆ. ಆರೆಂಜ್ ಎಕನಾಮಿ ಅಥವಾ ಕಿತ್ತಳೆ ಆರ್ಥಿಕತೆಗೆ ಪುಷ್ಟಿ ಕೊಡುವುದಾಗಿ ಹೇಳಿದ್ದಾರೆ.
ಹಾಗಿದ್ರೆ ಆರೆಂಜ್ ಎಕನಾಮಿ ಎಂದರೇನು?
ಅನಿಮೇಶನ್, ಗೇಮಿಂಗ್, ಫಿಲಂ, ಮ್ಯೂಸಿಕ್, ಡಿಸೈನ್, ಡಿಜಿಟಲ್ ಕಂಟೆಂಟ್ ಇತ್ಯಾದಿ ಕ್ರಿಯೇಟಿವ್ ಕೆಲಸಗಳಿರುವ ಕ್ಷೇತ್ರವನ್ನು ಆರೆಂಜ್ ಎಕನಾಮಿ ಎಂದು ಬಣ್ಣಿಸಲಾಗುತ್ತದೆ. ಹೊಸ ಕ್ರಿಯೇಟಿವ್ ಐಡಿಯಾಗಳು, ಟೆಕ್ನಾಲಜಿ, ಸಂಸ್ಕೃತಿ ಇತ್ಯಾದಿಯಿಂದ ಪ್ರೇರಿತವಾದ ಈ ಉದ್ಯಮದಿಂದ ಉದ್ಯೋಗಸೃಷ್ಟಿ, ನಗರ ಅಭಿವೃದ್ಧಿ ಮತ್ತು ಸಾಂಸ್ಕೃತಿಕ ಮೌಲ್ಯ ವರ್ಧಿಸಬಲ್ಲುದು.ಜಾಹೀರಾತು, ಅನಿಮೇಶನ್, ಸಾಫ್ಟ್ವೇರ್, ವಿಡಿಯೋ ಗೇಮ್ಸ್, ಸಿನಿಮಾ, ಫ್ಯಾಷನ್, ಪಬ್ಲಿಶಿಂಗ್ ಇತ್ಯಾದಿ ಸೆಕ್ಟರ್ಗಳು ಈ ಆರ್ಥಿಕ ವರ್ಗಕ್ಕೆ ಸೇರುತ್ತವೆ. ಯೂಟ್ಯೂಬ್ನ ಕಂಟೆಂಟ್ ಕ್ರಿಯೇಟರ್ಗಳು, ರೀಲ್ಸ್ ಮಾಡುವವರ ಬ್ಯುಸಿನೆಸ್ ಕೂಡ ಇದೇ ವರ್ಗಕ್ಕೆ ಸೇರುತ್ತದೆ.
‘ಭಾರತದ ಅನಿಮೇಶನ್, ವಿಷುವಲ್ ಎಫೆಕ್ಟ್ಸ್, ಗೇಮಿಂಗ್, ಕಾಮಿಕ್ಸ್ (ಎವಿಜಿಸಿ) ಸೆಕ್ಟರ್ ಬೆಳೆಯುತ್ತಿರುವ ಉದ್ಯಮವಾಗಿದೆ. 2030ರೊಳಗೆ 20 ಲಕ್ಷ ವೃತ್ತಿಪರರ ಅಗತ್ಯತೆ ಇದಕ್ಕಿರುತ್ತದೆ. 15,000 ಹೈಸ್ಕೂಲುಗಳು, 500 ಕಾಲೇಜುಗಳಲ್ಲಿ ಎವಿಜಿಸಿ ಕಂಟೆಂಟ್ ಕ್ರಿಯೇಟರ್ ಲ್ಯಾಬ್ಗಳನ್ನು ಆರಂಭಿಸಲು ಮುಂಬೈನಲ್ಲಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಕಂಟೆಂಟ್ ಟೆಕ್ನಾಲಜೀಸ್ಗೆ ನೆರವು ನೀಡಲಾಗುವುದು’ ಎಂದು ತಿಳಿಸಿದ್ದಾರೆ.
2025ರ ವೇವ್ಸ್ ಶೃಂಗಸಭೆಯಲ್ಲಿ ಮಾತನಾಡುವಾಗ ಪ್ರಧಾನಿ ನರೇಂದ್ರ ಮೋದಿ ಅವರೂ ಕೂಡ ಭಾರತದ ಆರೆಂಜ್ ಎಕನಾಮಿ ಬಗ್ಗೆ ಪ್ರಸ್ತಾಪ ಮಾಡಿದ್ದರು.



