March 6, 2026
Friday, March 6, 2026
spot_img

ಇದು ಯಾವ ರೀತಿಯ ಅಭಿಮಾನ ಸ್ವಾಮೀ: ಆರ್​ಸಿಬಿ ಫ್ಯಾನ್ಸ್ ವಿರುದ್ಧ ಆಕ್ರೋಶ! ಅಷ್ಟಕ್ಕೂ ಆಗಿದ್ದೇನು?

2026ರ ಟಿ20 ವಿಶ್ವಕಪ್‌ನ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 7 ರನ್‌ಗಳ ರೋಚಕ ಜಯ ಸಾಧಿಸಿದ ಭಾರತ ಫೈನಲ್‌ಗೆ ಪ್ರವೇಶಿಸಿದೆ. ರನ್‌ಗಳ ಸುರಿಮಳೆಯಾದ ಈ ಪಂದ್ಯದಲ್ಲಿ ಬ್ಯಾಟ್ಸ್‌ಮನ್‌ಗಳು ಭರ್ಜರಿ ಪ್ರದರ್ಶನ ನೀಡಿದರೆ, ಬೌಲರ್‌ಗಳು ಕಷ್ಟ ಅನುಭವಿಸಿದರು. ಭಾರತದ ಬ್ಯಾಟಿಂಗ್ ವೇಳೆ ಕ್ರೀಡಾಂಗಣ ಜೈಕಾರಗಳಿಂದ ತುಂಬಿದ್ದರೆ, ಇಂಗ್ಲೆಂಡ್ ಬ್ಯಾಟಿಂಗ್ ಸಮಯದಲ್ಲಿ ಕೆಲವು ಅಭಿಮಾನಿಗಳ ವರ್ತನೆ ಚರ್ಚೆಗೆ ಕಾರಣವಾಯಿತು.

ಮೊದಲು ಬ್ಯಾಟಿಂಗ್ ಮಾಡಿದ ಭಾರತ ಭಾರೀ 253 ರನ್‌ಗಳನ್ನು ಕಲೆಹಾಕಿ ದೊಡ್ಡ ಗುರಿ ನೀಡಿತು. ಆರಂಭದಲ್ಲಿ ಭಾರತ ಸುಲಭವಾಗಿ ಗೆಲ್ಲಲಿದೆ ಎನ್ನುವ ನಿರೀಕ್ಷೆ ಇದ್ದರೂ, ಇಂಗ್ಲೆಂಡ್ ಆಟಗಾರರು ಕೊನೆಯವರೆಗೂ ಹೋರಾಡಿ ಪಂದ್ಯವನ್ನು ರೋಚಕಗೊಳಿಸಿದರು. ವಿಶೇಷವಾಗಿ ಜೇಕಬ್ ಬೆಥೆಲ್ ಸ್ಫೋಟಕ ಶತಕದೊಂದಿಗೆ ತಂಡವನ್ನು ಗೆಲುವಿನ ಹಂತದವರೆಗೆ ಕೊಂಡೊಯ್ದರು. ಅವರು 48 ಎಸೆತಗಳಲ್ಲಿ 8 ಬೌಂಡರಿ ಹಾಗೂ 7 ಸಿಕ್ಸರ್‌ಗಳ ನೆರವಿನಿಂದ ಶತಕ ಸಿಡಿಸಿದರು.

ಇದನ್ನೂ ಓದಿ:

ಬೆಥೆಲ್ ಭರ್ಜರಿ ಬ್ಯಾಟಿಂಗ್ ನಡೆಸುತ್ತಿದ್ದ ವೇಳೆ ಕ್ರೀಡಾಂಗಣದಲ್ಲಿ ಇದ್ದ ಕೆಲ ಆರ್‌ಸಿಬಿ ಅಭಿಮಾನಿಗಳು “ಆರ್‌ಸಿಬಿ, ಆರ್‌ಸಿಬಿ” ಎಂದು ಕೂಗಿದ ಘಟನೆ ವಿವಾದಕ್ಕೆ ಕಾರಣವಾಯಿತು. ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಆಡುತ್ತಿರುವ ಬೆಥೆಲ್‌ಗೆ ಬೆಂಬಲ ವ್ಯಕ್ತಪಡಿಸಿದ ಈ ನಡೆ ಅನೇಕ ಭಾರತೀಯ ಅಭಿಮಾನಿಗಳನ್ನು ಅಸಮಾಧಾನಗೊಳಿಸಿದೆ.

ಅಂತಾರಾಷ್ಟ್ರೀಯ ಪಂದ್ಯದಲ್ಲಿ ದೇಶದ ತಂಡಕ್ಕೆ ಬೆಂಬಲ ನೀಡುವುದೇ ಮುಖ್ಯ ಎಂಬ ಅಭಿಪ್ರಾಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿದೆ. ಫ್ರಾಂಚೈಸಿ ಕ್ರಿಕೆಟ್‌ಗಿಂತ ದೇಶವೇ ಮೊದಲು ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !