ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಆಸ್ಟ್ರೇಲಿಯಾ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಭಾರತ ತಂಡ 4 ವಿಕೆಟ್ಗಳಿಂದ ಸೋಲು ಕಂಡಿದೆ. ಪಂದ್ಯದ ನಂತರ ಮಾತನಾಡಿದ ಭಾರತ ನಾಯಕ ಸೂರ್ಯಕುಮಾರ್ ಯಾದವ್, ಭಾರತದ ಸೋಲಿಗೆ ಆರಂಭಿಕರ ವೈಫಲ್ಯ ಹಾಗೂ ಹಾಗೂ ಆಸೀಸ್ ಅನುಭವಿ ಬೌಲರ್ ಕಾರಣ ಎಂದು ತಿಳಿಸಿದ್ದಾರೆ.
ಟೀಮ್ ಇಂಡಿಯಾದ ಸೋಲಿಗೆ ಯಾವುದೇ ಒಬ್ಬ ಆಟಗಾರ ಕಾರಣನಲ್ಲ. ಆದರೆ ತನ್ನನ್ನೂ ಒಳಗೊಂಡಂತೆ ಅಗ್ರ ನಾಲ್ಕು ಬ್ಯಾಟ್ಸ್‌ಮನ್‌ಗಳು ಅಲ್ಪಮೊತ್ತಕ್ಕೆ ವಿಕೆಟ್ ಒಪ್ಪಿಸಿದ್ದು ನಮ್ಮ ತಂಡಕ್ಕೆ ದೊಡ್ಡ ಹಿನ್ನಡೆಯಾಯಿತು ಎಂದು ತಿಳಿಸಿದ್ದಾರೆ.
ಪವರ್‌ಪ್ಲೇನಲ್ಲಿ ಆಸ್ಟ್ರೇಲಿಯಾದ ವೇಗಿ ಜೋಶ್ ಹೇಜಲ್‌ವುಡ್ 3 ವಿಕೆಟ್ ಪಡೆದು ಭಾರತಕ್ಕೆ ದೊಡ್ಡ ಹೊಡೆತ ನೀಡಿದರು. ಇವರ ಮಾರಕ ದಾಳಿಯಿಂದ ಭಾರತ ಪವರ್ ಪ್ಲೇನಲ್ಲೆ 4 ವಿಕೆಟ್ ಕಳೆದುಕೊಂಡು 32 ರನ್ಗಳಿಸಿತು. ಇದೇ ಭಾರತದ ಸೋಲಿಗೆ ಪ್ರಮುಖ ಕಾರಣವಾಯಿತು ಎಂದರು.
ಹೇಜಲ್‌ವುಡ್ ಅದ್ಭುತವಾಗಿ ಬೌಲಿಂಗ್ ಮಾಡಿದರು. ಪವರ್‌ಪ್ಲೇನಲ್ಲಿ ಅವರು ಬೌಲಿಂಗ್ ಮಾಡಿದ ರೀತಿ ಅತ್ಯುತ್ತಮವಾಗಿತ್ತು. ನೀವು ಆರಂಭದಲ್ಲೇ ನಾಲ್ಕು ಬ್ಯಾಟ್ಸ್‌ಮನ್‌ಗಳನ್ನು ಕಳೆದುಕೊಂಡರೆ, ಮತ್ತೆ ಪಂದ್ಯದಲ್ಲಿ ಕಮ್ಬ್ಯಾಕ್ ಮಾಡುವುದು ತುಂಬಾ ಕಷ್ಟ. ಜೋಶ್ ನಿಜವಾಗಿಯೂ ಚೆನ್ನಾಗಿ ಬೌಲಿಂಗ್ ಮಾಡಿದರು ಎಂದು ಹೊಗಳಿದರು.
ಅಭಿಷೇಕ್ ಬ್ಯಾಟಿಂಗ್ ಕುರಿತು ಮಾತನಾಡಿದ ಸೂರ್ಯ, ಪ್ರದರ್ಶನ ಹೊಸತೇನಲ್ಲ, ಅವರು ತಂಡಕ್ಕಾಗಿ ಕೆಲವು ಸಮಯದಿಂದ ಇದೇ ರೀತಿ ಪ್ರದರ್ಶನ ನೀಡುತ್ತಿದ್ದಾರೆ. ಆತನಿಗೆ ಹೇಗೆ ಆಡಬೇಕೆಂದು ತಿಳಿದಿದೆ, ತನ್ನ ಜವಾಬ್ದಾರಿ ಏನೆಂಬುದು ತಿಳಿದಿದೆ. ಒಳ್ಳೆಯ ವಿಷಯವೆಂದರೆ ತಮ್ಮ ಆಟದ ಶೈಲಿಯನ್ನ ಬದಲಾಯಿಸುತ್ತಿಲ್ಲ. ಅದೇ ಅವರಿಗೆ ಯಶಸ್ಸನ್ನು ತಂದುಕೊಡುತ್ತಿದೆ. ಅವರು ಇದೇ ರೀತಿ ಆಡುವುದನ್ನು ಮುಂದುವರಿಸುತ್ತಾರೆ ಮತ್ತು ನಮಗಾಗಿ ಇನ್ನೂ ಅನೇಕ ಇನ್ನಿಂಗ್ಸ್‌ಗಳನ್ನು ಆಡುತ್ತಾರೆ ಎಂದು ಆಶಿಸುತ್ತೇವೆ ಎಂದು ತಿಳಿಸಿದರು.

