ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಾಳೆಯಿಂದ ಐಪಿಎಲ್ ಪಂದ್ಯದ ಅಬ್ಬರ ಶುರುವಾಗಲಿದ್ದು, ಈಗಾಗಲೇ ಟಿಕೆಟ್ ಖರೀದಿಯ ಭರಾಟೆ ಜೋರಾಗಿದೆ. ಇದರ ನಡುವೆ ರಾಜ್ಯ ಶಾಸಕರೂ ಕೂಡ ವಿಐಪಿ ಟಿಕೆಟ್ ಗಾಗಿ ಬೇಡಿಕೆ ಇಟ್ಟಿದ್ದು, ಈ ಹಿನ್ನೆಲೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಜೊತೆ ಡಿಸಿಎಂ ಡಿ.ಕೆ. ಶಿವಕುಮಾರ್ ಮಾತುಕತೆ ನಡೆಸಿದ್ದಾರೆ.
ಶಾಸಕರು ಕ್ರೀಡಾಸಕ್ತಿ ಹೊಂದಿರುವುರಲ್ಲಿ ಏನಿದೆ ತಪ್ಪು? ಈ ಕುರಿತು ನಾನು ಹೆಚ್ಚು ಆದ್ಯತೆ ನೀಡುತ್ತೇನೆ. ಶಾಸಕರಿಗೂ ಟಿಕೆಟ್ ಸಿಗುವಂತೆ ಯೋಜನೆ ಮಾಡುತ್ತೇವೆ ಎಂದು ಹೇಳಿದರು.
ಇನ್ನು ಗೃಹ ಸಚಿವ ಪರಮೇಶ್ವರ್ ಕೂಡ ಸಮರ್ಥನೆ ನೀಡಿದ್ದು, ಶಾಸಕರು ಟಿಕೆಟ್ ಕೇಳುವುದು ತಪ್ಪಲ್ಲ. ಆರ್ಸಿಬಿ ಮತ್ತು ಕೆಎಸ್ಸಿಎ ಈ ಕುರಿತು ತೀರ್ಮಾನ ಮಾಡಬೇಕು ಎಂದು ಹೇಳಿದ್ದಾರೆ.



