ಹೊಸದಿಗಂತ ಡಿಜಿಟಲ್ ಡೆಸ್ಕ್:
2025 ರ ಏಷ್ಯಾಕಪ್‌ನಲ್ಲಿ ಭಾರತ ತಂಡ ಅಮೋಘ ಪ್ರದರ್ಶನ ನೀಡಿ ಅಗ್ರಸ್ಥಾನದಲ್ಲಿದೆ. ಲೀಗ್ ಹಂತದಲ್ಲಿ ತನ್ನ ಎರಡೂ ಪಂದ್ಯಗಳನ್ನು ಗೆಲ್ಲುವ ಮೂಲಕ ಟೀಮ್ ಇಂಡಿಯಾ ಸೂಪರ್ -4 ರಲ್ಲಿ ಸ್ಥಾನ ಪಡೆದುಕೊಂಡಿದೆ.
ಇದೀಗ ಭಾರತದ ಮುಂದಿನ ಪಂದ್ಯ ಯಾವಾಗ? ಯಾರ ವಿರುದ್ಧ ಎನ್ನುವ ಡೀಟೇಲ್ಸ್ ಇಲ್ಲಿದೆ..
ಭಾರತ ತನ್ನ ಮುಂದಿನ ಪಂದ್ಯವನ್ನು ಓಮನ್ ವಿರುದ್ಧ ಆಡಲಿದೆ. ಟೀಮ್ ಇಂಡಿಯಾದ ದೀರ್ಘ ವಿರಾಮದ ಬಳಿಕ ಈ ಪಂದ್ಯವು ಸೆಪ್ಟೆಂಬರ್ 19 ಶುಕ್ರವಾರದಂದು ನಡೆಯಲಿದೆ. ಪಂದ್ಯವು ಭಾರತೀಯ ಕಾಲಮಾನ ರಾತ್ರಿ 8:00 ಗಂಟೆಗೆ ಆರಂಭವಾಗಲಿದೆ. ಪಂದ್ಯ ಪ್ರಾರಂಭವಾಗುವ ಅರ್ಧ ಗಂಟೆ ಮೊದಲು ಅಂದರೆ ಸಂಜೆ 7:30 ಕ್ಕೆ ಟಾಸ್ ನಡೆಯಲಿದೆ. ಈ ಪಂದ್ಯವು ಅಬುದಾಬಿಯ ಶೇಖ್ ಝಯೇದ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಅಲ್ಲಿ ಅಪಾರ ಪ್ರೇಕ್ಷಕರು ಸೇರುವ ನಿರೀಕ್ಷೆಯಿದೆ.
ಭಾರತ vs ಓಮನ್ ಪಂದ್ಯವನ್ನು ಭಾರತದಲ್ಲಿ ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಟಿವಿಯಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಅಭಿಮಾನಿಗಳು ಹಿಂದಿ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಕಾಮೆಂಟರಿಯನ್ನು ಆನಂದಿಸಬಹುದು.
ಏಷ್ಯಾಕಪ್‌ನಲ್ಲಿ ಭಾರತದ ಮುಂದಿನ ಪಂದ್ಯ ಯಾವಾಗ? ಯಾರ ವಿರುದ್ಧ?
