ಇಂದು ಅನೇಕರು ತೂಕ ಕಡಿಮೆ ಮಾಡಿಕೊಳ್ಳಲು ಆಹಾರಕ್ಕಿಂತ ಹೆಚ್ಚು ಗಮನ ಕೊಡುವ ಪಾನೀಯಗಳಲ್ಲಿ ಗ್ರೀನ್ ಟೀ ಮೊದಲ ಸ್ಥಾನದಲ್ಲಿದೆ. ಆದರೆ “ಗ್ರೀನ್ ಟೀ ಕುಡಿದ್ರೆ ಸಾಕು” ಅನ್ನೋದಕ್ಕಿಂತ ಯಾವ ಸಮಯದಲ್ಲಿ ಕುಡಿಯಬೇಕು ಎನ್ನುವುದೇ ಫಲಿತಾಂಶ ತೀರ್ಮಾನಿಸುವ ಮುಖ್ಯ ಅಂಶ. ಸರಿಯಾದ ಸಮಯದಲ್ಲಿ ಸೇವಿಸಿದರೆ ಮಾತ್ರ ಗ್ರೀನ್ ಟೀ ದೇಹದ ಮೆಟಾಬಾಲಿಸಂ ಹೆಚ್ಚಿಸಿ ಕೊಬ್ಬು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಬೆಳಿಗ್ಗೆ ಕುಡಿಯೋದು ಯಾಕೆ ಒಳ್ಳೆಯದು?
ಬೆಳಿಗ್ಗೆ ಉಪಾಹಾರದ ನಂತರ ಗ್ರೀನ್ ಟೀ ಕುಡಿದರೆ ಜೀರ್ಣಕ್ರಿಯೆ ಚುರುಕಾಗುತ್ತದೆ. ಮೆಟಾಬಾಲಿಸಂ ವೇಗವಾಗಿ ಕೆಲಸ ಮಾಡಲು ಇದು ಸಹಕಾರಿ. ಆದರೆ ಖಾಲಿ ಹೊಟ್ಟೆಯಲ್ಲಿ ಕುಡಿಯೋದು ತಪ್ಪಿಸಬೇಕು, ಯಾಕೆಂದರೆ ಅಸಿಡಿಟಿ ಸಮಸ್ಯೆ ಉಂಟಾಗಬಹುದು.
ಸಂಜೆ ಸಮಯದ ಲಾಭ:
ಸಂಜೆ 4–6 ಗಂಟೆಗಳ ನಡುವೆ ಗ್ರೀನ್ ಟೀ ಕುಡಿದರೆ ದಿನವಿಡೀ ಸಂಗ್ರಹವಾದ ದಣಿವು ಕಡಿಮೆಯಾಗುತ್ತದೆ ಮತ್ತು ಅನಾವಶ್ಯಕ ಸ್ನ್ಯಾಕ್ ತಿನ್ನುವ ಆಸೆ ನಿಯಂತ್ರಣಕ್ಕೆ ಬರುತ್ತದೆ.
ರಾತ್ರಿ ಕುಡಿಯಬಹುದಾ?
ರಾತ್ರಿಯಲ್ಲಿ ಗ್ರೀನ್ ಟೀ ತಪ್ಪಿಸುವುದು ಉತ್ತಮ. ಇದರಲ್ಲಿ ಇರುವ ಕ್ಯಾಫಿನ್ ನಿದ್ರೆಗೆ ತೊಂದರೆ ನೀಡಬಹುದು. ದಿನಕ್ಕೆ 2 ಕಪ್ ಗ್ರೀನ್ ಟೀ ಸಾಕು. ಸಮಯ ಪಾಲನೆ ಮಾಡಿದ್ರೆ ತೂಕ ಇಳಿಕೆಗೆ ಬೆಸ್ಟ್ ರಿಸಲ್ಟ್ ಸಿಗಬಹುದು..

