Wednesday, December 24, 2025

ಫೆಬ್ರವರಿ, ಮಾರ್ಚ್ ತಿಂಗಳ ಗೃಹಲಕ್ಷ್ಮಿ ಹಣ ಎಲ್ಲಿ ಹೋಯ್ತು? ಬರೀ ಸ್ಕ್ಯಾಂಡಲ್‌ : ಆರ್‌. ಅಶೋಕ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಎರಡು ತಿಂಗಳ ಗೃಹಲಕ್ಷ್ಮಿ ಹಣ ಹಾಕದಿರುವುದು ಸರ್ಕಾರದ ಅತಿದೊಡ್ಡ ಸ್ಕ್ಯಾಂಡಲ್. ಫೆಬ್ರವರಿ, ಮಾರ್ಚ್ ತಿಂಗಳ ಹಣ ಎಲ್ಲಿ ಹೋಯ್ತು ಅಂತ ಹೇಳಬೇಕು? ಆ ಹಣ ಫಲಾನುಭವಿಗಳಿಗೆ ಸಿಗುವವರೆಗೆ ನಾವು ಹೋರಾಟ ಮಾಡುತ್ತೇವೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹೇಳಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ತಮ್ಮ ಕುರ್ಚಿ ಉಳಿಸಿಕೊಳ್ಳುವ ಕೆಲಸದಲ್ಲೇ ಬ್ಯುಸಿ ಆಗಿದ್ದರು. ಗೃಹಲಕ್ಷ್ಮಿ ಯೋಜನೆಯಲ್ಲಿ ಎರಡು ತಿಂಗಳ ಹಣ ಹಾಕದೇ 1 ಕೋಟಿ 26 ಲಕ್ಷ ಮಹಿಳೆಯರಿಗೆ ದ್ರೋಹ ಮಾಡಿದ್ದೀರಿ. ಹಣ ಎಲ್ಲಿ ಹೋಯ್ತು ಅನ್ನೋದೇ ಗೊತ್ತಿಲ್ಲ. ಆ ಮಂತ್ರಿ ಬೆಂಗಳೂರಿಗೆ ಬರೋದನ್ನೇ ಬಿಟ್ಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು. 

ಇನ್ನು ದ್ವೇಷ ಭಾಷಣದ ಬಗ್ಗೆ ಮಾತಾಡಲು ವಿರೋಧ ಪಕ್ಷದವರಿಗೆ ಅವಕಾಶ ಕೊಡದೇ ವಿಧೇಯಕ ಪಾಸ್ ಮಾಡಿಕೊಂಡಿದ್ದಾರೆ. ಮಾಧ್ಯಮಗಳು, ವಿರೋಧ ಪಕ್ಷಗಳನ್ನ ಟಾರ್ಗೆಟ್ ಮಾಡಿ, ಜೈಲಿಗೆ ಕಳುಹಿಸಲು ತಂದಿರುವ ವಿಧೇಯಕ. ನಾವು ಈ ವಿಧೇಯಕವನ್ನು ವಿರೋಧ ಮಾಡಿದ್ದೇವೆ. ರಾಜ್ಯಪಾಲರು ಡಿಸೆಂಬರ್ 29ಕ್ಕೆ ಬೆಂಗಳೂರಿಗೆ ವಾಪಸ್ ಆಗಬಹುದು. ಭೇಟಿಯಾಗಿ ವಿಧೇಯಕಕ್ಕೆ ತಡೆ ನೀಡುವಂತೆ ಮನವಿ ಮಾಡುತ್ತೇವೆ ಎಂದರು. 

error: Content is protected !!