ಹೊಸದಿಗಂತ ಡಿಜಿಟಲ್ ಡೆಸ್ಕ್:
ದೀಪಾವಳಿ ಹಬ್ಬಗಳಿಗೆ ಬಿಹಾರಕ್ಕೆ ಪ್ರಯಾಣಿಸಲು ಅಧಿಕ ಜನರು ಹಾಕಿ ಓಡಾಡುವ ರೈಲುಗಳ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಎನ್‌ಡಿಎ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು
ಬಿಹಾರಕ್ಕೆ ಹೋಗುವ ರೈಲುಗಳು ತುಂಬಿ ತುಳುಕುತ್ತಿವೆ. ಟಿಕೆಟ್ ಪಡೆಯುವುದು ಅಸಾಧ್ಯವಾಗಿದೆ. ಅನೇಕ ರೈಲುಗಳು ತಮ್ಮ ಸಾಮರ್ಥ್ಯಕ್ಕಿಂತ ಎರಡು ಪಟ್ಟು ಹೆಚ್ಚಿನ ಪ್ರಯಾಣಿಕರನ್ನು ಸಾಗಿಸುತ್ತಿದೆ. ಜನರು ಬಾಗಿಲುಗಳಿಂದ ನೇತಾಡುತ್ತಿದ್ದಾರೆ ಎಂದು ರಾಹುಲ್ ಗಾಂಧಿ ವಿಡಿಯೋವನ್ನು ಹಂಚಿಕೊಂಡು ಎಕ್ಸ್ನಲ್ಲಿ ಟೀಕಾಪ್ರಹಾರ ನಡೆಸಿದ್ದಾರೆ.
ಈ ವೇಳೆ ಡಬಲ್ ಎಂಜಿನ್ ಸರ್ಕಾರವನ್ನು ರಾಹುಲ್ ಗಾಂಧಿ ಖಂಡಿಸಿದ್ದು, ಕೇಂದ್ರದಲ್ಲಿ ಬಿಜೆಪಿ ಮತ್ತು ಬಿಹಾರದಲ್ಲಿ ಅದರ ಎನ್‌ಡಿಎ ಮಿತ್ರ ಪಕ್ಷ ಜೆಡಿಯು ಹಬ್ಬದ ದಟ್ಟಣೆಗಾಗಿ ಘೋಷಿಸಲಾದ 12,000 ವಿಶೇಷ ರೈಲುಗಳ ಬಗ್ಗೆ ರಾಹುಲ್ ಗಾಂಧಿ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಕೇಂದ್ರ ಸರ್ಕಾರ ಘೋಷಿಸಿರುವ 12,000 ವಿಶೇಷ ರೈಲುಗಳು ಎಲ್ಲಿವೆ? ಬಿಹಾರದಲ್ಲಿ ಪ್ರಯಾಣಿಕರನ್ನು ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

