January21, 2026
Wednesday, January 21, 2026
spot_img

ವೈಟ್ ಹೌಸ್‌ಗೆ ಮೇಕೋವರ್: ಟ್ರಂಪ್ ಕನಸಿನ ‘ಗೋಲ್ಡನ್ ಬಾಲ್ ರೂಂ’ಗಾಗಿ ಈಸ್ಟ್ ವಿಂಗ್ ನೆಲಸಮ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಶ್ವದ ಅತ್ಯಂತ ಪ್ರಸಿದ್ಧ ಕಟ್ಟಡಗಳಲ್ಲಿ ಒಂದಾದ ಅಮೆರಿಕದ ಶ್ವೇತಭವನ ಈಗ ಹೊಸ ರೂಪ ತಾಳಲು ಸಜ್ಜಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಹತ್ವಾಕಾಂಕ್ಷೆಯ ಯೋಜನೆಯ ಭಾಗವಾಗಿ ಶ್ವೇತಭವನದ ಪೂರ್ವ ವಿಭಾಗದ ಮೇಲೆ ಬುಲ್ಡೋಜರ್‌ಗಳು ಕಾರ್ಯನಿರ್ವಹಿಸುತ್ತಿವೆ. ಅಮೆರಿಕದ ಇತಿಹಾಸದಲ್ಲೇ ಇದೇ ಮೊಟ್ಟಮೊದಲ ಬಾರಿಗೆ ಶ್ವೇತಭವನದ ಭಾಗವನ್ನು ಕೆಡವಲಾಗುತ್ತಿದ್ದು, ಇದು ದೇಶದಾದ್ಯಂತ ಕುತೂಹಲ ಹಾಗೂ ಚರ್ಚೆಗೆ ಕಾರಣವಾಗಿದೆ.

ಮೂಲಗಳ ಪ್ರಕಾರ, ಅಕ್ಟೋಬರ್ 20ರಂದು ಶ್ವೇತಭವನದ ಪೂರ್ವ ವಿಭಾಗದ ಕೆಲವು ಭಾಗಗಳನ್ನು ಕೆಡವಲು ಬುಲ್ಡೋಜರ್‌ಗಳು ಮತ್ತು ಕ್ರೇನ್‌ಗಳನ್ನು ಬಳಸಲಾಗಿದೆ. ಟ್ರಂಪ್ ಅವರ 15 ವರ್ಷಗಳ ಕನಸಾದ “ಭವ್ಯ ಬಾಲ್ ರೂಂ” ನಿರ್ಮಾಣದ ಕೆಲಸ ಈಗ ಅಧಿಕೃತವಾಗಿ ಪ್ರಾರಂಭವಾಗಿದೆ. ಈ ಹೊಸ ಬಾಲ್ ರೂಂ ನಿರ್ಮಾಣಕ್ಕೆ ಸುಮಾರು 200 ಮಿಲಿಯನ್ ಡಾಲರ್ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಸುಮಾರು 90,000 ಚದರ ಅಡಿಗಳ ವಿಸ್ತೀರ್ಣದ ಈ ಬಾಲ್ ರೂಂ ಶ್ವೇತಭವನದ ಇತಿಹಾಸದಲ್ಲೇ ಅತಿದೊಡ್ಡ ಮತ್ತು ಅತ್ಯಂತ ಐಷಾರಾಮಿ ಸಭಾಂಗಣವಾಗಲಿದೆ.

ಟ್ರಂಪ್ ಅವರ ಹೇಳಿಕೆಯ ಪ್ರಕಾರ, ಶ್ವೇತಭವನದಲ್ಲಿ ಅತಿಥಿಗಳಿಗೆ ಸ್ಥಳಾವಕಾಶದ ಕೊರತೆ ಇದ್ದ ಕಾರಣ ಈ ಹೊಸ ಬಾಲ್ ರೂಂ ಅಗತ್ಯವಾಯಿತು. ಚಿನ್ನದ ಬಣ್ಣದ ಅಲಂಕಾರಗಳು, ಮಾರ್ಬಲ್ ನೆಲಗಳು ಮತ್ತು ಭವ್ಯ ಜೂಮರ್‌ಗಳು ಈ ಹಾಲ್‌ಗೆ ವಿಶೇಷ ಆಕರ್ಷಣೆ ನೀಡಲಿವೆ. ಸರ್ಕಾರದ ಹಣವಿಲ್ಲದೆ, ಟ್ರಂಪ್ ಮತ್ತು ಅವರ ಖಾಸಗಿ ದಾನಿಗಳಿಂದಲೇ ಈ ಯೋಜನೆಗೆ ಹಣಕಾಸು ಒದಗಿಸಲಾಗುತ್ತಿದೆ. ಟ್ರಂಪ್ ಅಭಿಮಾನಿಗಳು ಇದನ್ನು “ಆಧುನೀಕರಣದ ಹೆಜ್ಜೆ” ಎಂದು ಕೊಂಡಾಡುತ್ತಿದ್ದರೆ, ವಿಮರ್ಶಕರು “ಅತಿಯಾದ ಭವ್ಯತೆಯ ಪ್ರದರ್ಶನ” ಎಂದು ಟೀಕಿಸುತ್ತಿದ್ದಾರೆ.

Must Read