March 17, 2026
Tuesday, March 17, 2026
spot_img

ಅವರಪ್ಪನ ಹೆಸರನ್ನು ಕೆಡಿಸಿದ್ದು ಯಾರಂತೆ? ಎಲ್ಲ ವಿಷಯ ಬಿಚ್ಚಿಡ್ಬೇಕಾ? ವಿಜಯೇಂದ್ರ ವಿರುದ್ಧ ಡಿಕೆಶಿ ಗುಸ್ಸಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕಲೆಕ್ಷನ್‌ ಕಿಂಗ್‌ ಅಂದ್ರೆ ಅದು ವಿಜಯೇಂದ್ರ, ಅವರಪ್ಪನ ಹೆಸರು ಕೆಡಿಸಿದ್ದು ವಿಜಯೇಂದ್ರ, ಅವ್ರ ಕಲೆಕ್ಷನ್‌, ವರ್ಗಾವಣೆ ದಂದೆ ಎಲ್ಲವನ್ನ ಬಿಚ್ಚಿಡಬೇಕಾ ಎಂದು ಡಿಸಿಎಂ ಡಿಕೆ ಶಿವಕುಮಾರ್‌ ತೀವ್ರ ವಾಗ್ದಾಳಿ ನಡೆಸಿದರು.

ರಾಜ್ಯ ಸರ್ಕಾರದ ʻರಾಜ್ಯದ ಖಜಾನೆ ಲೂಟಿ ಮಾಡಿ ಕಾಂಗ್ರೆಸ್‌ ತನ್ನ ಹೈಕಮಾಂಡ್‌ ತೃಪ್ತಿ ಪಡಿಸುತ್ತಿದೆʼ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿಕೆಗೆ ಬೆಳಗಾವಿಯಲ್ಲಿ ಅವರು ಪ್ರತಿಕ್ರಿಯಿಸಿದರು. 

ಕಲೆಕ್ಷನ್ ಕಿಂಗ್ ಅಂದ್ರೆ ಅದು ಬಿ.ವೈ ವಿಜಯೇಂದ್ರ. ಅವರ ಕಲೆಕ್ಷನ್, ಅವರ ವರ್ಗಾವಣೆ ದಂಧೆಯನ್ನ ಬಿಚ್ಚಿಡಬೇಕಾ? ಅವರಪ್ಪನ ಹೆಸರು ಕೆಡಸಿದ್ದು ವಿಜಯೇಂದ್ರ. ವಿಜಯೇಂದ್ರನಿಗೆ ಅನುಭವ ಇಲ್ಲ, ಯಾವ ಖಜಾನೆ ಖಾಲಿಯಾಗಿದೆ ಬಂದು ಮಾತನಾಡೋಕೆ ಹೇಳಿ ತಪ್ಪಿಸಿಕೊಂಡು ಮಾತನಾಡೋದಲ್ಲಾ. ಸದನಕ್ಕೆ ಬಂದು ಪ್ರಶ್ನೆ ಮಾಡಲಿ ಅಂತ ಸವಾಲು ಹಾಕಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !