ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾಜಿ ಪ್ರಧಾನಿ ಜವಹರಲಾಲ್ ನೆಹರೂ ಅವರು ಅಂದು ಚೀನಾದೊಂದಿಗೆ ಉತ್ತಮ ಬಾಂಧವ್ಯವನ್ನು ಉಂಟು ಮಾಡುವ ಉದ್ದೇಶದಿಂದ ಟಿಬೆಟ್ ಅನ್ನು ಚೀನಾದ ಭಾಗವೆಂದು ಗುರುತಿಸಿದ್ದರು ಎಂದು ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಜನರಲ್ ಅನಿಲ್ ಚೌಹಾಣ್ ಹೇಳಿದ್ದು, ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.
ಶುಕ್ರವಾರ ಡೆಹ್ರಾಡೂನ್‌ನಲ್ಲಿ ನಡೆದ ‘ಭಾರತ ಹಿಮಾಲಯನ್ ಸ್ಟ್ರಾಟಜಿ ಪೋರಂ’ ಕಾರ್ಯಕ್ರಮದಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದ್ದಾರೆ.
ನೆಹರೂ ಕಾಲದಲ್ಲಿ ಭಾರತ ಮತ್ತು ಚೀನಾ ದೇಶದ ನಡುವೆ ನಡೆದ ಪಂಚಶೀಲ ಒಪ್ಪಂದವ್ನು ಉಲ್ಲೇಖಿಸಿದ ಅವರು, ‘ಭಾರತವನ್ನು ಬ್ರಿಟಿಷರು ತೊರೆದ ನಂತರದಲ್ಲಿ ಗಡಿಯನ್ನು ಗುರುತಿಸುವ ಜವಾಬ್ದಾರಿ ಭಾರತದ ಮೇಲಿತ್ತು. ಭಾರತ ಮತ್ತು ಚೀನಾ ಗಡಿ ಭಾಗದ ಪೂರ್ವದಲ್ಲಿ ಮೆಕ್ ಮಹೋನ್ ಲೇನ್ ಇತ್ತು. ಲಡಾಖ್ ಭಾಗದಲ್ಲಿ ಕೆಲವು ಪ್ರದೇಶಗಳು ಭಾರತಕ್ಕೆ ಒಳಪಡುವುದಾಗಿತ್ತು. ಈ ವಿಚಾರ ಮಾಜಿ ಪ್ರಧಾನಿ ನೆಹರೂ ಅವರಿಗೂ ತಿಳಿದಿತ್ತು. ಆದರೆ ಮಧ್ಯ ವಲಯದಲ್ಲಿ ಈ ಬಗ್ಗೆ ಸ್ಪಷ್ಟತೆ ಇರಲಿಲ್ಲ. ಹಾಗಾಗಿ ನೆಹರೂರವರು ಪಂಚಶೀಲ ಒಪ್ಪಂದಕ್ಕೆ ಮುಂದಾಗಿದ್ದರು ಎಂದು ಹೇಳಿದರು.
ಈ ಒಪ್ಪಂದದ ಮೂಲಕ ಉತ್ತರದ ಗಡಿ ವಿವಾದ ಇತ್ಯರ್ಥವಾಗಿದೆ ಎಂದು ಭಾರತ ಭಾವಿಸಿತ್ತು. ಆದರೆ, ಈ ಒಪ್ಪಂದ ಕೇವಲ ವ್ಯಾಪಾರ ಉದ್ದೇಶಕ್ಕಾಗಿ ಮಾಡಿಕೊಳ್ಳಲಾಗಿದೆ. ಗಡಿ ಹಂಚಿಕೆ ವಿಚಾರವಾಗಿ ಚೀನಾದ ನಿಲುವನ್ನು ಪ್ರತಿಬಿಂಬಿಸುವುದಿಲ್ಲ ಎಂಬುವುದು ಚೀನಾದ ವಾದವಾಗಿತ್ತು. ಈ ಹಿನ್ನೆಲೆಯಲ್ಲಿ ಭಾರತ ಮತ್ತು ಚೀನಾ ದೇಶ ನಾಯಕರು ಪಂಚಶೀಲ ಒಪ್ಪಂದಕ್ಕೆ ಬಯಸಿದ್ದರು.ಚೀನಾ ಸೇನೆ ಟಿಬೆಟ್ ಅಕ್ರಮಿಸಿದಾಗ ಲಹಾಸಾಗೆ ತೆರಳಿತ್ತು. ಇದು ಅತ್ಯಂತ ಕ್ಲಿಷ್ಟಕರ ಸ್ಥಳವಾಗಿತ್ತು. ಈ ಪ್ರದೇಶದಲ್ಲಿ ಚೀನಾ ಸ್ಥಿರತೆಯನ್ನು ಬಯಸಿತ್ತು. ಈ ನಡುವೆ ಭಾರತ ಕೂಡಾ ಚೀನಾದೊಂದಿಗೆ ಉತ್ತಮ ಬಾಂಧವ್ಯ ಬಯಸಿತ್ತು. ಹಾಗಾಗಿ 1954ರಲ್ಲಿ ಟಿಕೆಟ್ ನ್ನು ಚೀನಾದ ಭಾಗ ಎಂದು ಗುರುತಿಸಲಾಯಿತು ಮತ್ತು ಪಂಚಶೀಲ ಒಪ್ಪಂದಕ್ಕೆ ಸಹಿ ಹಾಕಲಾಯಿತು ಎಂದು ವಿವರಿಸಿದರು.
ಈ ನಡುವೆ ಚೀನಾ ಟಿಬೆಟ್ ಪ್ರದೇಶವನ್ನು ವಶಪಡಿಸಿಕೊಂಡ ನಂತರದಲ್ಲಿ ಭಾರತ ಮತ್ತು ಟಿಬೆಟ್ ನಡುವೆ ಇದ್ದ ಹಿಮಾಲಯದ ಬಫರ್ ವಲಯ ಗಡಿಯಾಗಿ ಮಾರ್ಪಟ್ಟಿತ್ತು. 1954 ರಲ್ಲಿ ಭಾರತವು ಟಿಬೆಟನ್ನು ಚೀನಾದ ಭಾಗ ಎಂದು ಪರಿಗಣಿಸಿತ್ತು ಎಂಬುವುದನ್ನು ಉಲ್ಲೇಖಿಸಿದರು.



