Wednesday, November 5, 2025

Gen Z ಹುಡುಗ-ಹುಡುಗಿಯರು ಮದುವೆಯೇ ಬೇಡ ಅಂತಿರೋದು ಯಾಕೆ ?

ಸಮಾಜದಲ್ಲಿ ಮದುವೆ ಎಂದರೆ ಶಾಶ್ವತ ಬಾಂಧವ್ಯ, ಕುಟುಂಬದ ಅಡಿಪಾಯ ಎಂಬ ಅರ್ಥವಿತ್ತು. ಆದರೆ ಇಂದಿನ Generation Z ಅಂದರೆ 1997 ರಿಂದ 2012ರ ಮಧ್ಯೆ ಹುಟ್ಟಿದ ಯುವಜನರು ಈ ಪರಂಪರೆಯ ಕಲ್ಪನೆಯನ್ನು ಪ್ರಶ್ನಿಸುತ್ತಿದ್ದಾರೆ. ಇವರಲ್ಲಿ ಹಲವರು “ಮದುವೆ ಅಗತ್ಯವೇ?” ಎಂಬ ಪ್ರಶ್ನೆಯನ್ನು ಕೇಳುತ್ತಿದ್ದಾರೆ. ಹಿಂದಿನ ತಲೆಮಾರುಗಳಿಗೆ ಮದುವೆ ಜೀವನದ ಅವಿಭಾಜ್ಯ ಅಂಗವಾಗಿದ್ದರೆ, ಹೊಸ ತಲೆಮಾರಿನವರು ಅದನ್ನು ಆಯ್ಕೆಯ ವಿಷಯವಾಗಿ ನೋಡುತ್ತಿದ್ದಾರೆ. ಹೀಗಾದರೆ Generation Z ಹುಡುಗ-ಹುಡುಗಿಯರು ಮದುವೆ ಮಾಡಿಕೊಳ್ಳಲು ಹಿಂಜರಿಯುವ ಕಾರಣಗಳೇನು?

  • ಸ್ವತಂತ್ರ ಜೀವನದ ಆಸೆ: Gen Z ಯುವಕರು ತಮ್ಮ ಸ್ವಾತಂತ್ರ್ಯವನ್ನು ಅತ್ಯಂತ ಮುಖ್ಯವಾಗಿ ಕಾಣುತ್ತಾರೆ. ತಮ್ಮ ವೃತ್ತಿ, ಆಸಕ್ತಿ, ಪ್ರಯಾಣ, ಸ್ನೇಹಿತರು ಮತ್ತು ಜೀವನಶೈಲಿ—all about “my choice” ಎನ್ನುವಂತೆ. ಮದುವೆಯ ನಂತರ ಬರುವ ಬದ್ಧತೆ, ಹೊಣೆಗಾರಿಕೆ ಮತ್ತು ಬದಲಾವಣೆಗಳಿಂದ ಅವರು ದೂರವಿರಲು ಬಯಸುತ್ತಾರೆ.
  • ವೃತ್ತಿ ಮತ್ತು ಆರ್ಥಿಕ ಗುರಿಗಳಿಗೆ ಆದ್ಯತೆ: ಇಂದಿನ ಯುವಜನರು ಮದುವೆಗಿಂತ ಮೊದಲು ತಮ್ಮ ವೃತ್ತಿಯನ್ನು ಸ್ಥಿರಗೊಳಿಸಲು ಬಯಸುತ್ತಾರೆ. ತಮ್ಮ ಹಣಕಾಸು ಸ್ವಾತಂತ್ರ್ಯ ಮತ್ತು ಕರಿಯರ್ ಬೆಳವಣಿಗೆ ಇವರ ಮೊದಲ ಆದ್ಯತೆ. ಕುಟುಂಬ ಅಥವಾ ಮಕ್ಕಳು ಎಂಬ ಬಾಧ್ಯತೆಗಳನ್ನು ಹೊರುವ ಮೊದಲು financial stability ಗಳಿಸಬೇಕು ಎಂಬ ನಿಲುವು ಹೆಚ್ಚಾಗಿದೆ.
  • ಹಿಂದಿನ ಪೀಳಿಗೆಯ ಅನುಭವದ ಪರಿಣಾಮ: ಹಿಂದಿನ ಪೀಳಿಗೆಯವರಲ್ಲಿ ಕಂಡುಬಂದ ವಿಚ್ಛೇದನಗಳು, ಸಂತೋಷವಿಲ್ಲದ ದಾಂಪತ್ಯ ಜೀವನ ಮತ್ತು ಗೃಹ ಹಿಂಸೆ ಘಟನೆಗಳು Gen Z ಯ ಮನಸ್ಸಿನಲ್ಲಿ ಮದುವೆಯ ಬಗ್ಗೆ ನಕಾರಾತ್ಮಕ ಭಾವನೆಯನ್ನು ಮೂಡಿಸಿವೆ. ಅವರಲ್ಲಿ “ಮದುವೆ ಎಂದರೆ ಕಷ್ಟದ ಬಾಂಧವ್ಯ” ಎಂಬ ಭಾವನೆ ನೆಲೆಯೂರಿದೆ.
  • ಪರ್ಯಾಯ ಸಂಬಂಧಗಳ ಸ್ವೀಕೃತಿ: ಈ ತಲೆಮಾರಿನವರು live-in relationships, open relationships ಅಥವಾ single parenting ಮಾದರಿಯ ಪರ್ಯಾಯ ಸಂಬಂಧಗಳನ್ನು ಸಹಜವಾಗಿ ಸ್ವೀಕರಿಸುತ್ತಿದ್ದಾರೆ. ಇವರಿಗೆ ಬದ್ಧತೆಯ ಅಗತ್ಯವಿದೆ, ಆದರೆ ಕಾನೂನು ಬದ್ಧ ಮದುವೆ ಎಂಬ ಅಂಶವನ್ನು ಅವಶ್ಯಕತೆಯಾಗಿ ಕಾಣುತ್ತಿಲ್ಲ.
  • ಸಾಮಾಜಿಕ ಒತ್ತಡದಿಂದ ದೂರವಿರುವ ಮನೋಭಾವ: ಹಿಂದೆ ಮದುವೆ ಮಾಡಲು ಪೋಷಕರ, ಬಂಧುಗಳ ಅಥವಾ ಸಮಾಜದ ಒತ್ತಡ ಮುಖ್ಯ ಕಾರಣವಾಗುತ್ತಿತ್ತು. ಆದರೆ ಈಗಿನ ತಲೆಮಾರಿನವರು “ನನ್ನ ಜೀವನ, ನನ್ನ ನಿರ್ಧಾರ” ಎಂಬ ನಿಲುವಿನಿಂದ ಸಮಾಜದ ಒತ್ತಡವನ್ನು ಲೆಕ್ಕಿಸದೇ ತಮ್ಮ ಸಂತೋಷಕ್ಕೆ ತಕ್ಕಂತೆ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ.

Generation Z ತಲೆಮಾರಿನವರು ಮದುವೆಯ ಕಲ್ಪನೆಯನ್ನು ಸಂಪೂರ್ಣ ತ್ಯಜಿಸುತ್ತಿಲ್ಲ, ಆದರೆ ಅದನ್ನು ಕಡ್ಡಾಯವಾಗಿ ನೋಡುವ ಕಾಲ ಕಳೆದಿದೆ. ಇವರಿಗೆ ಸಂಬಂಧಗಳು, ಪ್ರೀತಿ ಮತ್ತು ಬದ್ಧತೆ ಬೇಕಾದರೂ, ಅದನ್ನು ಸ್ವಾತಂತ್ರ್ಯ ಮತ್ತು ಆತ್ಮತೃಪ್ತಿಯ ಮೇಲೆ ಹೊಡೆತ ಬೀಳದ ರೀತಿಯಲ್ಲಿ ಹೊಂದಿಕೊಳ್ಳುವುದು ಮುಖ್ಯ. ಸಮಾಜವೂ ಇವರ ಹೊಸ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳಬೇಕಾದ ಕಾಲ ಬಂದಿದೆ.

error: Content is protected !!