Wednesday, January 7, 2026

ಡ್ರಿಂಕ್ಸ್ ಮಾಡಿದ ಮೇಲೆ ಕಣ್ಣುಗಳು ಯಾಕೆ ಕೆಂಪಾಗುತ್ತೆ? ಇದು ನಿಮ್ಮ ದೇಹ ಕೊಡುತ್ತಿರೋ ಅಪಾಯದ ಸೂಚನೆನಾ?

ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ ಅಂತ ಗೊತ್ತಿದ್ರೂ ಯಾರೂ ಅದನ್ನ ಕುಡಿಯೋದು ಬಿಡಲ್ಲ. ಮದ್ಯಪಾನ ನಮ್ಮ ದೇಹಕ್ಕೆ ಹೇಗೆ ಪರಿಣಾಮ ಬೀರುತ್ತದೆ ಎಂಬುದು ತಕ್ಷಣ ಗೋಚರವಾಗುವುದಿಲ್ಲ. ಅದಕ್ಕೇ ಬಹುತೇಕ ಜನರು “ಸ್ವಲ್ಪ ಕುಡಿದರೆ ಏನಾಗಲ್ಲ” ಎಂದುಕೊಂಡೇ ಮದ್ಯವನ್ನು ಜೀವನದ ಭಾಗವನ್ನಾಗಿಸಿಕೊಂಡಿದ್ದಾರೆ. ಆದರೆ ಕುಡಿದ ನಂತರ ಕನ್ನಡಿ ಮುಂದೆ ನಿಂತಾಗ ಕಣ್ಣುಗಳು ಕೆಂಪಾಗಿರುವುದು ಕಾಣಿಸುತ್ತ? ಅದು ಕೇವಲ ನಿದ್ದೆಯ ಕೊರತೆಯಲ್ಲ, ದೇಹದೊಳಗಿನ ಎಚ್ಚರಿಕೆಯ ಸಂಕೇತವಾಗಿರಬಹುದು.

  • ರಕ್ತನಾಳಗಳ ಮೇಲೆ ಮದ್ಯದ ನೇರ ಪರಿಣಾಮ: ಮದ್ಯ ಸೇವಿಸಿದ ಬಳಿಕ ದೇಹದ ರಕ್ತನಾಳಗಳು ಹಿಗ್ಗುತ್ತವೆ. ಕಣ್ಣುಗಳಲ್ಲಿರುವ ಅತಿ ಸೂಕ್ಷ್ಮ ರಕ್ತನಾಳಗಳು ಕೂಡ ಇದಕ್ಕೆ ಹೊರತಲ್ಲ. ಅವು ಹಿಗ್ಗಿದಾಗ ರಕ್ತದ ಹರಿವು ಹೆಚ್ಚಾಗಿ, ಕಣ್ಣುಗಳು ಕೆಂಪಾಗಿ ಕಾಣಿಸುತ್ತವೆ.
  • ಕಣ್ಣುಗಳ ಮೇಲೆ ಹೆಚ್ಚುವರಿ ಒತ್ತಡ: ಮದ್ಯ ದೇಹದ ಜಲಾಂಶವನ್ನು ಕಡಿಮೆ ಮಾಡುತ್ತದೆ. ಇದರಿಂದ ಕಣ್ಣುಗಳು ಒಣಗುತ್ತವೆ, ಉರಿ ಮತ್ತು ಅಸಹನೀಯತೆ ಕಾಣಿಸಿಕೊಳ್ಳಬಹುದು. ಕೆಲವರಿಗೆ ಕಣ್ಣು ಮಿಂಚುವುದು ಅಥವಾ ತಲೆಸುತ್ತು ಕೂಡ ಕಾಣಿಸಬಹುದು.
  • ದೃಷ್ಟಿ ತಾತ್ಕಾಲಿಕವಾಗಿ ಕುಗ್ಗುವ ಸಾಧ್ಯತೆ: ಅತಿಯಾದ ಮದ್ಯಪಾನ ದೃಷ್ಟಿ ಮಂದವಾಗಲು ಕಾರಣವಾಗಬಹುದು. ಫೋಕಸ್ ಕಡಿಮೆಯಾಗುವುದು, ಎರಡು ಚಿತ್ರಗಳು ಕಾಣಿಸುವುದು ಮುಂತಾದ ಸಮಸ್ಯೆಗಳು ತಾತ್ಕಾಲಿಕವಾಗಿ ಎದುರಾಗುತ್ತವೆ.

ಇದನ್ನೂ ಓದಿ: WPL 2026ಕ್ಕೂ ಮುನ್ನ ನಾಯಕತ್ವ ಬದಲಾವಣೆ: ಯುಪಿ ವಾರಿಯರ್ಸ್‌ ಜವಾಬ್ದಾರಿ ಮೆಗ್ ಲ್ಯಾನಿಂಗ್ ಕೈಗೆ

ಈ ಲಕ್ಷಣಗಳು ಆಗಾಗ್ಗೆ ಕಂಡುಬಂದರೆ, ಅದು ದೇಹದ ರಕ್ತಪರಿಚಲನಾ ವ್ಯವಸ್ಥೆಯ ಮೇಲೆ ಮದ್ಯ ಬೀರುತ್ತಿರುವ ಹಾನಿಯ ಸೂಚನೆಯಾಗಿರಬಹುದು. ಮದ್ಯಪಾನ ಮಾಡುವವರು ದೇಹದಲ್ಲಿ ಆಗುವ ಸಣ್ಣ ಬದಲಾವಣೆಗಳನ್ನೂ ನಿರ್ಲಕ್ಷಿಸಬಾರದು. ಮಿತಿಯನ್ನು ಪಾಲಿಸುವುದು ಮಾತ್ರವಲ್ಲ, ಆರೋಗ್ಯದ ಎಚ್ಚರಿಕೆಗೆ ಕಿವಿಗೊಡುವುದು ಅತ್ಯಂತ ಅಗತ್ಯ. (Disclaimer: ಈ ಲೇಖನವು ಅಂತರ್ಜಾಲ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ. ಇದು ವೈದ್ಯಕೀಯ ಸಲಹೆಯಲ್ಲ. ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ.)

error: Content is protected !!