Sunday, January 25, 2026
Sunday, January 25, 2026
spot_img

Love Is Blind ಅಂತಾರಲ್ಲ ಯಾಕೆ? ಪ್ರೀತಿಯಲ್ಲಿ ಬಿದ್ದೋರ ಬುದ್ಧಿಗ್ಯಾಕೆ ಮಂಕು ಬಡಿಯುತ್ತೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರೀತಿ ಅಂದರೆ ಕಣ್ಣಿಗೆ ಕಾಣದ ಒಂದು ಮಾಯಾಜಾಲ ಅಂತಾರೆ. ಒಮ್ಮೆ ಆ ಭಾವನೆ ಹೃದಯಕ್ಕೆ ತಾಕಿದರೆ, ಜಗತ್ತೇ ಬೇರೆ ರೀತಿಯಲ್ಲಿ ಕಾಣಿಸುತ್ತದೆ. ತಪ್ಪು–ಒಳ್ಳೆಯದು, ಲಾಭ–ನಷ್ಟ ಎನ್ನುವ ಅಳೆಯುವಿಕೆಗಳೆಲ್ಲಾ ಕಣ್ಣಿಗೆ ಕಾಣಿಸೋದೆ ಇಲ್ಲ. ಇದನ್ನೇ ಜನರು “ಲವ್ ಈಸ್ ಬ್ಲೈಂಡ್” ಅಂತಾರೆ. ಆದರೆ ಇದು ಕೇವಲ ಕಾವ್ಯದ ಮಾತಲ್ಲ; ವಿಜ್ಞಾನಕ್ಕೂ ಇದರಲ್ಲಿ ಸ್ಪಷ್ಟ ಉತ್ತರವಿದೆ.

ವಿಜ್ಞಾನಿಗಳ ಅಧ್ಯಯನದ ಪ್ರಕಾರ, ಪ್ರೀತಿಯಲ್ಲಿ ಬಿದ್ದಾಗ ಮೆದುಳಿನಲ್ಲಿ ಆಕ್ಸಿಟೋಸಿನ್ ಮತ್ತು ಡೋಪಮಿನ್ ಎಂಬ ಹಾರ್ಮೋನ್‌ಗಳ ಉತ್ಪಾದನೆ ಹೆಚ್ಚಾಗುತ್ತದೆ. ಈ ಹಾರ್ಮೋನ್‌ಗಳು ಸಂತೋಷ, ಸಂಬಂಧ ಮತ್ತು ಭದ್ರತೆ ಎಂಬ ಭಾವನೆಗಳನ್ನು ಹೆಚ್ಚಿಸಿ, ನಿರ್ಧಾರ ತೆಗೆದುಕೊಳ್ಳುವ ತಾರ್ಕಿಕ ಶಕ್ತಿಯನ್ನು ಸ್ವಲ್ಪ ಮಂಕಾಗಿಸುತ್ತವೆ. ಅದಕ್ಕಾಗಿಯೇ ಪ್ರೀತಿಸಿದ ವ್ಯಕ್ತಿಗೆ ನಾವು ವಿಶೇಷ ಸ್ಥಾನ ಕೊಡುತ್ತೇವೆ ಮತ್ತು ಅವರ ತಪ್ಪುಗಳನ್ನೂ ಮರೆತುಬಿಡುತ್ತೇವೆ.

ಪ್ರೀತಿಯಲ್ಲಿ ಈ ಲಕ್ಷಣಗಳಿದ್ದರೆ ಅದು ಬ್ಲೈಂಡ್‌ ಲವ್‌ ಪಕ್ಕಾ:

ಅತೀ ಬೇಗ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುವುದು
ಅವರ ತಪ್ಪು ವರ್ತನೆಯನ್ನು ಪದೇಪದೇ ಕ್ಷಮಿಸುವುದು
ನಿಮ್ಮ ಭಾವನೆಗಿಂತ ಅವರ ಖುಷಿಗೆ ಹೆಚ್ಚು ಮಹತ್ವ ನೀಡುವುದು
ರೆಡ್ ಫ್ಲ್ಯಾಗ್ ಕಂಡರೂ “ಸರಿಯಾಗಿಬಿಡುತ್ತೆ” ಎಂದು ಭಾವಿಸುವುದು

Must Read