January19, 2026
Monday, January 19, 2026
spot_img

Why SO | ಚಳಿಗಾಲದಲ್ಲಿ ತೂಕ ಕಡಿಮೆ ಮಾಡ್ಕೊಳೋದು ಕಷ್ಟ ಅಂತಾರಲ್ಲ ಯಾಕೆ?

ಚಳಿಗಾಲ ಬಂದೊಡನೆ ದೇಹದ ರೂಟೀನ್ ಬದಲಾಗಿ ಬಿಡುತ್ತೆ. ಆಹಾರ ಪದ್ಧತಿ, ನಿದ್ರೆ, ಚಟುವಟಿಕೆಗಳು ಎಲ್ಲವೂ ನಿಧಾನವಾಗಿ ಬೇರೆ ದಿಕ್ಕಿಗೆ ಸಾಗಿ ಬಿಡುತ್ತೆ. ಇಂತಹ ಟೈಮ್ ನಲ್ಲಿ “ತೂಕ ಕಡಿಮೆ ಮಾಡೋದು ಕಷ್ಟ” ಅನ್ನೋ ಮಾತು ಸಾಮಾನ್ಯವಾಗಿ ಕೇಳಿ ಬರುತ್ತೆ. ಇದು ಕೇವಲ ಭ್ರಮೆಯಾ? ಅಥವಾ ಇದರ ಹಿಂದೆ ವೈಜ್ಞಾನಿಕ ಕಾರಣಗಳಿವೆಯಾ? ಅಸಲಿಗೆ, ಚಳಿಗಾಲ ದೇಹದ ಮೇಲೆ ಬೀರುವ ಪ್ರಭಾವ ತೂಕ ನಿಯಂತ್ರಣವನ್ನು ಸ್ವಲ್ಪ ಕಠಿಣವಾಗಿಸುತ್ತದೆ ಅನ್ನೋದು ನಿಜ.

ಚಳಿ ಮತ್ತು ಹಸಿವಿನ ಸಂಬಂಧ:
ಚಳಿಗಾಲದಲ್ಲಿ ದೇಹ ತನ್ನ ತಾಪಮಾನವನ್ನು ಕಾಪಾಡಿಕೊಳ್ಳಲು ಹೆಚ್ಚು ಶಕ್ತಿ ಬೇಡುತ್ತದೆ. ಇದರ ಪರಿಣಾಮವಾಗಿ ಹಸಿವಿನ ಪ್ರಮಾಣ ಹೆಚ್ಚಾಗುತ್ತದೆ. ಹೆಚ್ಚು ಕ್ಯಾಲರಿ ಇರುವ ಆಹಾರಗಳ ಕಡೆಗೆ ಮನಸ್ಸು ತಿರುಗುವುದು ಸಹಜ.

ದೈಹಿಕ ಚಟುವಟಿಕೆ ಕಡಿಮೆಯಾಗುವುದು:
ಚಳಿ, ಅಲಸ್ಯ ಮತ್ತು ಆರಾಮದ ಮನಸ್ಥಿತಿ ಹೊರಗೆ ಹೋಗಿ ವ್ಯಾಯಾಮ ಮಾಡುವ ಉತ್ಸಾಹವನ್ನು ಕಡಿಮೆ ಮಾಡುತ್ತದೆ. ಬೆಳಗ್ಗೆ ವಾಕಿಂಗ್, ಜಾಗಿಂಗ್, ಜಿಮ್ ಏಲ್ಲವೂ ನಿಧಾನಕ್ಕೆ pause modeಗೆ ಹೋಗುತ್ತವೆ.

ಸೂರ್ಯನ ಬೆಳಕು ಮತ್ತು ಮನಸ್ಥಿತಿ:
ಚಳಿಗಾಲದಲ್ಲಿ ಸೂರ್ಯನ ಬೆಳಕು ಕಡಿಮೆಯಾಗುತ್ತದೆ. ಇದು ವಿಟಮಿನ್ D ಮಟ್ಟ ಮತ್ತು ನಮ್ಮ ಮನೋಭಾವದ ಮೇಲೆ ಪರಿಣಾಮ ಬೀರುತ್ತದೆ. ಮೂಡ್ ಡೌನ್ ಆದಾಗ ‘comfort food’ ಕಡೆಗೆ ಆಕರ್ಷಣೆ ಹೆಚ್ಚಾಗುತ್ತದೆ.

ಹಾರ್ಮೋನ್ ಬದಲಾವಣೆಗಳು:
ಚಳಿಯಲ್ಲಿ ಮೆಟಾಬಾಲಿಸಂ ಸ್ವಲ್ಪ ನಿಧಾನವಾಗಬಹುದು. ಜೊತೆಗೆ, ಲೆಪ್ಟಿನ್ ಮತ್ತು ಘ್ರೆಲಿನ್ ಹಾರ್ಮೋನ್‌ಗಳ ಸಮತೋಲನ ಬದಲಾಗುವುದರಿಂದ ಹೆಚ್ಚು ತಿನ್ನುವ ಪ್ರವೃತ್ತಿ ಕಾಣಿಸುತ್ತದೆ.

ಹಬ್ಬಗಳು ಮತ್ತು ಆಹಾರ ಸಂಸ್ಕೃತಿ:
ಚಳಿಗಾಲ ಅಂದ್ರೆ ಹಬ್ಬಗಳ ಕಾಲ. ಸಿಹಿ, ಫ್ರೈಡ್ ಫುಡ್, ವಿಶೇಷ ಊಟ ಇವೆಲ್ಲವೂ ತೂಕ ಹೆಚ್ಚಾಗಲು ಮತ್ತೊಂದು ಕಾರಣವಾಗುತ್ತವೆ.(Disclaimer: ಈ ಲೇಖನವು ಅಂತರ್ಜಾಲ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ.)

Must Read

error: Content is protected !!