ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಂಜಾಬ್‌ನ ಮಾಜಿ ಸಚಿವೆ ಹಾಗೂ ನಿವೃತ್ತ ಡಿಜಿಪಿ ಒಬ್ಬರ 33 ವರ್ಷದ ಪುತ್ರ ನಿಗೂಢವಾಗಿ ಸಾವನ್ನಪ್ಪಿದ್ದರು. ಈಗ ಈ ಕೇಸ್ ಗೆ ಟ್ವಿಸ್ಟ್ ಸಿಕ್ಕಿದೆ.
ತಮ್ಮ ಸ್ವಂತ ಮಗನನ್ನು ಕೊಂದ ಆರೋಪದ ಮೇಲೆ ಮಾಜಿ ಸಚಿವೆ, ಮಾಜಿ ಪಂಜಾಬ್ ಕಾಂಗ್ರೆಸ್ ನಾಯಕಿ ರಜಿಯಾ ಸುಲ್ತಾನಾ ಮತ್ತು ಪಂಜಾಬ್‌ನ ಮಾಜಿ ಪೊಲೀಸ್ ಮಹಾನಿರ್ದೇಶಕ ಮೊಹಮ್ಮದ್ ಮುಸ್ತಾಫ ಅವರ ವಿರುದ್ಧ ಹರ್ಯಾಣದ ಪಂಚಕುಲ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
33 ವರ್ಷದ ಯುವಕ ಅಖಿಲ್ ಅಖ್ತರ್ ಅವರ ಕೊಲೆಯಾದ ಪ್ರಕರಣ ಸಂಬಂಧ ಈ ಬೆಳವಣಿಗೆ ಆಗಿದೆ.
33 ವರ್ಷದ ಅಖಿಲ್ ಕಳೆದ ಗುರುವಾರ ಪಂಚಕುಲದ ನಿವಾಸದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ತಕ್ಷಣವೇ ಕುಟುಂಬಸ್ಥರು ಅಸ್ಪತ್ರೆಗೆ ಸಾಗಿಸಿದ್ದರು. ಆಸ್ಪತ್ರೆಯಲ್ಲಿ ಅಖಿಲ್ ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದ್ದರು. ಅಖಿಲ್ ಅತಿಯಾದ ಡ್ರಗ್ಸ್ ಸೇವನೆಯಿಂದ ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರು, ಪೋಷಕರು ಆಗ ಹೇಳಿದ್ದರು.
ಇನ್ನೂ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಕೆಲವು ಔಷಧಿ ಸೇವಿಸಿದ ನಂತರ ಆರೋಗ್ಯ ಸಮಸ್ಯೆ ಉಂಟಾಗಿರಬಹುದು ಎಂಬುದು ಗೊತ್ತಾಗಿದೆ.
ಆದರೇ, ಈಗ ಅಖಿಲ್ ತಾನು ಬದುಕಿದ್ದಾಗಲೇ ತನ್ನ ತಂದೆ, ತಾಯಿಯೇ ತನ್ನನ್ನು ಹತ್ಯೆ ಮಾಡಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದ ವಿಡಿಯೋ ಈಗ ಬಿಡುಗಡೆಯಾಗಿದೆ.
ಅಖಿಲ್ ಕುಟುಂಬದ ಸ್ನೇಹಿತರೆನ್ನಲಾದ ಶಂಸುದ್ದೀನ್ ಚೌಧರಿ ಎನ್ನುವ ವ್ಯಕ್ತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಅಖಿಲ್ ಅಖ್ತರ್ ರೆಕಾರ್ಡ್ ಮಾಡಿದ ವಿಡಿಯೋ ಹಾಗೂ ಆತನ ಸೋಷಿಯಲ್ ಮೀಡಿಯಾ ಪೋಸ್ಟ್ಗಳನ್ನು ಸಾಕ್ಷ್ಯವಾಗಿ ಪೊಲೀಸರಿಗೆ ನೀಡುತ್ತಾರೆ. ಅಖಿಲ್ ಪ್ರಾಣಭಯದಲ್ಲಿ ಇದ್ದ. ಆತ ಮಾನಸಿಕ ಒತ್ತಡದಲ್ಲಿ ಇದ್ದ. ಆತನ ಸಾವು ಡ್ರಗ್ಸ್ ಓವರ್ಡೋಸ್ನಿಂದ ಅಲ್ಲ, ಆತನ ಕೊಲೆಯಾಗಿರಬಹುದು ಎಂದು ಶಂಕಿಸಿದ್ದಾರೆ.
33 ವರ್ಷದ ಅಖಿಲ್ ಅಖ್ತರ್ ಅವರ ಕೊಲೆಗೆ ಇಡೀ ಕುಟುಂಬವೇ ಸಂಚು ರೂಪಿಸಿದೆ. ಅಖಿಲ್ ಪತ್ನಿ ಜೊತೆ ಆತನ ಅಪ್ಪ ಮಾಜಿ ಡಿಜಿಪಿ ಮೊಹಮ್ಮದ್ ಮುಸ್ತಾಫ್ ಅವರಿಗೆ ಅಫೇರ್ ನಡೆಯುತ್ತಿರುತ್ತದೆ. ಇದು ಗೊತ್ತಾದ ಬಳಿಕ ಇಡೀ ಕುಟುಂಬವೇ ಅಖಿಲ್ ಅವರನ್ನು ಕೊಲ್ಲಲು ಪಿತೂರಿ ರೂಪಿಸುತ್ತದೆ. ತನ್ನ ಮೇಲೆ ಸುಳ್ಳು ಕೇಸ್ ದಾಖಲಿಸಲಾಗುತ್ತದೆ, ತನ್ನ ಜೀವ ಅಪಾಯದಲ್ಲಿದೆ ಎಂದು ಅಖಿಲ್ ಹೇಳಿಕೊಂಡಿದ್ದಕ್ಕೆ ವಿಡಿಯೋ ದಾಖಲೆ ಕೂಡ ಇದೆ.
‘ನನ್ನ ತಂದೆಯ ಜೊತೆ ತನ್ನ ಹೆಂಡತಿ ಸಂಬಂಧ ಹೊಂದಿರುವುದನ್ನು ಕಂಡುಹಿಡಿದೆ. ನಾವು ಮಾನಸಿಕವಾಗಿ ಘಾಸಿಗೊಂಡಿದ್ದೇನೆ. ಏನು ಮಾಡಬೇಕೆಂದು ತಿಳಿಯುತ್ತಿಲ್ಲ’ ಎಂದು ಆಗಸ್ಟ್ನಲ್ಲಿ ರೆಕಾರ್ಡ್ ಮಾಡಿದ ವಿಡಿಯೋದಲ್ಲಿ ಅಖಿಲ್ ಅಖ್ತರ್ ಹೇಳಿರುವುದು ಕಂಡು ಬರುತ್ತದೆ.
ತನ್ನ ತಾಯಿ ರಜಿಯಾ ಮತ್ತು ಸಹೋದರಿ ತನ್ನ ವಿರುದ್ಧದ ಪಿತೂರಿಯಲ್ಲಿ ಭಾಗಿಯಾಗಿದ್ದಾರೆ ಎಂದು ಅಕಿಲ್ ಆರೋಪಿಸಿದ್ದಾರೆ. ‘ನನ್ನನ್ನು ಸುಳ್ಳು ಕೇಸ್ ನಲ್ಲಿ ಜೈಲಿಗೆ ಹಾಕುವುದು ಅಥವಾ ಕೊಲ್ಲುವುದು ಅವರ ಯೋಜನೆಯಾಗಿದೆ’ ಎಂದು ಅವರು ಹೇಳಿದರು. 33 ವರ್ಷದ ಆ ವ್ಯಕ್ತಿ ತನ್ನ ತಂದೆಗೆ ತನ್ನ ಮದುವೆಗೆ ಮೊದಲು ತನ್ನ ಹೆಂಡತಿಯ ಪರಿಚಯವಿದೆ ಎಂದು ಅನುಮಾನಿಸುವುದಾಗಿ ವೀಡಿಯೊದಲ್ಲಿ ಹೇಳಿದ್ದಾರೆ.’ಮೊದಲ ದಿನ, ಅವಳು ನನ್ನನ್ನು ಮುಟ್ಟಲು ಬಿಡಲಿಲ್ಲ. ಅವಳು ನನ್ನನ್ನು ಮದುವೆಯಾಗಲಿಲ್ಲ, ಅವಳು ನನ್ನ ತಂದೆಯನ್ನು ಮದುವೆಯಾದಳು ‘ಎಂದು ಅಕಿಲ್ ಹೇಳಿದ್ದಾರೆ.
‘ನಾನು ಸರಿಯಾಗಿ ವಾದ ಮಾಡಿದಾಗಲೆಲ್ಲಾ ಅವರ ನಿರೂಪಣೆ ಬದಲಾಗುತ್ತದೆ ಎಂದು ಅವರು ಹೇಳಿದರು. ನಂತರ ಕುಟುಂಬವು ಅಕಿಲ್‌ನನ್ನು ಪುನರ್ವಸತಿ ಕೇಂದ್ರಕ್ಕೆ ಕಳುಹಿಸಿತು.’ನಾನು ಮೊದಲೇ ಪುನರ್ವಸತಿಯಲ್ಲಿದ್ದೆ. ನಾನು ಶುದ್ಧನಾಗಿದ್ದೆ. ನಾನು ಕುಡಿದಿಲ್ಲದ ಕಾರಣ ಈ ಬಂಧನ ಕಾನೂನುಬಾಹಿರವಾಗಿತ್ತು. ನಾನು ಮಾನಸಿಕವಾಗಿ ಸ್ಥಿರವಾಗಿಲ್ಲದಿದ್ದರೆ, ನನ್ನನ್ನು ವೈದ್ಯರ ಬಳಿಗೆ ಕರೆದೊಯ್ಯಬೇಕಿತ್ತು. ನಾನು ಯಾವಾಗಲೂ ಒತ್ತಡದಲ್ಲಿದ್ದೇನೆ. ಏನು ಮಾಡಬೇಕೆಂದು ನನಗೆ ತಿಳಿದಿಲ್ಲ. ನಾನು ನನ್ನ ಬಾರ್ ಪರೀಕ್ಷೆಯಲ್ಲಿ ಉತ್ತೀರ್ಣನಾಗಿ ನಂತರ ರಕ್ಷಣಾ ಅರ್ಜಿಗೆ ಅರ್ಜಿ ಸಲ್ಲಿಸಬೇಕೇ?’ ಕುಟುಂಬವು ತನ್ನ ಹಣವನ್ನು ಸಹ ಕಸಿದುಕೊಂಡಿದೆ ಎಂದು ಅವರು ಹೇಳಿದರು.
ನಾನು ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡರೆ, ಅವರು ನನ್ನನ್ನು ಅತ್ಯಾಚಾರ ಅಥವಾ ಕೊಲೆ ಪ್ರಕರಣದಲ್ಲಿ ಸಿಲುಕಿಸುವುದಾಗಿ ಅವರು ನನಗೆ ಬೆದರಿಕೆ ಹಾಕುತ್ತಾರೆ .
ಯಾರಾದರೂ, ದಯವಿಟ್ಟು ನನಗೆ ಸಹಾಯ ಮಾಡಿ. ಯಾರಾದರೂ, ದಯವಿಟ್ಟು ನನ್ನನ್ನು ಉಳಿಸಿ,” ಅಖಿಲ್ ಹೇಳಿದರು. ತನ್ನ ಮಗಳು ನಿಜವಾಗಿಯೂ ತನ್ನವಳೇ ಎಂದು ತನಗೆ ತಿಳಿದಿಲ್ಲ ಎಂದು ಅವರು ಹೇಳುತ್ತಾರೆ.
ಅಖಿಲ್ ತಂದೆ ಮೊಹಮ್ಮದ್ ಮುಸ್ತಾಫ, ತಾಯಿ ರಜಿಯಾ ಸುಲ್ತಾನಾ ಸೇರಿದಂತೆ ನಾಲ್ವರು ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮೃತ ಅಖಿಲ್ ಅಖ್ತರ್ನ ಮೊಬೈಲ್ ಹಾಗೂ ಸೋಷಿಯಲ್ ಮೀಡಿಯಾ ವಿಡಿಯೋಗಳನ್ನು ಪರಿಶೀಲಿಸಲಾಗುತ್ತಿದೆ.