February 14, 2026
Saturday, February 14, 2026
spot_img

ಭಾರತ-ಬಾಂಗ್ಲಾ ಸಂಬಂಧ ಮತ್ತೆ ಸರಿಯಾಗುತ್ತಾ? ಈ ಕುರಿತು BNP ಅಧ್ಯಕ್ಷ ತಾರಿಕ್ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್ :

ಬಾಂಗ್ಲಾದೇಶ ಚುನಾವಣೆಯಲ್ಲಿ ಗೆದ್ದ ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷದ (BNP) ಅಧ್ಯಕ್ಷ ತಾರಿಕ್ ರೆಹಮಾನ್ ,ಮೊದಲ ಬಾರಿಗೆ ಭಾರತ-ಬಾಂಗ್ಲಾದೇಶ ಸಂಬಂಧಗಳ ಕುರಿತು ಮಾತನಾಡಿದ್ದು, ನಮಗೆ ಬಾಂಗ್ಲಾದೇಶ ಮತ್ತು ಬಾಂಗ್ಲಾದೇಶದ ಜನರೇ ಮೊದಲು. ಬಾಂಗ್ಲಾದೇಶದ ಜನರಿಗೆ ಯಾವುದು ಉತ್ತಮವೋ ಅದನ್ನೇ ನಮ್ಮ ವಿದೇಶಾಂಗ ನೀತಿಯನ್ನು ನಿರ್ಧರಿಸುತ್ತದೆ ಎಂದು ಹೇಳಿದ್ದಾರೆ.

ಮಾರ್ಗಗಳು ಮತ್ತು ಆಲೋಚನೆಗಳು ಭಿನ್ನವಾಗಿರಬಹುದು. ಆದರೆ ದೇಶದ ಹಿತಾಸಕ್ತಿಯಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಇರಬೇಕು. ರಾಷ್ಟ್ರೀಯ ಏಕತೆ ಸಾಮೂಹಿಕ ಶಕ್ತಿಯಾಗಿದೆ, ಆದರೆ ವಿಭಜನೆ ದೌರ್ಬಲ್ಯವೆಂದು ಸಾಬೀತುಪಡಿಸುತ್ತದೆ ಎಂದು ಅವರು ಹೇಳಿದರು.

ಈ ವೇಳೆ ರೆಹಮಾನ್ ತಮ್ಮ ಬೆಂಬಲಿಗರಿಗೆ ಧನ್ಯವಾದ ಅರ್ಪಿಸಿದ್ದು ಜನಾದೇಶವನ್ನು ಪ್ರಜಾಪ್ರಭುತ್ವದ ಆಕಾಂಕ್ಷೆಗಳಿಗೆ ಸಿಕ್ಕ ಗೆಲುವು ಎಂದು ಬಣ್ಣಿಸಿದರು.

ಮುಂದಿನ ಪ್ರಯಾಣ ಸುಲಭವಲ್ಲ. ತಮ್ಮ ಹೊಸ ಸರ್ಕಾರ ರಚನೆ ಬಳಿಕ ದೇಶದಲ್ಲಿ ಪ್ರಜಾಪ್ರಭುತ್ವವನ್ನು ಸ್ಥಾಪಿಸುವ ಹಾದಿಯನ್ನು ಸಿದ್ಧಪಡಿಸಲಾಗಿದೆ ಎಂದರು.

ಇನ್ನು ಚೀನಾದೊಂದಿಗಿನ ಸಂಬಂಧಗಳ ಬಗ್ಗೆ ಕೇಳಿದಕ್ಕೆ ಚೀನಾ ಈಗಾಗಲೇ ಬಾಂಗ್ಲಾದೇಶದಲ್ಲಿ ಹಲವಾರು ಅಭಿವೃದ್ಧಿ ಯೋಜನೆಗಳಲ್ಲಿ ತೊಡಗಿಸಿಕೊಂಡಿದೆ. ಇನ್ನಷ್ಟು ಸುಧಾರಿಸಲು ನಾವು ಒಟ್ಟಾಗಿ ಕೆಲಸ ಮಾಡಲು ಆಶಿಸುತ್ತೇವೆ ಎಂದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !