April 8, 2026
Wednesday, April 8, 2026
spot_img

‘ಕಾಟೇರ’ ಜೋಡಿ ಮತ್ತೆ ಒಂದಾಗುತ್ತಾ? ದರ್ಶನ್ ಬಗ್ಗೆ ಮೌನ ಮುರಿದ ತರುಣ್ ಸುಧೀರ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟ ದರ್ಶನ್ ಮತ್ತು ನಿರ್ದೇಶಕ ತರುಣ್ ಸುಧೀರ್ ಜೋಡಿಯ ‘ಕಾಟೇರ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸೃಷ್ಟಿಸಿದ ಧೂಳೆಬ್ಬಿಸುವ ಯಶಸ್ಸು ಎಲ್ಲರಿಗೂ ತಿಳಿದಿದೆ. ಈಗ ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ವಾಸ ಅನುಭವಿಸುತ್ತಿದ್ದರೂ, ಅಭಿಮಾನಿಗಳು ಮಾತ್ರ ಈ ಜೋಡಿಯ ಮುಂದಿನ ಸಿನಿಮಾದ ನಿರೀಕ್ಷೆಯಲ್ಲಿದ್ದಾರೆ. ಆ ನಿರೀಕ್ಷೆಗೆ ಈಗ ತರುಣ್ ಸುಧೀರ್ ಅವರ ಮಾತುಗಳು ಮತ್ತಷ್ಟು ಜೀವ ತುಂಬಿವೆ.

ಸದ್ಯದ ಸಂಕಷ್ಟದ ಪರಿಸ್ಥಿತಿಯ ನಡುವೆಯೂ ದರ್ಶನ್ ಅವರ ಮೇಲೆ ತಮಗಿರುವ ವಿಶ್ವಾಸವನ್ನು ತರುಣ್ ಸುಧೀರ್ ವ್ಯಕ್ತಪಡಿಸಿದ್ದಾರೆ. “ದರ್ಶನ್ ಅವರು ಆದಷ್ಟು ಬೇಗ ಈ ಕಷ್ಟದ ದಿನಗಳಿಂದ ಹೊರಬರಲಿ ಎಂದು ಕಾಯುತ್ತಿದ್ದೇನೆ. ಅವರು ಯಾವಾಗ ಕರೆದು ಸಿನಿಮಾ ಮಾಡೋಣ ಎನ್ನುತ್ತಾರೋ, ಅದರ ಮರುದಿನವೇ ನಾನು ಕೆಲಸ ಆರಂಭಿಸಲು ಸಿದ್ಧನಿದ್ದೇನೆ. ಅವರಿಗಾಗಿ ಸ್ಕ್ರಿಪ್ಟ್ ಕೂಡ ಸಿದ್ಧಪಡಿಸಿಟ್ಟುಕೊಳ್ಳುತ್ತೇವೆ” ಎಂದು ಹೇಳುವ ಮೂಲಕ ದರ್ಶನ್ ಅವರ ಕಮ್‌ಬ್ಯಾಕ್ ಬಗ್ಗೆ ಭರವಸೆಯ ಮಾತುಗಳನ್ನಾಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !