Friday, January 9, 2026

ಫೆಬ್ರವರಿ 1 ಭಾನುವಾರವೇ ಮಂಡನೆಯಾಗುತ್ತಾ ಮೋದಿ ಸರಕಾರದ ಬಜೆಟ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

2026ರ ಕೇಂದ್ರ ಬಜೆಟ್ ಅನ್ನು ಮಂಡಿಸಲು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಿದ್ಧತೆ ನಡೆಸುತ್ತಿದ್ದು, ಇದೀಗ ಫೆಬ್ರವರಿ 1ರಂದು ಭಾನುವಾರ ಮಂಡಿಸುವ ಸಾಧ್ಯತೆ ಇದೆ.

2025ರಲ್ಲಿ ಮಂಡಿಸಲಾದ ಮೊದಲ ಪೂರ್ಣ ಬಜೆಟ್ ಬಳಿಕ ಇದು ಮೋದಿ 3.0 ಸರ್ಕಾರದ ಎರಡನೇ ಪೂರ್ಣ ಬಜೆಟ್ ಆಗಲಿದೆ. ಜೊತೆಗೆ ನಿರ್ಮಲಾ ಸೀತಾರಾಮನ್ ಅವರ
ದಾಖಲೆಯ ಸತತ ಒಂಬತ್ತನೇ ಬಜೆಟ್ ಮಂಡನೆಯಾಗಿದೆ.

2017ರ ಬಳಿಕ ಮೋದಿ ಸರ್ಕಾರ ಬಜೆಟ್ ಮಂಡನೆ ದಿನವನ್ನು ಫೆಬ್ರವರಿ 1 ಎಂದು ನಿಗದಿ ಪಡಿಸಿತ್ತು. ಇದಕ್ಕೂ ಮೊದಲು ಫೆಬ್ರವರಿ 28ರಂದು ಬಜೆಟ್ ಮಂಡನೆ ಮಾಡಲಾಗುತ್ತಿತ್ತು.

2026ರ ಬಜೆಟ್ ನಲ್ಲಿ ಹೆಚ್ಚಿನ ತೆರಿಗೆಗಳು, ಜೀವನ ವೆಚ್ಚ ಮತ್ತು ಮನೆಯ ಹಣಕಾಸುಗಳ ಮೇಲೆ ಪರಿಣಾಮ ಬೀರುವ ಯೋಜನೆಗಳ ಮೇಲೆ ಗಮನ ಹರಿಸುವ ಸಾಧ್ಯತೆ ಇದೆ.

ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರು ಸತತ 10 ಕೇಂದ್ರ ಬಜೆಟ್‌ ಮಂಡಿಸಿರುವುದು ಈಗಾಗಲೇ ದಾಖಲೆಯಾಗಿ ಉಳಿದಿದೆ. 2024ರ ಮಧ್ಯಂತರ ಬಜೆಟ್ ಸೇರಿದಂತೆ ಈಗಾಗಲೇ ಎಂಟು ಸತತ ಬಜೆಟ್‌ಗಳನ್ನು ಮಂಡಿಸಿದ ನಿರ್ಮಲಾ ಸೀತಾರಾಮನ್ ಮಂಡಿಸಿದ್ದಾರೆ. ಒಂದೇ ಪ್ರಧಾನ ಮಂತ್ರಿಯ ಅಧಿಕಾರಾವಧಿಯಲ್ಲಿ ಸತತ ಒಂಬತ್ತು ಬಜೆಟ್‌ಗಳನ್ನು ಮಂಡಿಸಿದ ಏಕೈಕ ಹಣಕಾಸು ಸಚಿವರು ಎನ್ನುವ ಖ್ಯಾತಿಗೆ ಇವರು ಪಾತ್ರರಾಗಲಿದ್ದಾರೆ.

ಸ್ವಾತಂತ್ರ್ಯ ಭಾರತದ ಮೊದಲ ಕೇಂದ್ರ ಬಜೆಟ್ ಅನ್ನು 1947ರ ನವೆಂಬರ್ 26ರಂದು ದೇಶದ ಮೊದಲ ಹಣಕಾಸು ಸಚಿವ ಆರ್.ಕೆ. ಷಣ್ಮುಖಂ ಚೆಟ್ಟಿ ಮಂಡಿಸಿದ್ದರು. ಇದರ ಬಳಿಕ ಹಲವು ದಶಕಗಳವರೆಗೆ ಫೆಬ್ರವರಿಯ ಕೊನೆಯ ಕೆಲಸದ ದಿನದಂದು ಬಜೆಟ್ ಮಂಡನೆ ಮಾಡಲಾಗುತ್ತಿತ್ತು.

ಇದರ ಬಳಿಕ 1999ರಲ್ಲಿ ಹಣಕಾಸು ಸಚಿವರಾಗಿದ್ದ ಯಶವಂತ್ ಸಿನ್ಹಾ ಅವರು ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ಬಜೆಟ್ ಮಂಡನೆಯ ಸಮಯವನ್ನು ಬೆಳಗ್ಗೆ 11 ಗಂಟೆಗೆ ಬದಲಾಯಿಸಿದರು. ಈ ಸಮಯ ಈಗಲೂ ಮುಂದುವರಿದಿದೆ. ಆದರೆ ಬಜೆಟ್ ಮಂಡನೆ ದಿನಾಂಕವನ್ನು 2017ರಲ್ಲಿ ಸಂಸತ್ತಿನ ಅನುಮೋದನೆಯೊಂದಿಗೆ ಫೆಬ್ರವರಿ 1ಕ್ಕೆ ಬದಲಾಯಿಸಲಾಯಿತು.

ಏಪ್ರಿಲ್ 1ರಿಂದ ಹಣಕಾಸು ವರ್ಷದ ಆರಂಭವಾಗುವುದರಿಂದ ಇದರೊಂದಿಗೆ ಹೊಂದಿಕೆಯಾಗಲು ಯೋಜನೆಗಳ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಬಜೆಟ್ ದಿನಾಂಕವನ್ನು ಫೆಬ್ರವರಿ 28ರ ಬದಲು ಫೆಬ್ರವರಿ 1ಕ್ಕೆ ನಿಗದಿಪಡಿಸಿತ್ತು.

error: Content is protected !!