March 12, 2026
Thursday, March 12, 2026
spot_img

ಬಾಂಗ್ಲಾ ಭವಿಷ್ಯ ಬದಲಿಸಲಿದೆಯೇ ಈ ಚುನಾವಣೆ? ಗೆಲುವಿನ ಹೊಸ್ತಿಲಲ್ಲಿ ಬಿಎನ್‌ಪಿ ಪಡೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶೇಖ್ ಹಸೀನಾ ಸರ್ಕಾರದ ಪತನದ ನಂತರ ಬಾಂಗ್ಲಾದೇಶದಲ್ಲಿ ನಡೆದ ಮೊದಲ ಐತಿಹಾಸಿಕ ಸಾರ್ವತ್ರಿಕ ಚುನಾವಣೆಯ ಫಲಿತಾಂಶದ ಚಿತ್ರಣ ಈಗ ಅಂತಿಮ ಹಂತಕ್ಕೆ ತಲುಪಿದೆ. ಮತ ಎಣಿಕೆಯ ಆರಂಭಿಕ ಟ್ರೆಂಡ್‌ಗಳಲ್ಲಿ ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷ ಸ್ಪಷ್ಟ ಬಹುಮತದ ಗಡಿಯನ್ನು ದಾಟಿದ್ದು, ಅಧಿಕೃತ ಘೋಷಣೆಯಷ್ಟೇ ಬಾಕಿ ಉಳಿದಿದೆ.

ಬಿಎನ್‌ಪಿ ಮತ್ತು ಜಮಾತ್‌-ಇ-ಇಸ್ಲಾಮಿ ನೇತೃತ್ವದ ಮೈತ್ರಿಕೂಟಗಳ ನಡುವೆ ಈ ಚುನಾವಣೆಯಲ್ಲಿ ತೀವ್ರ ಪೈಪೋಟಿ ಕಂಡುಬಂದಿದೆ. ಆದರೆ, ಮತೆಣಿಕೆ ಪ್ರಕ್ರಿಯೆ ನಡೆಯುತ್ತಿರುವಾಗಲೇ ರಾಜಕೀಯ ಆರೋಪ-ಪ್ರತ್ಯಾರೋಪಗಳು ತಾರಕಕ್ಕೇರಿವೆ.

ಮತ ಎಣಿಕೆ ವಿಳಂಬವಾಗುತ್ತಿರುವುದನ್ನು ಖಂಡಿಸಿರುವ ಬಾಂಗ್ಲಾದೇಶ ಜಮಾತ್-ಇ-ಇಸ್ಲಾಮಿ, ಚುನಾವಣಾ ಆಯೋಗವು ಉದ್ದೇಶಪೂರ್ವಕವಾಗಿ ಫಲಿತಾಂಶ ತಡೆಹಿಡಿಯುತ್ತಿದೆ ಎಂದು ಕಿಡಿಕಾರಿದೆ. “ಗುರುವಾರ ಸಂಜೆ 5 ಗಂಟೆಯಿಂದಲೇ ಎಣಿಕೆ ಶುರುವಾಗಿದ್ದರೂ, ಮರುದಿನ ಬೆಳಿಗ್ಗೆಯಾದರೂ ಆಯೋಗದ ಅಧಿಕಾರಿಗಳು ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತಿದ್ದಾರೆ,” ಎಂದು ಪಕ್ಷದ ಸಹಾಯಕ ಪ್ರಧಾನ ಕಾರ್ಯದರ್ಶಿ ಅಹ್ಸನುಲ್ ಮಹಬೂಬ್ ಜುಬೈರ್ ಢಾಕಾದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಸೀನಾ ಆಡಳಿತದ ಅಂತ್ಯದ ನಂತರ ಅಧಿಕಾರಕ್ಕೆ ಬರಲಿರುವ ಹೊಸ ಸರ್ಕಾರವು ಬಾಂಗ್ಲಾದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಆಶಯಗಳಲ್ಲಿ ಮಹತ್ವದ ಬದಲಾವಣೆಗಳನ್ನು ತರುವ ಸಾಧ್ಯತೆಯಿದೆ. ಈ ಫಲಿತಾಂಶವು ಕೇವಲ ಆಡಳಿತ ಬದಲಾವಣೆಯಲ್ಲದೆ, ದೇಶದ ಮೂಲಭೂತ ಕಾನೂನು ಚೌಕಟ್ಟಿನಲ್ಲೇ ಹೊಸ ದಿಕ್ಸೂಚಿಯನ್ನು ಸೃಷ್ಟಿಸುವ ನಿರೀಕ್ಷೆಯಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !