Monday, November 24, 2025

ನಮೋ ಭಾರತ್‌ ರೈಲಿನಲ್ಲಿ ಪಾರ್ಟಿ, ಫೋಟೊಶೂಟ್‌ ಮಾಡ್ಬೋದಾ? ಹೊಸ ರೂಲ್ಸ್‌ನಲ್ಲಿ ಏನಿದೆ?

ಇನ್ಮುಂದೆ ನಮೋ ಭಾರತ್ ರೈಲು ಹಾಗೂ ನಿಲ್ದಾಣದಲ್ಲಿ ಪಾರ್ಟಿ, ಪ್ರಿ-ವೆಡ್ಡಿಂಗ್ ಶೂಟ್ ಮಾಡಬಹುದು!

ಹೌದು, ನಿಗದಿಪಡಿಸಿದ ಬಾಡಿಗೆ ಕೊಟ್ಟರೇ ಖಾಸಗಿ ಕಾರ್ಯಕ್ರಮವನ್ನು ಆಯೋಜಿಸಬಹುದು. ಈ ಕುರಿತು NCRTC ಮಾಹಿತಿ ನೀಡಿದ್ದು, ನಮೋ ಭಾರತ್ ರೈಲು ಹಾಗೂ ನಿಲ್ದಾಣಗಳಲ್ಲಿ ಫೋಟೋಶೂಟ್ ಸೇರಿದಂತೆ ಖಾಸಗಿ ಕಾರ್ಯಕ್ರಮಗಳನ್ನು ಆಯೋಜಿಸಲು ಅವಕಾಶ ನೀಡಿದೆ. ಈ ಮೂಲಕ ಜನರು ತಮ್ಮ ವಿಶೇಷ ದಿನಗಳನ್ನು ರೈಲಿನಲ್ಲಿ ಆಚರಿಸಬಹುದಾಗಿದೆ. ಈ ನಿರ್ಧಾರದಿಂದ ಹೊಸ ಆದಾಯ ಸೃಷ್ಟಿಯಾಗಲಿದ್ದು, ಜನರಿಗೆ ವಿಭಿನ್ನ ಅನುಭವ ನೀಡಲಿದೆಸದ್ಯ ಈ ಯೋಜನೆ ದೆಹಲಿಯಲ್ಲಿಒ ಜಾರಿಯಾಗಿದೆ. 

ಸಾಮಾನ್ಯವಾಗಿ ನೀವು ರೈಲಿನ ಟಿಕೆಟ್ ಬುಕ್ ಮಾಡಿದಂತೆ ಕಾರ್ಯಕ್ರಮಗಳಿಗೆ ಬುಕ್ ಮಾಡಬೇಕು. ಸದ್ಯ ದೆಹಲಿ-ಮೀರತ್ ಕಾರಿಡಾರ್‌ನಲ್ಲಿರುವ ನಮೋ ಭಾರತ್ ರೈಲು ಹಾಗೂ ನಿಲ್ದಾಣದಲ್ಲಿ ಖಾಸಗಿ ಕಾರ್ಯಕ್ರಮ ನಡೆಸಲು ಅವಕಾಶ ನೀಡಲಾಗಿದೆ. ಹುಟ್ಟುಹಬ್ಬ, ಪಾರ್ಟಿ, ಪ್ರಿವೆಡ್ಡಿಂಗ್ ಶೂಟ್ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳನ್ನು ಆಯೋಜಿಸಬಹುದಾಗಿದೆ. ಜೊತೆಗೆ ಯಾವುದೇ ವ್ಯಕ್ತಿಗಳು, ಕಾರ್ಯಕ್ರಮ ಯೋಜಕರು, ಛಾಯಾಗ್ರಾಹಕರು ಮತ್ತು ಮೀಡಿಯಾಗಳು ನಮೋ ಭಾರತ್ ರೈಲುಗಳನ್ನು ಬುಕ್ ಮಾಡಬಹುದು ಎಂದು ಎನ್‌ಸಿಆರ್‌ಟಿಸಿ ತಿಳಿಸಿದೆ.

ದುಹೈ ಡಿಪೋದಲ್ಲಿ ವಿಶೇಷ ಅಣಕು ಕೋಚ್ ಚಿತ್ರೀಕರಣಕ್ಕಾಗಿ ಲಭ್ಯವಿರುತ್ತದೆ. ಗಂಟೆಗೆ 5,000 ರೂ. ನಿಗದಿ ಮಾಡಲಾಗಿದ್ದು, ಪ್ರತಿ ಸೆಟಪ್ ಮತ್ತು ಪ್ಯಾಕ್-ಅಪ್‌ಗಾಗಿ ಹೆಚ್ಚುವರಿ 30 ನಿಮಿಷ ನೀಡಲಾಗುತ್ತದೆ. ಬೆಳಿಗ್ಗೆ 6 ರಿಂದ ರಾತ್ರಿ 11ರವರೆಗೆ ಯಾವುದೇ ಕಾರ್ಯಕ್ರಮ ನಡೆಸಲು ಅವಕಾಶವಿರುತ್ತದೆ. ಇನ್ನೂ ಇದಕ್ಕೆ ಕೆಲವು ನಿರ್ಬಂಧಗಳಿದ್ದು, ರೈಲಿನಲ್ಲಿ ಅಲಂಕಾರಿಕ ವಸ್ತುಗಳನ್ನು ಉಪಯೋಗಿಸಲು ಕೆಲವು ನಿಯಮಗಳಿವೆ. ರೈಲಿಗೆ ಹಾಗೂ ನಿಲ್ದಾಣಕ್ಕೆ ಹಾನಿ ಮಾಡುವಂತಹ ಯಾವುದೇ ವಸ್ತುಗಳನ್ನು ಬಳಸುವಂತಿಲ್ಲ. ಕಾರ್ಯಕ್ರಮ ಅಥವಾ ಯಾವುದೇ ಫೋಟೋಶೂಟ್ ಸಮಯದಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿರುತ್ತದೆ. ಇದರಿಂದ ಪ್ರಯಾಣಿಕರಿಗೆ ಯಾವುದೇ ರೀತಿಯ ಅನಾನುಕೂಲತೆ ಉಂಟುಮಾಡುವಂತಿಲ್ಲ.

error: Content is protected !!