Tuesday, September 16, 2025

ಮಾನವ ಬುರುಡೆ ಸಿಕ್ಕಿದ ಸ್ಥಳದಲ್ಲಿ ವಾಮಾಚಾರದ ಕುಡಿಕೆ: ಎಸ್‌ಐಟಿಗೆ ಒಗಟಾಗಿ ಕಾಡುತ್ತಿದೆ ಬಂಗ್ಲೆಗುಡ್ಡೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:


ಧರ್ಮಸ್ಥಳ ಪ್ರಕರಣ ದಿನದಿಂದ ದಿನಕ್ಕೆ ಹೊಸ ಆಯಾಮ ಪಡೆದುಕೊಳ್ಳುತ್ತಿದ್ದು, ಬಂಗ್ಲೆಗುಡ್ಡೆ ರಹಸ್ಯ ಎಸ್‌ಐಟಿಗೆ ಬಿಡಿಸಲಾಗದ ಒಗಟಾಗಿ ಕಾಡುತ್ತಿದೆ!


ತಲೆಬುರುಡೆ ಮೂಲ ಶೋಧಕ್ಕೆ ತೆರಳಿದ ಸಂದರ್ಭ ಬಂಗ್ಲೆಗುಡ್ಡೆ ಪರಿಸರದಲ್ಲಿ ಪತ್ತೆಯಾಗಿರುವ ಹಲವು ಮಾನವ ದೇಹಗಳ ಅವಶೇಷಗಳು, ಮಗುವಿನದ್ದು ಎಂದು ಶಂಕಿಸಲಾಗಿರುವ ಮೂಳೆ ಹಾಗೂ ವಾಮಾಚಾರದ ಶಂಕೆ ಹುಟ್ಟಿಸಿರುವ ಸ್ಥಳದಲ್ಲಿರುವ ಕೆಲವು ಪರಿಕರಗಳು ಎಸ್‌ಐಟಿಗೂ ಶಾಕ್ ನೀಡಿದ್ದು, ಈಗ ಇದೇ ಆಯಾಮದಲ್ಲಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿರುವುದು ಕಂಡುಬಂದಿದೆ.
ಇದಕ್ಕೆ ಇಂಬು ಕೊಡುವಂತೆ ಸ್ಥಳೀಯವಾಗಿ ವಾಮಚಾರ ಮಾಡುವವರ ಬಗ್ಗೆ ಮಾಹಿತಿ ಸಂಗ್ರಹಿಸುವ ಪ್ರಯತ್ನವನ್ನು ಅಧಿಕಾರಿಗಳು ನಡೆಸಿದ್ದಾರೆ.


ಕೆಲವು ದಿನಗಳ ಹಿಂದೆ ಬಂಗ್ಲೆಗುಡ್ಡೆ ಪರಿಸರದಲ್ಲಿ ಸ್ಥಳ ಮಹಜರು ನಡೆದ ಬಳಿಕ ಸೌಜನ್ಯ ಅವರ ಸಂಬಂಧಿ ವಿಠಲಗೌಡ ವಿವಿಧ ಮಾಧ್ಯಮಗಳಲ್ಲಿ ಅಲ್ಲಿನ ದೃಶ್ಯಾವಳಿಗಳ ಮಾಹಿತಿ ವಿವರಿಸಿದ್ದರು. ಅದಾದ ಬೆನ್ನಿಗೇ ವಾಮಾಚಾರ ವಿಚಾರ ಮುನ್ನೆಲೆಗೆ ಬಂದಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಅಧಿಕಾರಿಗಳು ವಿವಿಧ ಆಯಾಮಗಳಲ್ಲಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ.


ಕರ್ನಾಟಕ ಅಮಾನವೀಯ ದುಷ್ಟ ಪದ್ಧತಿಗಳು ಮತ್ತು ಮಾಟಮಂತ್ರ ತಡೆಗಟ್ಟುವಿಕೆ ಮತ್ತು ನಿರ್ಮೂಲನೆ ಕಾಯ್ದೆ, ೨೦೧೭ರ ಅಡಿಯಲ್ಲಿ ವಾಮಾಚಾರಕ್ಕೆ ನಿಷೇಧವಿದ್ದು, ಬಂಗ್ಲೆಗುಡ್ಡೆಯಲ್ಲಿ ನಡೆದಿರುವುದು ವಾಮಾಚಾರ ಎಂಬುದು ಖಚಿತವಾದರೆ ಪ್ರಕರಣ ಮತ್ತೊಂದು ಹೊಸ ತಿರುವು ಪಡೆದುಕೊಳ್ಳುವುದು ಸ್ಪಷ್ಟವಾಗಿದೆ.

ಇದನ್ನೂ ಓದಿ