ಹೊಸದಿಗಂತ ವರದಿ ಹುಬ್ಬಳ್ಳಿ:
ಮಹಿಳೆ ವಿವಸ್ತ್ರ ಸೇರಿದಂತೆ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ದಾಖಲಾದ ಹಲವು ಪ್ರಕರಣಗಳ ಕುರಿತು
ಹುಬ್ಬಳ್ಳಿಗೆ ಆಗಮಿಸಿದ ಸಿಐಡಿ ಅಧಿಕಾರಿ ಶಾಲೋ ನೇತೃತ್ವದ ಎರಡು ತಂಡ ತನಿಖೆ ಚುರುಕು ಗೊಳಿಸಿದೆ.
ಐಪಿಎಸ್ ದರ್ಜೆಯ ಅಧಿಕಾರಿಯ ನೇತೃತ್ವದ ತಂಡವಾಗಿದೆ. ಕೇಶ್ವಾಪುರ ಪೊಲೀಸ್ ಠಾಣೆಗೆ ಭೇಟಿ ನೀಡಿದ ಅವರು, ಪೊಲೀಸರಿಂದ ಕಡತಗಳನ್ನು ಪಡೆದರು.
ಜನವರಿ 2 ರಂದು ಇಲ್ಲಿಯವರೆಗೂ ಇದೇ ಪ್ರಕರಣದಲ್ಲಿ 6 ಎಫ್ ಐಆರ್ ದಾಖಲಾಗಿದೆ. ಈ ಎಲ್ಲ ಪ್ರಕರಣಗಳ ಕಡತಗಳನ್ನು ಸಂಗ್ರಹಿಸಿ ತನಿಖೆ ಮಾಡಲಿದ್ದಾರೆ.
ಬಿಜೆಪಿ ವಿರೋಧ: ಸುಜತಾ ಹಂಡಿ ವಿವಸ್ತ್ರ ಪ್ರಕರಣವನ್ನ ರಾಜ್ಯ ಸರ್ಕಾರ ಸಿಐಡಿ ಗೆ ನೀಡಿರುವುದಕ್ಕೆ ವಿರೋಧ ವ್ಯಕ್ತವಾಗಿದ್ಧು ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆಗೆ ಒತ್ತಾಯಿಸಿದ ಬೆನ್ನಲ್ಲೇ ಇದಕ್ಕೆ ರಾಜ್ಯ ಸರ್ಕಾರ ತನ್ನ ನಿರ್ಧಾರದಂತೆ ತನಿಖೆಗೆ ಮುಂದಾಗಿದೆ.
ಮಹಿಳೆ ವಿವಸ್ತ್ರ ಕೇಸ್: ಸಿಐಡಿಯಿಂದ ತನಿಖೆ ಚುರುಕು

