ಮಹಿಳೆಯರ ದೇಹದಲ್ಲಿ ಬಿಳಿಮುಟ್ಟು (ವೈಟ್ ಡಿಸ್ಚಾರ್ಜ್) ಹೋಗುವುದು ಸಹಜ ಪ್ರಕ್ರಿಯೆ. ಇದು ಗರ್ಭಾಶಯವನ್ನು ಸ್ವಚ್ಛವಾಗಿಡಲು ದೇಹವೇ ರೂಪಿಸಿಕೊಂಡಿರುವ ವ್ಯವಸ್ಥೆ. ಆದರೆ ಕೆಲ ಸಂದರ್ಭಗಳಲ್ಲಿ ಈ ಬಿಳುಪು ಪ್ರಮಾಣ, ಬಣ್ಣ ಅಥವಾ ವಾಸನೆ ಬದಲಾಗಿದ್ರೆ, ಅದು ದೇಹದೊಳಗಿನ ಬದಲಾವಣೆಯ ಸೂಚನೆ ಆಗಿರಬಹುದು. ಯಾವುದು ಸಹಜ, ಯಾವುದು ಎಚ್ಚರಿಕೆಯ ಗಂಟೆ ಎಂಬುದನ್ನು ತಿಳಿದುಕೊಳ್ಳುವುದು ಅಗತ್ಯ.
ಸಾಮಾನ್ಯವಾಗಿ ಬಿಳುಪು ಹೆಚ್ಚಾಗುವ ಸಂದರ್ಭಗಳು
- ಓವ್ಯೂಲೇಷನ್ ಸಮಯದಲ್ಲಿ: ಮುಟ್ಟಾದ 13–14ನೇ ದಿನಗಳಲ್ಲಿ ಅಂಡೋತ್ಪತ್ತಿ ಆಗುವಾಗ ಬಿಳುಪು ಹೆಚ್ಚಾಗುವುದು ಸಹಜ. ಇದು ಗರ್ಭಧಾರಣೆಗೆ ಅನುಕೂಲಕರ ಲಕ್ಷಣ.
- ಗರ್ಭಧಾರಣೆಯ ಅವಧಿಯಲ್ಲಿ: ಎರಡನೇ ಹಾಗೂ ಮೂರನೇ ತ್ರೈಮಾಸಿಕದಲ್ಲಿ ಹೆಚ್ಚು ಬಿಳುಪು ಹೋಗಬಹುದು. ಇದು ಮಗುವಿನ ಸುರಕ್ಷೆಗೆ ಸಹಾಯಕ.
- ಲೈಂಗಿಕ ಆಸಕ್ತಿ ಅಥವಾ ಕ್ರಿಯೆ ವೇಳೆ: ಲ್ಯೂಬ್ರಿಕೇಷನ್‌ಗಾಗಿ ದ್ರವ ರೂಪದಲ್ಲಿ ಬಿಳುಪು ಹೋಗುವುದು ಸಹಜ.
- ಗರ್ಭನಿರೋಧಕ ವಿಧಾನ ಬಳಕೆ: ಹಾರ್ಮೋನಲ್ ಬದಲಾವಣೆಯಿಂದ ಬಿಳುಪು ಪ್ರಮಾಣ ಹೆಚ್ಚಬಹುದು.
- ಮೆನೋಪಾಸ್ ಹಂತದಲ್ಲಿ: ಹಾರ್ಮೋನ್‌ಗಳ ಏರುಪೇರಿನಿಂದ 50 ವರ್ಷ ಮೇಲ್ಪಟ್ಟ ಮಹಿಳೆಯರಲ್ಲಿ ಬಿಳುಪು ಕಾಣಿಸಬಹುದು.
ಯಾವಾಗ ನಿರ್ಲಕ್ಷ್ಯ ಮಾಡಬಾರದು?
- ದಪ್ಪ ಬಿಳುಪು, ತೀವ್ರ ತುರಿಕೆ ಇದ್ದರೆ ಅದು ಯೀಸ್ಟ್ ಸೋಂಕಿನ ಲಕ್ಷಣವಾಗಿರಬಹುದು.
- ಕಂದು, ಹಸಿರು ಅಥವಾ ದುರ್ವಾಸನೆಯ ಬಿಳುಪು ಬ್ಯಾಕ್ಟೀರಿಯಾ ಅಥವಾ ಲೈಂಗಿಕ ಸೋಂಕಿನ ಸೂಚನೆ.
- ಗುಳ್ಳೆಗಳು, ನೋವು, ಸುಡುವಿಕೆ ಇದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.
ದೇಹದ ಈ ಬದಲಾವಣೆಗಳನ್ನು ಗಮನಿಸುವುದು ಆರೋಗ್ಯದತ್ತ ಮೊದಲ ಹೆಜ್ಜೆ. ಅನುಮಾನವಾದರೆ ತಡ ಮಾಡದೇ ಸ್ತ್ರೀರೋಗ ತಜ್ಞರ ಸಲಹೆ ಪಡೆಯುವುದು ಅತ್ಯಂತ ಮುಖ್ಯ.(Disclaimer: ಈ ಲೇಖನವು ಅಂತರ್ಜಾಲ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ. ಇದು ವೈದ್ಯಕೀಯ ಸಲಹೆಯಲ್ಲ. ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ.)
ಇದನ್ನೂ ಓದಿ:

