ಮಹಿಳೆಯರಲ್ಲಿ ಗರ್ಭಾಶಯದ ಒಳಭಾಗದ ಮೇಲೆ ಬೆಳೆಯುವ ಕೋಶಗಳಿಂದ ಉಂಟಾಗುವ ಕ್ಯಾನ್ಸರ್‌ನ ಪ್ರಕಾರವೇ ಎಂಡೋಮೆಟ್ರಿಯಲ್ ಕ್ಯಾನ್ಸರ್ ಎಂದು ಕರೆಯಲಾಗುತ್ತದೆ. ಇದು ಗರ್ಭಾಶಯದ ಒಳಪದರ
ಅಥವಾ ಎಂಡೋಮೆಟ್ರಿಯಮ್‌ನಲ್ಲಿ ಉಂಟಾಗುತ್ತದೆ. ಸಾಮಾನ್ಯವಾಗಿ ಇದು ಮೆನೋಪಾಸ್‌ನ ನಂತರದ ಮಹಿಳೆಯರಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತದೆ, ಆದರೆ ಕೆಲವೊಮ್ಮೆ ಕಿರಿಯ ವಯಸ್ಸಿನವರಲ್ಲೂ ಕಾಣಿಸಿಕೊಳ್ಳಬಹುದು.
ಲಕ್ಷಣಗಳು ಗುರುತಿಸಬೇಕು:
ಎಂಡೋಮೆಟ್ರಿಯಲ್ ಕ್ಯಾನ್ಸರ್‌ನ ಆರಂಭಿಕ ಲಕ್ಷಣಗಳನ್ನು ಅನೇಕರೂ ಸಾಮಾನ್ಯ ಸಮಸ್ಯೆ ಎಂದು ನಿರ್ಲಕ್ಷಿಸುತ್ತಾರೆ. ಮಾಸಿಕ ಚಕ್ರದ ಹೊರತಾಗಿ ರಕ್ತಸ್ರಾವವಾಗುವುದು, ಮೆನೋಪಾಸ್ ನಂತರವೂ ರಕ್ತಸ್ರಾವವಾಗುವುದು, ಹೊಟ್ಟೆ ನೋವು, ತೂಕ ಕಡಿಮೆಯಾಗುವುದು, ಕಡಿಮೆ ಹಸಿವು ಮತ್ತು ಹೊಟ್ಟೆಯಲ್ಲಿ ಉಬ್ಬರ ಇವು ಮುಖ್ಯ ಲಕ್ಷಣಗಳಾಗಿವೆ. ಕೆಲವರು ಮೂತ್ರ ವಿಸರ್ಜನೆ ಸಮಯದಲ್ಲಿ ನೋವು ಅಥವಾ ಒತ್ತಡದ ಭಾವನೆ ಅನುಭವಿಸುತ್ತಾರೆ. ಇಂತಹ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅತ್ಯಂತ ಮುಖ್ಯ.
ತಡೆಯಲು ತೆಗೆದುಕೊಳ್ಳಬೇಕಾದ ಕ್ರಮಗಳು:
ನಿಯಮಿತ ವ್ಯಾಯಾಮ ಮಾಡುವುದು, ಶರೀರದ ತೂಕವನ್ನು ಸಮತೋಲನದಲ್ಲಿಡುವುದು, ಸಕ್ಕರೆ ಮತ್ತು ಕೊಬ್ಬು ಅಂಶಗಳ ಸೇವನೆಯನ್ನು ಕಡಿಮೆ ಮಾಡುವುದು ಮುಖ್ಯ. ಜನನ ನಿಯಂತ್ರಣ ಗುಳಿಗೆಗಳನ್ನು ವೈದ್ಯಕೀಯ ಸಲಹೆಯಂತೆ ಬಳಸುವುದು ಕೆಲವೊಮ್ಮೆ ಅಪಾಯವನ್ನು ತಗ್ಗಿಸಬಹುದು. ಜೊತೆಗೆ, ಪ್ರತಿ ವರ್ಷ ಗೈನಕಾಲಜಿಕಲ್ ತಪಾಸಣೆ ಮಾಡಿಸಿಕೊಂಡರೆ ಆರಂಭಿಕ ಹಂತದಲ್ಲೇ ಕಾಯಿಲೆ ಪತ್ತೆಯಾಗುವ ಸಾಧ್ಯತೆ ಹೆಚ್ಚಿರುತ್ತದೆ.
ಆರೋಗ್ಯದ ಕಡೆ ನಿರ್ಲಕ್ಷ್ಯ ತೋರದೆ, ಈ ರೀತಿ ಸರಿಯಾದ ತಪಾಸಣೆ ಮತ್ತು ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿದರೆ ಎಂಡೋಮೆಟ್ರಿಯಲ್ ಕ್ಯಾನ್ಸರ್‌ನ ಅಪಾಯವನ್ನು ಬಹುಮಟ್ಟಿಗೆ ತಡೆಯಬಹುದು.(Disclaimer: ಈ ಲೇಖನವು ಅಂತರ್ಜಾಲ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ. ಇದು ವೈದ್ಯಕೀಯ ಸಲಹೆಯಲ್ಲ. ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ.)

