ಹೆರಿಗೆ ನಂತರ ಹಲವು ಮಹಿಳೆಯರು ಗಮನಿಸುವ ಸಾಮಾನ್ಯ ಸಮಸ್ಯೆ ಎಂದರೆ ಕೂದಲು ಹೆಚ್ಚಾಗಿ ಉದುರುವುದು. ಗರ್ಭಾವಸ್ಥೆಯಲ್ಲಿ ದಪ್ಪವಾಗಿದ್ದ ಕೂದಲು, ಡೆಲಿವರಿ ಆದ ಕೆಲವು ವಾರಗಳ ಬಳಿಕ ಅಚಾನಕ್ ತೆಳುವಾಗಲು ಆರಂಭಿಸುತ್ತದೆ. ಇದರಿಂದ ಆತಂಕ ಪಡುವ ಅವಶ್ಯಕತೆ ಇಲ್ಲ; ಬಹುತೇಕ ಸಂದರ್ಭಗಳಲ್ಲಿ ಇದು ತಾತ್ಕಾಲಿಕ.
ಹಾರ್ಮೋನ್ ಬದಲಾವಣೆ:
ಗರ್ಭಾವಸ್ಥೆಯಲ್ಲಿ ಈಸ್ಟ್ರೋಜನ್ ಮಟ್ಟ ಹೆಚ್ಚಿರುತ್ತದೆ. ಇದರಿಂದ ಕೂದಲು ಉದುರುವ ಪ್ರಮಾಣ ಕಡಿಮೆಯಾಗುತ್ತದೆ. ಆದರೆ ಹೆರಿಗೆ ಬಳಿಕ ಹಾರ್ಮೋನ್ ಮಟ್ಟ ಹಠಾತ್ ಕುಸಿಯುತ್ತದೆ. ಇದರಿಂದ ಕೂದಲು ಒಟ್ಟಾಗಿ ಉದುರುವಂತೆ ಕಾಣಿಸುತ್ತದೆ.
ಪೋಷಕಾಂಶ ಕೊರತೆ:
ಗರ್ಭಧಾರಣೆ ಮತ್ತು ಹೆರಿಗೆಯ ನಂತರ ದೇಹಕ್ಕೆ ಹೆಚ್ಚುವರಿ ಪೌಷ್ಟಿಕಾಂಶ ಅಗತ್ಯ. ಐರನ್, ಪ್ರೋಟೀನ್ ಮತ್ತು ವಿಟಮಿನ್ ಕೊರತೆಯಿಂದ ಕೂದಲು ದುರ್ಬಲವಾಗಬಹುದು.
ಇದನ್ನೂ ಓದಿ:
ಒತ್ತಡ ಮತ್ತು ನಿದ್ರೆ ಕೊರತೆ:
ಹೊಸ ಮಗುವಿನ ಆರೈಕೆಯಿಂದ ತಾಯಿಗೆ ಸಮರ್ಪಕ ವಿಶ್ರಾಂತಿ ಸಿಗದೇ ಇರಬಹುದು. ಮಾನಸಿಕ ಒತ್ತಡ ಕೂಡ ಕೂದಲು ಉದುರುವಿಕೆಯನ್ನು ಹೆಚ್ಚಿಸುತ್ತದೆ.
ಥೈರಾಯ್ಡ್ ಸಮಸ್ಯೆ:
ಕೆಲವು ಮಹಿಳೆಯರಲ್ಲಿ ಹೆರಿಗೆಯ ನಂತರ ಥೈರಾಯ್ಡ್ ಅಸಮತೋಲನ ಕಾಣಿಸಬಹುದು. ಇದು ಕೂದಲು ಉದುರುವಿಕೆಗೆ ಕಾರಣವಾಗಬಹುದು.
ಸರಿಯಾದ ಆಹಾರ, ವೈದ್ಯರ ಸಲಹೆಯಂತೆ ಪೂರಕ ಔಷಧಿಗಳು, ತಲೆ ತ್ವಚೆಯ ಆರೈಕೆ ಮತ್ತು ಮನಸ್ಸಿಗೆ ವಿಶ್ರಾಂತಿ ನೀಡುವುದು ಮುಖ್ಯ. ಸಾಮಾನ್ಯವಾಗಿ ಆರು ತಿಂಗಳಿಂದ ಒಂದು ವರ್ಷದೊಳಗೆ ಕೂದಲು ಪುನಃ ಸಹಜ ಸ್ಥಿತಿಗೆ ಬರುತ್ತದೆ.



