February 4, 2026
Wednesday, February 4, 2026
spot_img

ಮನೆಯ ಗೋಡೆ ಕುಸಿದು ಸ್ಥಳದಲ್ಲೇ ಪ್ರಾಣಬಿಟ್ಟ ಕಾರ್ಮಿಕರು

ಹೊಸದಿಗಂತ ವರದಿ ನರಗುಂದ: 

ತಾಲೂಕಿನ ಕಲಕೇರಿ ಗ್ರಾಮದಲ್ಲಿ ಮನೆ ಗೋಡೆ ಕುಸಿದು ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ ದುರ್ಘಟನೆ ಮಂಗಳವಾರ ನಡೆದಿದೆ. 

ಕಲಕೇರಿ ಗ್ರಾಮದ ಯಲ್ಲಪ್ಪ ಕೆಳಗೇರಿ ಅವರಿಗೆ ಸೇರಿರುವ ಹಳೆಯ ಮನೆಯ ಗೋಡೆಯನ್ನು ಕೆಡುವುವ ಸಂದರ್ಭದಲ್ಲಿ, ಗೋಡೆ ಏಕಾಏಕಿ ಕಾರ್ಮಿಕರ ಮೇಲೆ ಕುಸಿದು ಬಿದ್ದಿದೆ. ಮಣ್ಣಿನ ಅವಶೇಷದಡಿ ಸಿಲುಕಿದ ನಾಗಪ್ಪ ದೊಡ್ಡಮನಿ (60) ಮತ್ತು ಶೇಖಪ್ಪ ಪರಸಪ್ಪನವರ (55) ಇವರಿಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಈ ಘಟನೆಯಲ್ಲಿ ಇಬ್ಬರು ಕಾರ್ಮಿಕರು ಗಾಯಗೊಂಡಿದ್ದಾರೆ.ಘಟನಾ ಸ್ಥಳಕ್ಕೆ ನರಗುಂದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಕುರಿತು ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !