Saturday, August 30, 2025

World Beer Awards 2025 | ನಾಲ್ಕು ಪ್ರಶಸ್ತಿ ಗೆದ್ದ ಫೇಮಸ್‌ ಬಿಯರ್‌ ಬ್ರ್ಯಾಂಡ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಹೈನೆಕೆನ್ ಕಂಪನಿಯ ಭಾಗವಾಗಿರುವ, ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಯುನೈಟೆಡ್ ಬ್ರೂವರೀಸ್ ಲಿಮಿಟೆಡ್(ಯುಬಿಎಲ್)ನ ಭಾರತದ ಐಕಾನಿಕ್ ಬಿಯರ್ ಕಿಂಗ್‌ಫಿಶರ್, ವರ್ಲ್ಡ್ ಬಿಯರ್ ಪ್ರಶಸ್ತಿ 2025ರಲ್ಲಿ ಒಟ್ಟು ನಾಲ್ಕು ಪ್ರಶಸ್ತಿಗಳನ್ನು ಗೆದ್ದಿದೆ.

ಈ ವರ್ಷದ ಪ್ರಶಸ್ತಿಗಳಲ್ಲಿ, ಕಿಂಗ್‌ಫಿಷರ್ ಅಲ್ಟ್ರಾ ಅಂತರರಾಷ್ಟ್ರೀಯ ಲಾಗರ್‌ನಲ್ಲಿ ಗೋಲ್ಡ್ ಕಂಟ್ರಿ ವಿಜೇತ ಪ್ರಶಸ್ತಿಯನ್ನು ಪಡೆದಿದೆ ಎಂದು ಯುಬಿಎಲ್ ಮಂಗಳವಾರ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದೆ.
ಸೀಸನಲ್ ನಲ್ಲಿ ಕಿಂಗ್‌ಫಿಶರ್ ಸ್ಟ್ರಾಂಗ್ ಬೆಳ್ಳಿ ಗೆದ್ದರೆ, ಕಿಂಗ್‌ಫಿಷರ್ ಪ್ರೀಮಿಯಂ ಹೆಲ್ಲೆಸ್/ಮುಂಚ್ನರ್‌ನಲ್ಲಿ ಲಾಗರ್ ಬೆಳ್ಳಿ ಗೆದ್ದಿದೆ.

ಇದನ್ನೂ ಓದಿ