March 25, 2026
Wednesday, March 25, 2026
spot_img

ಐಡಿ ಕಾರ್ಡ್ ಇಲ್ಲದೆ ಪಬ್‌ಗೆ ಹೋಗ್ತೀರಾ? ಯುವಪೀಳಿಗೆಯ ರಕ್ಷಣೆಗೆ ಹೈಕೋರ್ಟ್ ದಿಟ್ಟ ಹೆಜ್ಜೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನ ಪಬ್ ಮತ್ತು ಬ್ರೀವರಿ ಸಂಸ್ಕೃತಿಗೆ ಕರ್ನಾಟಕ ಹೈಕೋರ್ಟ್ ಈಗ ದೊಡ್ಡ ಬ್ರೇಕ್ ಹಾಕಿದೆ. “ಮಕ್ಕಳು ಮದ್ಯದ ವ್ಯಸನಕ್ಕೆ ಬೀಳಬಾರದು, ಇದು ಕೇವಲ ಕಾನೂನಲ್ಲ, ಪ್ರತಿಯೊಬ್ಬ ಮಾಲೀಕನ ಜವಾಬ್ದಾರಿ” ಅಂತ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ ಗುಡುಗಿದೆ.

ರಾಜರಾಜೇಶ್ವರಿ ನಗರದ ಬ್ರೀವರಿ ಮಾಲೀಕರೊಬ್ಬರು ತಮಗೆ ಹಾಕಿದ್ದ ಕೇಸ್ ರದ್ದು ಮಾಡಿ ಅಂತ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ, “ಅಪ್ರಾಪ್ತರಿಗೆ ಮದ್ಯ ಕೊಟ್ಟರೆ ಸುಮ್ಮನಿರಲ್ಲ” ಅಂತ ನ್ಯಾಯಾಲಯ ಅವರ ಅರ್ಜಿಯನ್ನೇ ವಜಾ ಮಾಡಿದೆ.

ಪಬ್‌ಗಳಿಗೆ ಕೋರ್ಟ್ ಕೊಟ್ಟ ಕಟ್ಟುನಿಟ್ಟಿನ ರೂಲ್ಸ್ ಇವು:

ಗ್ರಾಹಕರು ಒಳಗೆ ಬರುವಾಗಲೇ ವಯಸ್ಸಿನ ಪರೀಕ್ಷೆ ಕಡ್ಡಾಯ.

ಟೇಬಲ್‌ಗೆ ಎಣ್ಣೆ ತರುವಾಗಲೂ ಸರ್ವರ್‌ಗಳು ವಯಸ್ಸಿನ ಬಗ್ಗೆ ಗಮನ ಹರಿಸಬೇಕು.

“ಅಪ್ರಾಪ್ತರಿಗೆ ಮದ್ಯ ನೀಡಲಾಗುವುದಿಲ್ಲ” ಅನ್ನೋ ಬೋರ್ಡ್ ಪ್ರತಿಯೊಂದು ಪಬ್‌ನಲ್ಲೂ ಎದ್ದು ಕಾಣುವಂತಿರಬೇಕು.

ಮಕ್ಕಳು ಕದ್ದುಮುಚ್ಚಿ ಕುಡಿದರೂ ಸಹ, ಅದಕ್ಕೆ ಅಲ್ಲಿನ ಮ್ಯಾನೇಜ್‌ಮೆಂಟ್ ನೇರ ಹೊಣೆ. “ನಮಗೆ ಗೊತ್ತಿಲ್ಲ” ಅಂತ ನುಣುಚಿಕೊಳ್ಳೋಕೆ ಚಾನ್ಸೇ ಇಲ್ಲ ಎಂದು ಸಮಾಜದ ಹಿತದೃಷ್ಟಿಯಿಂದ ಈ ಕ್ರಮ ಅಗತ್ಯ ಅಂತ ಕೋರ್ಟ್ ಸಾರಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !