Friday, November 28, 2025

WPL 2026 ಹರಾಜು | 6.15 ಕೋಟಿಯಲ್ಲಿ 12 ಪ್ಲೇಯರ್ಸ್: ಕೋರ್ ಟೀಮ್ ಮುಂದುವರಿಸಲು RCB ನಿರ್ಧಾರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ವುಮೆನ್ಸ್ ಪ್ರೀಮಿಯರ್ ಲೀಗ್ 2026ರಕ್ಕೆ ಇನ್ನೂ ಸಮಯ ಇದ್ದರೂ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಈಗಾಗಲೇ ತನ್ನ ಗೆಲುವಿನ ಅಸ್ತ್ರಗಳನ್ನು ಕೈಬಿಡದ ತಂತ್ರದೊಂದಿಗೆ ಸಜ್ಜಾಗಿದೆ. ಕಳೆದ ಸೀಸನ್‌ನಲ್ಲಿ ಐತಿಹಾಸಿಕವಾಗಿ ಪ್ರಶಸ್ತಿಯನ್ನು ಗೆದ್ದು ಆತ್ಮವಿಶ್ವಾಸದ ಶಿಖರದಲ್ಲಿರುವ ಆರ್‌ಸಿಬಿ, ಮುಂದಿನ ಸವಾಲಿಗೂ ಅದೇ ಬಲಿಷ್ಠ ಕೋರ್ ತಂಡವನ್ನು ಮುಂದುವರಿಸಲು ನಿರ್ಧರಿಸಿದೆ.

ನಾಯಕಿ ಸ್ಮೃತಿ ಮಂಧಾನ ಸೇರಿದಂತೆ ನಾಲ್ವರು ಪ್ರಮುಖ ಆಟಗಾರ್ತಿಯರನ್ನು ಉಳಿಸಿಕೊಳ್ಳುವ ಮೂಲಕ ತಂಡ ತನ್ನ ನಾಯಕತ್ವ, ಅನುಭವ ಮತ್ತು ಸಮತೋಲನವನ್ನು ಕಾಪಾಡಿಕೊಂಡಿದೆ. ಸ್ಮೃತಿಯನ್ನು 3.5 ಕೋಟಿಗೆ, ರಿಚಾ ಘೋಷ್ ಅವರನ್ನು 2.75 ಕೋಟಿಗೆ, ಎಲಿಸ್ ಪೆರ್ರಿಯನ್ನು 2 ಕೋಟಿಗೆ ಹಾಗೂ ಶ್ರೇಯಾಂಕಾ ಪಾಟೀಲ್ ಅವರನ್ನು 60 ಲಕ್ಷ ರೂಪಾಯಿಗೆ ರಿಟೇನ್ ಮಾಡಿಕೊಳ್ಳಲಾಗಿದ್ದು, ಒಟ್ಟು 8.85 ಕೋಟಿ ವೆಚ್ಚವಾಗಿದೆ. ಉಳಿದವರನ್ನ ಹರಾಜಿನಲ್ಲಿ ತಂಡವು 6.15 ಕೋಟಿ ವೆಚ್ಚ ಮಾಡಿ ಖರೀದಿಸಿತು.

ಉಳಿದ ಹಣವನ್ನು ಹರಾಜಿನಲ್ಲಿ ಪರಿಣಾಮಕಾರಿಯಾಗಿ ಬಳಸಿ ಹೊಸ ಪ್ರತಿಭೆಗಳನ್ನು ತಂಡಕ್ಕೆ ಸೇರಿಸಿಕೊಂಡಿರುವ ಆರ್‌ಸಿಬಿ, 16 ಆಟಗಾರರ ಸಮತೋಲನದ ತಂಡವನ್ನು ರೂಪಿಸಿದೆ. ಮೆಗಾ ಹರಾಜಿಯಲ್ಲಿ ಲಾರೆನ್ ಬೆಲ್‌ಗೆ 90 ಲಕ್ಷ ನೀಡಿ ದೊಡ್ಡ ಖರೀದಿ ಮಾಡಿರುವುದು ಗಮನ ಸೆಳೆದಿದ್ದು, ಪೂಜಾ ವಸ್ತ್ರಾಕರ್, ಅರುಂಧತಿ ರೆಡ್ಡಿ, ರಾಧಾ ಯಾದವ್ ಸೇರಿದಂತೆ ಇನ್ನಷ್ಟು ಪ್ರಮುಖ ಆಟಗಾರ್ತಿಯರು ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಈ ಎಲ್ಲ ತೀರ್ಮಾನಗಳು 2026ರಲ್ಲೂ ಟ್ರೋಫಿ ರಕ್ಷಣೆಗೆ ಆರ್‌ಸಿಬಿ ಸನ್ನದ್ಧವಾಗಿದೆ ಎಂಬುದನ್ನು ಸ್ಪಷ್ಟಪಡಿಸುತ್ತಿವೆ.

error: Content is protected !!