January16, 2026
Friday, January 16, 2026
spot_img

WPL Auction । ಅತ್ಯಧಿಕ ಬೆಲೆಗೆ ಯುಪಿ ಪಾಲಾದ ದೀಪ್ತಿ ಶರ್ಮಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ವುಮೆನ್ ಪ್ರೀಮಿಯರ್ ಲೀಗ್ (WPL ) 2026 ಹರಾಜಿನಲ್ಲಿ ವಿಶ್ವಕಪ್ ಸರಣಿಯಲ್ಲಿ ಅಧ್ಬುತ ಪ್ರದರ್ಶನ ತೋರಿಸ ದೀಪ್ತಿ ಶರ್ಮಾ ದಾಖಲೆ ಬೆಲೆಗೆ ಸೆಲ್ ಆಗಿದ್ದಾರೆ.

2025 ರ ಒನ್ ಡೇ ವಿಶ್ವಕಪ್ ಸರಣಿಯಲ್ಲಿ ಅಧ್ಬುತ ಪ್ರದರ್ಶನ ತೋರಿಸ ದೀಪ್ತಿ ಶರ್ಮಾ, ಅತಿ ಹೆಚ್ಚು ಮೊತ್ತಕ್ಕೆ ಮಾರಾಟವಾಗಿದ್ದಾರೆ. UP ವಾರಿಯರ್ಸ್ , ದೀಪ್ತಿ ಶರ್ಮಾ ಅವರನ್ನು 3.2 ಕೋಟಿ ರೂಪಾಯಿಗೆ ಖರೀದಿ ಮಾಡಿದೆ. ದೀಪ್ತಿ ಶರ್ಮಾ WPL ಇತಿಹಾಸದಲ್ಲಿ ಎರಡನೇ ಅತ್ಯಂತ ದುಬಾರಿ ಆಟಗಾರ್ತಿಯಾಗಿದ್ದಾರೆ.

ಆಲ್ರೌಂಡರ್ ದೀಪ್ತಿ ಶರ್ಮಾ ಬಿಡ್, 50 ಲಕ್ಷದಿಂದ ಪ್ರಾರಂಭವಾಯಿತು. ದೆಹಲಿ ಕ್ಯಾಪಿಟಲ್ಸ್ ಕೂಡ ಆರಂಭಿಕ ಆಫರ್ ನೀಡಿತ್ತು. ಆದ್ರೆ ಯಾವುದೇ ತಂಡ ದೀಪ್ತಿ ಖರೀದಿಗೆ ಆಸಕ್ತಿ ತೋರಿಸಲಿಲ್ಲ. ಆದ್ರೆ ಮಧ್ಯ ಪ್ರವೇಶಿಸಿದ ದೆಹಲಿ, ಅವರಿಗೆ 3.2 ಕೋಟಿ ಬಿಡ್ ಮಾಡ್ತು. ಆ ತಕ್ಷಣ ದೀಪ್ತಿ ಅವರನ್ನು ಮತ್ತೆ ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಯುಪಿ ವಾರಿಯರ್ಸ್ RTM ಕಾರ್ಡ್ ಬಳಸಿತು.

ಮೊದಲ ಬಾರಿಗೆ, ಡಬ್ಲ್ಯೂಪಿಎಲ್ ತಂಡಗಳಿಗೆ ಆರ್ಟಿಎಂ ಕಾರ್ಡ್ ಬಳಸಲು ಅವಕಾಶ ನೀಡಲಾಗಿತ್ತು. ಇದು ಯಾವುದೇ ತಂಡವು 2025 ರಲ್ಲಿ ತಮ್ಮ ತಂಡದ ಭಾಗವಾಗಿದ್ದ ಮತ್ತು ಬಿಡುಗಡೆಯಾದ ಮಾಜಿ ಆಟಗಾರ್ತಿಯನ್ನು ಆರ್ಟಿಎಂ ಮೂಲಕ ಮರು ಖರೀದಿಸಲು ಅನುವು ಮಾಡಿಕೊಡುತ್ತದೆ.

ಮಹಿಳಾ ಪ್ರೀಮಿಯರ್ ಲೀಗ್ 2026 ರ ಹರಾಜಿನ ಮೊದಲ ಪಟ್ಟಿಯಲ್ಲಿ ಒಟ್ಟು ಎಂಟು ಆಟಗಾರ್ತಿಯರಿದ್ದರು. ಏಳು ಆಟಗಾರ್ತಿಯರು ಮಾರಾಟವಾದ್ರೆ ಅಲಿಸಾ ಹೀಲಿ ಮಾರಾಟವಾಗದೆ ಉಳಿದಿದ್ದಾರೆ.

ಆಟಗಾರ್ತಿಯರ ಹರಾಜು :
ಸೋಫಿ ಡಿವೈನ್ – ₹2 ಕೋಟಿ (ಗುಜರಾತ್ ಜೈಂಟ್ಸ್) ದೀಪ್ತಿ ಶರ್ಮಾ – ₹3.2 ಕೋಟಿ (ಯುಪಿ ವಾರಿಯರ್ಸ್) ಅಮೆಲಿಯಾ ಕೆರ್ – ₹3 ಕೋಟಿ (ಮುಂಬೈ ಇಂಡಿಯನ್ಸ್) ರೇಣುಕಾ ಸಿಂಗ್ – ₹60 ಲಕ್ಷ (ಗುಜರಾತ್ ಜೈಂಟ್ಸ್) ಸೋಫಿ ಎಕ್ಲೆಸ್ಟೋನ್ – ₹8.5 ಮಿಲಿಯನ್ (ಯುಪಿ ವಾರಿಯರ್ಸ್) ಮೆಗ್ ಲ್ಯಾನಿಂಗ್ – ₹1.9 ಕೋಟಿ (ಯುಪಿ ವಾರಿಯರ್ಸ್) ಲೌರಾ ವೋಲ್ವಾರ್ಡ್ – ₹1.1 ಕೋಟಿ (ದೆಹಲಿ ಕ್ಯಾಪಿಟಲ್ಸ್) ಯುಪಿ ವಾರಿಯರ್ಸ್ ಮಾರ್ಕ್ಯೂ ಸುತ್ತಿನಲ್ಲಿ ಮೂರು ಆಟಗಾರರನ್ನು ಖರೀದಿಸಿದೆ. ಸ್ಮೃತಿ ಮಂಧಾನ ದಾಖಲೆ ಹಿಂದಿಕ್ಕದ ದೀಪ್ತಿ : ದೀಪ್ತಿ ಶರ್ಮಾ 3.2 ಕೋಟಿಗೆ ಮಾರಾಟವಾದ್ರೂ ಸ್ಮೃತಿ ಮಂಧಾನ ದಾಖಲೆ ಮುರಿಯಲು ಸಾಧ್ಯವಾಗ್ಲಿಲ್ಲ. ಸ್ಮೃತಿ ಮಂಧಾನ ಅತ್ಯಂತ ದುಬಾರಿ ವುಮೆನ್ ಪ್ರೀಮಿಯರ್ ಲೀಗ್ ಆಟಗಾರ್ತಿಯಾಗಿದ್ದಾರೆ. 2023 ರ ಹರಾಜಿನಲ್ಲಿ ಸ್ಮೃತಿ ಮಂಧಾನ ಅವರನ್ನು 3.40 ಕೋಟಿಗೆ ಖರೀದಿಸಲಾಗಿತ್ತು.

Must Read

error: Content is protected !!