Wednesday, January 28, 2026
Wednesday, January 28, 2026
spot_img

WPL | ಡೆಲ್ಲಿ ಕ್ಯಾಪಿಟಲ್ಸ್‌ಗೆ ‘ಸ್ಲೋ ಓವರ್’ ಶಾಕ್: ಜೆಮಿಮಾಗೆ 12 ಲಕ್ಷ ದಂಡದ ಬಿಸಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ವುಮೆನ್ಸ್ ಪ್ರೀಮಿಯರ್ ಲೀಗ್‌ನಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ಭರ್ಜರಿ ಪ್ರದರ್ಶನ ನೀಡಿದರೂ, ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕಿ ಜೆಮಿಮಾ ರೊಡ್ರಿಗಸ್‌ಗೆ ಈಗ ದಂಡದ ಬಿಸಿ ತಟ್ಟಿದೆ. ಪಂದ್ಯದ ವೇಳೆ ನಿಗದಿತ ಸಮಯದೊಳಗೆ ಓವರ್‌ಗಳನ್ನು ಪೂರ್ಣಗೊಳಿಸದ ಕಾರಣ ಜೆಮಿಮಾಗೆ 12 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.

WPL ನಿಯಮಾವಳಿಗಳ ಪ್ರಕಾರ, ಪ್ರತಿಯೊಂದು ತಂಡವು ತನ್ನ ಪಾಲಿನ 20 ಓವರ್‌ಗಳನ್ನು ಕೇವಲ 1 ಗಂಟೆ 30 ನಿಮಿಷಗಳಲ್ಲಿ ಮುಗಿಸಬೇಕು. ಆದರೆ ಗುಜರಾತ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ತಂಡವು ಈ ಕಾಲಮಿತಿಯನ್ನು ಮೀರಿತ್ತು. ಈ ತಪ್ಪಿಗಾಗಿ ಮೊದಲ ಹಂತದ ಶಿಕ್ಷೆಯಾಗಿ ನಾಯಕಿಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ.

ಒಂದು ವೇಳೆ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಇದೇ ತಪ್ಪನ್ನು ಮುಂದಿನ ಪಂದ್ಯಗಳಲ್ಲಿ ಪುನರಾವರ್ತಿಸಿದರೆ ಶಿಕ್ಷೆಯ ಪ್ರಮಾಣ ಮತ್ತಷ್ಟು ಹೆಚ್ಚಾಗಲಿದೆ.

ನಾಯಕಿಗೆ 24 ಲಕ್ಷ ರೂ. ದಂಡ ಹಾಗೂ ಪ್ಲೇಯಿಂಗ್ ಇಲೆವೆನ್‌ನಲ್ಲಿರುವ ಉಳಿದ 10 ಆಟಗಾರರಿಗೆ ತಲಾ 6 ಲಕ್ಷ ರೂ. ಅಥವಾ ಪಂದ್ಯದ ಶುಲ್ಕದ 25% ದಂಡ ವಿಧಿಸಲಾಗುತ್ತದೆ.

ನಾಯಕಿಗೆ 30 ಲಕ್ಷ ರೂ. ದಂಡದ ಜೊತೆಗೆ ಒಂದು ಪಂದ್ಯದ ನಿಷೇಧ ಹೇರಲಾಗುತ್ತದೆ. ಅಲ್ಲದೆ ತಂಡದ ಇತರ ಸದಸ್ಯರಿಗೆ ತಲಾ 12 ಲಕ್ಷ ರೂ. ಅಥವಾ ಪಂದ್ಯದ ಶುಲ್ಕದ 50% ದಂಡ ಬೀಳಲಿದೆ.

ಹೀಗಾಗಿ, ಮುಂದಿನ ಪಂದ್ಯಗಳಲ್ಲಿ ಜೆಮಿಮಾ ರೊಡ್ರಿಗಸ್ ತಂಡದ ಸಮಯ ನಿರ್ವಹಣೆಯ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸಬೇಕಾದ ಅನಿವಾರ್ಯತೆ ಇದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !