Saturday, January 24, 2026
Saturday, January 24, 2026
spot_img

WPL | ಅಜೇಯ RCBಗೆ ಡೆಲ್ಲಿ ಸವಾಲು: ಟಾಸ್ ಗೆದ್ದ ಜೆಮಿಮಾ ಪಡೆ ಬೌಲಿಂಗ್ ಆಯ್ಕೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಹಿಳಾ ಪ್ರೀಮಿಯರ್ ಲೀಗ್‌ನ 15ನೇ ಪಂದ್ಯದಲ್ಲಿ ಇಂದು ಬಲಿಷ್ಠ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಿವೆ. ವಡೋದರಾದ ಕೋಟಂಬಿಯಲ್ಲಿರುವ ಬಿಎಸ್‌ಟಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಹೈವೋಲ್ಟೇಜ್ ಪಂದ್ಯದಲ್ಲಿ ಟಾಸ್ ಗೆದ್ದಿರುವ ಡೆಲ್ಲಿ ನಾಯಕಿ ಜೆಮಿಮಾ ರೊಡ್ರಿಗ್ಸ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ.

ಟೂರ್ನಿಯಲ್ಲಿ ಇದುವರೆಗೆ ಸೋಲೇ ಕಾಣದ ಸ್ಮೃತಿ ಮಂಧಾನ ನೇತೃತ್ವದ ಆರ್​​ಸಿಬಿ ಈಗಾಗಲೇ ಪ್ಲೇಆಫ್‌ಗೆ ಲಗ್ಗೆ ಇಟ್ಟಿದೆ. ಆದರೆ, ಇಂದಿನ ಪಂದ್ಯವನ್ನು ಗೆಲ್ಲುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡು ನೇರವಾಗಿ ಫೈನಲ್‌ ಪ್ರವೇಶಿಸುವ ಇರಾದೆಯಲ್ಲಿ ಬೆಂಗಳೂರು ತಂಡವಿದೆ.

ಇನ್ನೊಂದೆಡೆ, ಡೆಲ್ಲಿ ಕ್ಯಾಪಿಟಲ್ಸ್‌ಗೆ ಇದು ಅತ್ಯಂತ ನಿರ್ಣಾಯಕ ಪಂದ್ಯವಾಗಿದೆ. ಪ್ಲೇಆಫ್ ರೇಸ್‌ನಲ್ಲಿ ಜೀವಂತವಾಗಿರಬೇಕೆಂದರೆ ಜೆಮಿಮಾ ಪಡೆಗೆ ಈ ಗೆಲುವು ಅನಿವಾರ್ಯ. ಎರಡನೇ ಇನ್ನಿಂಗ್ಸ್‌ನಲ್ಲಿ ರನ್ ಬೆನ್ನಟ್ಟುವುದು ಸುಲಭ ಎಂಬ ಕಾರಣಕ್ಕೆ ಡೆಲ್ಲಿ ಬೌಲಿಂಗ್ ಆಯ್ದುಕೊಂಡಿದೆ. ವಿಶೇಷವೆಂದರೆ, ಟಾಸ್ ಸೋತ ಆರ್​​ಸಿಬಿ ನಾಯಕಿ ಸ್ಮೃತಿ ಕೂಡ ತಾವು ಟಾಸ್ ಗೆದ್ದಿದ್ದರೆ ಬೌಲಿಂಗ್ ಆಯ್ಕೆ ಮಾಡಿಕೊಳ್ಳುತ್ತಿದ್ದುದಾಗಿ ತಿಳಿಸಿದ್ದಾರೆ.

Must Read