April 3, 2026
Friday, April 3, 2026
spot_img

ಯಶ್‌ ಸ್ಟಾರ್‌ಡಮ್‌ ಉಳಿಸಿಕೊಳ್ಳೋಕೆ ಕಷ್ಟಪಡ್ತಿದ್ದಾನೆ, ಹುಡುಗ ಡಿಪ್ರೆಷನ್‌ನಲ್ಲಿ ಇದ್ದಾನೆ ಎಂದ ಜ್ಯೋತಿಷಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಜ್ಯೋತಿಷಿ ವೇಣು ಸ್ವಾಮಿ ನಟ ಯಶ್‌ ಬಗ್ಗೆ ಉಲ್ಟಾ ಪಲ್ಟಾ ಭವಿಷ್ಯ ಹೇಳಿ ಫ್ಯಾನ್ಸ್‌ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈ ಹಿಂದೆ ಸಮಂತಾ ಹಾಗೂ ನಾಗಚೈತನ್ಯ ಡಿವೋರ್ಸ್‌ ಆಗುತ್ತದೆ ಎಂದು ಭವಿಷ್ಯ ನುಡಿದಿದ್ದರು. ಅದು ನಿಜವಾದ ನಂತರ ವೇಣುಸ್ವಾಮಿ ಪ್ರಾಮುಖ್ಯತೆ ಪಡೆದಿದ್ದರು. ಇದೀಗ ಮತ್ತೆ ಯಶ್‌ ಡಿಪ್ರೆಷನ್‌ನಲ್ಲಿದ್ದಾನೆ ಎಂದು ಏಕವಚನದಲ್ಲಿ ಮಾತನಾಡಿದ್ದಾರೆ.

ಯಶ್ ಅಂತ ಒಬ್ಬರು ಹೀರೋ ಇದಾನೆ. ಆತನ ಪರಿಸ್ಥಿತಿ ತುಂಬಾ ಕಷ್ಟದಲ್ಲಿದೆ. ಕನ್ನಡದ ಹೀರೋ ಅಂತ ಹೆಸರು ತೆಗೆದುಕೊಂಡು ಮಾತನಾಡುತ್ತಿದ್ದೇನೆ. ತೆಲುಗು ಹೀರೋ ಆಗಿದ್ರೆ ಮಾತನಾಡುತ್ತಾ ಇರಲಿಲ್ಲ. ಯಶ್ ಡಿಪ್ರೆಷನ್​ ಅಲ್ಲಿದ್ದಾನೆ. ಆತ ಮಾಡಿದ ಎರಡು ಸಿನಿಮಾ ಎಲ್ಲಿಯೋ ಇವೆ. ಕೆಜಿಎಫ್​ನ ಪದೇ ಪದೇ ತೆಗೆಯೋಕಾಗಲ್ಲ. ಕೆಜಿಎಫ್ ರೀತಿಯ ಸಿನಿಮಾ ತೆಗೆಯಲು ಸಾಧ್ಯವಾಗದೆ, ಹೊಸ ಸಿನಿಮಾ ಆಯ್ಕೆ ಮಾಡಲಾಗದೆ ಡಿಪ್ರೆಷನ್​ಗೆ ಹೋಗಿದ್ದಾನೆ. ಸ್ಟಾರ್​ ಡಂನ ಉಳಿಸಿಕೊಳ್ಳೋಕೆ ಆಗ್ತಿಲ್ಲ. ಅದೇ ಟೆನ್ಷನ್​ ಅಲ್ಲಿ ಯಶ್ ಇದ್ದಾನೆ ಎಂದಿದ್ದಾರೆ ವೇಣು ಸ್ವಾಮಿ.

ಯಶ್ ‘ಟಾಕ್ಸಿಕ್’ ರೀತಿಯ ದೊಡ್ಡ ಸಿನಿಮಾ ಒಪ್ಪಿಕೊಂಡಿದ್ದಾರೆ. ‘ರಾಮಾಯಣ’ ಸಿನಿಮಾದಲ್ಲಿ ಯಶ್ ಅವರು ರಾವಣನ ಪಾತ್ರ ಮಾಡುತ್ತಿದ್ದಾರೆ. ಇನ್ನೂ ಹಲವು ಪ್ರಾಜೆಕ್ಟ್‌ಗಳು ಯಶ್‌ ಕೈಯಲ್ಲಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !