Monday, December 22, 2025

ಹೌದು ನಾನು ಚಹಾ ಮಾರಾಟಗಾರ…ಕಾಂಗ್ರೆಸ್ AI ವಿಡಿಯೋಗೆ ಖಡಕ್ ತಿರುಗೇಟು ನೀಡಿದ ಪ್ರಧಾನಿ ಮೋದಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹೌದು ನಾನು ಚಹಾ ಮಾರಾಟಗಾರ, ನಾನು ಅಂದು ಚಹಾ ಮಾರದಿದ್ದರೆ ಇನ್ಯಾರು ಮಾಡುತ್ತಿದ್ದರು? …. ಇದು ಪ್ರಧಾನಿ ಮೋದಿ ಅವರ ಖಡಕ್ ಪ್ರಶ್ನೆ.

ಮೋದಿ ಚಾಯ್ ವಾಲಾ ಅನ್ನೋ ಹೆಮ್ಮೆಯ ಮಾತು, ಆದ್ರೆ ಇದೀಗ ಮತ್ತೆ ಮೋದಿ ನಾನು ಚಹಾ ಮಾರಾಟಗಾರ ಎಂದು ಹೇಳಲು ಕಾರಣವೂ ಇದೆ.

ಡಿಸೆಂಬರ್ ತಿಂಗಳ ಆರಂಭದಲ್ಲಿ ಕಾಂಗ್ರೆಸ್ ನಾಯಕಿ ಪ್ರಧಾನಿ ಮೋದಿಯ ಎಐ ಜನರೇಟೆಡ್ ವಿಡಿಯೋ ಪೋಸ್ಟ್ ಮಾಡಿದ್ದರು. ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಚಹಾ ಮಾರಾಟ ಮಾಡುತ್ತಿರುವ ವಿಡಿಯೋ ಇದಾಗಿತ್ತು. ಈ ವಿಡಿಯೋಗೆ ಪ್ರಧಾನಿ ಮೋದಿ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಬಿಜೆಪಿ ಹಾಗೂ ಹಲವು ನಾಯಕರು ಕಾಂಗ್ರೆಸ್ ಕ್ಷಮೆ ಕೇಳಬೇಕು ಎಂದು ಪಟ್ಟು ಹಿಡಿದಿತ್ತು. ಆದರೆ ಮೋದಿ ಸೈಲೆಂಟ್ ಆಗಿದ್ದರು.

ಇದೀಗ ಇದೇ ಎಐ ವಿಡಿಯೋಗೆ ಅಸ್ಸಾಂ ಚಹಾ ಬೆಳೆಗಾರರ ಸಮುದಾಯದ ಮುಂದೆ ಮೋದಿ ತಿರುಗೇಟು ನೀಡಿದ್ದಾರೆ.

ಪ್ರಧಾನಿ ಮೋದಿ ಹಲವು ಅಭಿವೃದ್ಧಿ ಕಾರ್ಯಕ್ರಮಗಳ ಶಂಕು ಸ್ಥಾಪನೆ, ಉದ್ಘಾಟನೆಗಾಗಿ ಅಸ್ಸಾಂ ಪ್ರವಾಸ ಮಾಡಿದ್ದಾರೆ. ಅಸ್ಸಾಂ ವಿಶೇಷವಾಗಿ ಚಹಾ ಬೆಳೆಯವ ರಾಜ್ಯ. ಭಾರತದಲ್ಲಿ ಅತೀ ಹೆಚ್ಚಿನ ಚಹಾ ಬೆಳೆಯುವ ರಾಜ್ಯವಾಗಿ ಅಸ್ಸಾಂ ಗುರುತಿಸಿಕೊಂಡಿದೆ. ಚಹಾ ಬೆಳೆಗಾರರ ಸಮುದಾಯದ ಮುಂದೆ ಪ್ರಧಾನಿ ಮೋದಿ, ಕಾಂಗ್ರೆಸ್ ಮಾಡಿದ ಟೀಕೆಗೆ ಉತ್ತರಿಸಿದ್ದಾರೆ. ಎದೆತಟ್ಟಿ ಹೇಳಿದ ಪ್ರಧಾನಿ ಮೋದಿ, ಹೌದು, ನಾನು ಚಹಾ ಮಾರಾಟಾಗರ, ನಾನು ಮಾಡದಿದ್ದರೆ ಇನ್ಯಾರು ಮಾಡುತ್ತಾರೆ ಎಂದು ಹೇಳಿದ್ದಾರೆ.

ಅಸ್ಸಾಂನಲ್ಲಿ ಕಾಂಗ್ರೆಸ್ ಸುದೀರ್ಘ ವರ್ಷಗಳ ಕಾಲ ಆಡಳಿತ ಮಾಡಿತ್ತು. ಆದರೆ ಚಹಾ ಸಮುದಾಯದ ಸಮಸ್ಯೆಗಳನ್ನು, ಮನವಿಗಳನ್ನು ಆಲಿಸಲು ಹೋಗಿಲ್ಲ. ಆದರೆ ಬಿಜೆಪಿ ಸರ್ಕಾರ ಅಸ್ಸಾಂ ಟಿ ಸಮುದಾಯಕ್ಕೆ ಭೂಮಿ ಹಕ್ಕು ನೀಡಿದೆ. ಇಷ್ಟೇ ಅಲ್ಲ ಟೀ ಸಮುದಾಯದ ಜೀವನ ಮೌಲ್ಯಗಳನ್ನು ಎತ್ತಿ ಹಿಡಿದಿದೆ ಎಂದು ಮೋದಿ ಹೇಳಿದ್ದಾರೆ.

ಮೋದಿ ಎಐ ವಿಡಿಯೋ ಹಂಚಿಕೊಂಡಿದ್ದ ರಾಣಿಗಿ ನಾಯಕ್
ಕಾಂಗ್ರೆಸ್ ನಾಯಕಿ ರಾಗಿಣಿ ನಾಯಕ್ ಡಿಸೆಂಬರ್ 3ರಂದು ಪ್ರಧಾನಿ ನರೇಂದ್ರ ಮೋದಿಯ ಎಐ ಸೃಷ್ಟಿಸಿದ ವಿಡಿಯೋ ಒಂದನ್ನು ಹಂಚಿಕೊಂಡಿದ್ದರು. ಇದು ಬಾರಿ ವಿವಾದಕ್ಕೆ ಕಾರಣವಾಗಿತ್ತು. ಶೃಂಗ ಸಭೆಗಳು ನಡೆಯುವ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಚಹಾ ಮಾರುತ್ತಿದ್ದ ರೀತಿ ಸೃಷ್ಟಿಸಲಾಗಿತ್ತು.

error: Content is protected !!