Wednesday, September 10, 2025

Yoga | ಪ್ರತಿದಿನ 5 ಸುತ್ತು ಸೂರ್ಯ ನಮಸ್ಕಾರ ಮಾಡುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ?

ಸೂರ್ಯ ನಮಸ್ಕಾರವನ್ನು ಯೋಗದ ಸಂಪೂರ್ಣ ವ್ಯಾಯಾಮವೆಂದು ಕರೆಯಬಹುದು. ಇದರಲ್ಲಿ ಒಟ್ಟು 12 ಭಂಗಿಗಳು ಸೇರಿದ್ದು, ಪ್ರತಿಯೊಂದು ಭಂಗಿಯೂ ದೇಹದ ವಿಭಿನ್ನ ಅಂಗಗಳ ಮೇಲೆ ಪ್ರಭಾವ ಬೀರುತ್ತದೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕೆಲವು ಸುತ್ತು ಸೂರ್ಯ ನಮಸ್ಕಾರ ಮಾಡಿದರೆ ದೇಹ ಆರೋಗ್ಯಕರವಾಗುವುದರ ಜೊತೆಗೆ ಮನಸ್ಸಿಗೂ ಶಾಂತಿ ಸಿಗುತ್ತದೆ. 2022ರಲ್ಲಿ ಪ್ರಕಟವಾದ ಒಂದು ಅಧ್ಯಯನದ ಪ್ರಕಾರ, ಸೂರ್ಯ ನಮಸ್ಕಾರ ದೇಹದ ಸಮಗ್ರ ಆರೋಗ್ಯವನ್ನು ಕಾಪಾಡಲು ಸಹಾಯಕವಾಗುತ್ತದೆ.

ದೈಹಿಕ ಲಾಭಗಳು
ಸೂರ್ಯ ನಮಸ್ಕಾರ ಮಾಡುವುದರಿಂದ ದೇಹದಲ್ಲಿ ಶಕ್ತಿ ಹೆಚ್ಚುತ್ತದೆ. ಕೀಲುಗಳು ಬಲಗೊಳ್ಳುತ್ತವೆ, ಬೆನ್ನುಮೂಳೆಯ ಆರೋಗ್ಯ ಉತ್ತಮವಾಗುತ್ತದೆ. ಇದರೊಂದಿಗೆ ಹೃದಯದ ಬಡಿತ ಸರಿಯಾಗಿ ನಡೆಯಲು ಸಹಕಾರಿಯಾಗುತ್ತದೆ. ಪ್ರತಿಯೊಂದು ಭಂಗಿಯೂ ಶ್ವಾಸಕೋಶದ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ ಮತ್ತು ಉಸಿರಾಟದ ತೊಂದರೆಗಳನ್ನು ಕಡಿಮೆ ಮಾಡುತ್ತದೆ. ತೂಕವನ್ನು ಸಮತೋಲನದಲ್ಲಿಡಲು ಇದು ಅತ್ಯಂತ ಸಹಾಯಕ.

ಮಾನಸಿಕ ಲಾಭಗಳು
ಸೂರ್ಯ ನಮಸ್ಕಾರ ಮಾಡುವಾಗ ಉಸಿರಾಟದ ಲಯ ಹಾಗೂ ದೇಹದ ಚಲನೆಗಳು ಮನಸ್ಸಿನ ಏಕಾಗ್ರತೆಯನ್ನು ಹೆಚ್ಚಿಸುತ್ತವೆ. ಇದು ಪ್ಯಾರಾಸಿಂಪೆಥೆಟಿಕ್ ನರವ್ಯವಸ್ಥೆಯನ್ನು ಆ್ಯಕ್ಟಿವ್ ಮಾಡುವುದರಿಂದ ನೆನಪಿನ ಶಕ್ತಿ ವೃದ್ಧಿಯಾಗುತ್ತದೆ. ಒತ್ತಡ ಕಡಿಮೆಯಾಗುತ್ತದೆ ಹಾಗೂ ಮನಸ್ಸು ಶಾಂತವಾಗುತ್ತದೆ.

ಸೂರ್ಯ ನಮಸ್ಕಾರ ಮಾಡುವ ವಿಧಾನ

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಮಾಡುವುದು ಅತ್ಯುತ್ತಮ.

ಪ್ರತಿಯೊಂದು ಭಂಗಿಯನ್ನು ನಿಧಾನವಾಗಿ ಮತ್ತು ಸಮತೋಲನದಿಂದ ನಿರ್ವಹಿಸಬೇಕು.

ತಲೆಯ ಭಾಗ ಮೇಲಕ್ಕೆ ಬಂದಾಗ ಉಸಿರನ್ನು ಒಳಗೆಳೆದು, ಕೆಳಗೆ ಬಂದಾಗ ಉಸಿರನ್ನು ಹೊರಹಾಕಬೇಕು.

ಆರಂಭದಲ್ಲಿ 3 ರಿಂದ 5 ಸುತ್ತು ಮಾಡಿ, ನಂತರ ಹಂತ ಹಂತವಾಗಿ ಹೆಚ್ಚಿಸಬಹುದು.

ಇದನ್ನೂ ಓದಿ