Friday, November 21, 2025

yoga | ಡೈಲಿ 15 ನಿಮಿಷ ಈ ಯೋಗಾಸನ ಮಾಡಿದ್ರೆ ಸಾಕು! ನಿಮ್ಮ ಸ್ಟ್ರೆಸ್ ಎಲ್ಲ ಮಂಗಮಾಯ

ಇಂದಿನ ವೇಗದ ಬದುಕಿನಲ್ಲಿ ಒತ್ತಡ ನಮ್ಮನ್ನು ದಿನವೂ ಹಿಂಬಾಲಿಸುತ್ತಿದೆ. ಕೆಲಸದ ಒತ್ತಡ, ನಿದ್ರೆ ಕೊರತೆ, ಆತಂಕ ಇವೆಲ್ಲ ನಮ್ಮ ಮನಸ್ಸು ಮತ್ತು ದೇಹದ ಮೇಲೆ ದೊಡ್ಡ ಪರಿಣಾಮ ಬೀರುತ್ತೆ. ಈ ಪರಿಸ್ಥಿತಿಯಲ್ಲಿ, ದೇಹ-ಮನಸ್ಸಿಗೆ ಒಂದೇ ಸಮಯದಲ್ಲಿ ಶಾಂತಿ ನೀಡಬಲ್ಲ ಅತ್ಯಂತ ನೈಸರ್ಗಿಕ ವಿಧಾನ ಯೋಗ. ನಿಯಮಿತ ಯೋಗಾಭ್ಯಾಸವು ಕಾರ್ಟಿಸೋಲ್‌ ಮಟ್ಟವನ್ನು ನಿಯಂತ್ರಿಸಿ, ನರಮಂಡಲಕ್ಕೆ ಸಮತೋಲನ ನೀಡುತ್ತದೆ ಮತ್ತು ಮನಸ್ಸಿಗೆ ನೆಮ್ಮದಿ ತುಂಬುತ್ತದೆ.

ಬಾಲಾಸನ (ಮಗುವಿನ ಭಂಗಿ): ಮೊಣಕಾಲಿನ ಮೇಲೆ ಕುಳಿತು ನಿಧಾನವಾಗಿ ಮುಂದಕ್ಕೆ ಬಾಗಿ ಕೈಗಳನ್ನು ಚಾಚಿ ಐದು ನಿಮಿಷ ಶಾಂತವಾಗಿ ಇರಬೇಕು.
ಪ್ರಯೋಜನ: ಮೆದುಳಿಗೆ ವಿಶ್ರಾಂತಿ, ಆತಂಕ ಕಡಿಮೆ, ಮನಸ್ಸಿಗೆ ಶಾಂತಿ.

ಸುಖಾಸನ (ಸರಳ ಭಂಗಿ): ಪದ್ಮಾಸನದಂತೆ ಕಾಲುಗಳನ್ನು ಮಡಚಿ ಕುಳಿತು ಕಣ್ಣು ಮುಚ್ಚಿ ಆಳವಾದ ಉಸಿರಾಟ ಮಾಡಬೇಕು.
ಪ್ರಯೋಜನ: ಕೋಪ, ಆತಂಕ ಮತ್ತು ಮಾನಸಿಕ ಗೊಂದಲ ಕಡಿಮೆ. ಏಕಾಗ್ರತೆ ಮತ್ತು ಮನಶಾಂತಿ ಹೆಚ್ಚುವುದು.

ಶವಾಸನ (ಶವದ ಭಂಗಿ): ಬೆನ್ನಿನ ಮೇಲೆ ಮಲಗಿ ದೇಹ-ಮನಸ್ಸನ್ನು ಸಂಪೂರ್ಣ ವಿಶ್ರಾಂತ ಸ್ಥಿತಿಗೆ ಒಯ್ಯಬೇಕು.
ಪ್ರಯೋಜನ: ದೇಹಕ್ಕೆ ಸಂಪೂರ್ಣ ವಿಶ್ರಾಂತಿ, ನಿದ್ರೆ ಗುಣಮಟ್ಟ ಸುಧಾರಣೆ, ಒತ್ತಡ ನಿವಾರಣೆ.

ಯೋಗದ ಈ ಮೂರು ಸರಳ ಆಸನಗಳು ಪ್ರತಿದಿನ ಕೆಲವು ನಿಮಿಷಗಳ ಅಭ್ಯಾಸದಲ್ಲೇ ದೈಹಿಕ-ಮಾನಸಿಕ ಒತ್ತಡವನ್ನು ನಿವಾರಿಸಿ, ನಿಮ್ಮ ಜೀವನಕ್ಕೆ ಹೊಸ ಶಾಂತಿ ಮತ್ತು ಸಮತೋಲನ ತರುತ್ತವೆ.

error: Content is protected !!