January20, 2026
Tuesday, January 20, 2026
spot_img

‘ನೀವು ಆಸ್ಟ್ರೇಲಿಯಾದ ಹೀರೋ’…ಬೊಂಡಿ ಬೀಚ್​ನಲ್ಲಿ ಉಗ್ರನ ವಿರುದ್ಧ ಹೋರಾಡಿದ ವ್ಯಕ್ತಿಗೆ ವ್ಯಾಪಕ ಪ್ರಶಂಸೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಸ್ಟ್ರೇಲಿಯಾದ ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಪಾಕಿಸ್ತಾನ ಮೂಲದ ಇಬ್ಬರು ಗುಂಡಿನ ಸುರಿಮಳೆಗೈದ ಪರಿಣಾಮ 12ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದರು. ಈ ಸಂದರ್ಭ ಭಯಪಡದೆಉಗ್ರನ ವಿರುದ್ಧ ಓರ್ವ ಹಣ್ಣುಗಳ ಮಾರಾಟಗಾರ ಹೋರಾಡಿದ್ದಾರೆ.

ಅವರ ಹೆಸರು ಅಹ್ಮದ್ ಅಲ್ ಅಹ್ಮದ್. ಯಾವುದೇ ಹಿಂಜರಿಕೆಯಿಲ್ಲದೆ ತನ್ನ ಪ್ರಾಣ ಒತ್ತೆ ಇಟ್ಟು ಜನರನ್ನು ರಕ್ಷಣೆ ಮಾಡಿದ್ದಾರೆ. ಉಗ್ರನ ಮೇಲೆ ಹಾರಿ ಬಂದೂಕನ್ನು ಕಸಿದುಕೊಳ್ಳುವಲ್ಲಿ ಇವರು ಯಶಸ್ವಿಯಾಗಿದ್ದರು.

ಸಾಮಾಜಿಕ ಜಾಲತಾಣಗಳಲ್ಲೆಲ್ಲಾ ಇವರದ್ದೇ ವಿಡಿಯೋ ಹರಿದಾಡಿತ್ತು. ಈ ಸಂದರ್ಭದಲ್ಲಿ ಅವರಿಗೂ ಕೂಡ ಗಾಯಗಳಾಗಿತ್ತು.

ಸದ್ಯ ಆಸ್ಪತೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಇದೀಗ GoFundMe ಅಭಿಯಾನವು ಅಹ್ಮದ್‌ಗಾಗಿ ಸುಮಾರು 2 ಮಿಲಿಯನ್ ಡಾಲರ್ ಸಂಗ್ರಹಿಸಿದೆ. 33,000 ಕ್ಕೂ ಹೆಚ್ಚು ಜನರು ಕೊಡುಗೆ ನೀಡಿದ್ದಾರೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ.

ದಾಳಿಕೋರರನ್ನು ಸಾಜಿದ್ ಅಕ್ರಮ್ (50) ಮತ್ತು ಅವರ ಮಗ ನವೀದ್ (24) ಎಂದು ಗುರುತಿಸಲಾಗಿದೆ. ಇಬ್ಬರೂ ಮನಬಂದಂತೆ ಗುಂಡು ಹಾರಿಸಲು ಪ್ರಾರಂಭಿಸಿದ್ದರು.ನಿಲ್ಲಿಸಿದ್ದ ಕಾರಿನ ಹಿಂದೆ ಅಡಗಿಕೊಂಡಿದ್ದ ಅಹ್ಮದ್, ಗುಂಡು ಹಾರಿಸಿದವರಲ್ಲಿ ಒಬ್ಬನ ಮೇಲೆ ದಾಳಿ ಮಾಡಿ, ಅವನ ಕೈಯಿಂದ ರೈಫಲ್ ಅನ್ನು ಕಸಿದುಕೊಂಡಿದ್ದರು. ಅಹ್ಮದ್ ಅವರ ಧೈರ್ಯಶಾಲಿ ಕಾರ್ಯಕ್ಕಾಗಿ ವ್ಯಾಪಕವಾಗಿ ಪ್ರಶಂಸೆ ವ್ಯಕ್ತವಾಗಿತ್ತು.

43 ವರ್ಷದ ಅಹ್ಮದ್ ಅಲ್ ಅಹ್ಮದ್ ಸಿಡ್ನಿಯ ಸದರ್ಲ್ಯಾಂಡ್ ಪ್ರದೇಶದಲ್ಲಿ ಹಣ್ಣಿನ ಅಂಗಡಿ ನಡೆಸುತ್ತಿದ್ದಾರೆ.ದಾಳಿಯ ಸಮಯದಲ್ಲಿ ಅವರು ಆಕಸ್ಮಿಕವಾಗಿ ಬೋಂಡಿ ಬೀಚ್ ಬಳಿ ಇದ್ದರು. ಹಠಾತ್ ಗುಂಡಿನ ಸದ್ದು ಕೇಳಿ ಜನರು ಓಡಿಹೋಗಲು ಪ್ರಾರಂಭಿಸಿದರು. ಪರಿಸ್ಥಿತಿಯನ್ನು ಅರ್ಥಮಾಡಿಕೊಂಡ ಅಹ್ಮದ್, ಯಾವುದೇ ಆಯುಧವಿಲ್ಲದೆ ದಾಳಿಕೋರನನ್ನು ನೇರವಾಗಿ ಎದುರಿಸಲು ನಿರ್ಧರಿಸಿದರು. ಅವರಿಗೆ ಎರಡು ಬಾರಿ ಗುಂಡು ಹಾರಿಸಲಾಯಿತು, ಆದರೆ ಭಯ ಪಡುವ ಬದಲು ಅವರು ದಾಳಿಕೋರನನ್ನು ಎದುರಿಸಿ ಅವನ ಆಯುಧವನ್ನು ಕಸಿದುಕೊಂಡರು.

ಈ ಘಟನೆಗೆ ಸಂಬಂಧಿಸಿದಂತೆ ಸಿಡ್ನಿಯಲ್ಲಿ ಈ ಸಮಯದಲ್ಲಿ ಬೇರೆ ಯಾವುದೇ ಬೆದರಿಕೆಗಳು ವರದಿಯಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

Must Read