Friday, December 19, 2025

ರಾಹುಲ್ ಕೆಲಸ ಮಾಡಿ ನಿಮ್ಮ ಕೆಲಸ ಮಾಡಿಲ್ಲ ಅಂದರೆ ದೂರುತ್ತೀರಿ ಅಲ್ವಾ….ಪ್ರಿಯಾಂಕಾ ಗಾಂಧಿ ಕಾಲೆಳೆದ ಗಡ್ಕರಿ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕೇರಳದ ರಸ್ತೆ ಯೋಜನೆಗಳ ಕುರಿತು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ ಚರ್ಚಿಸಿದರು.

ಈ ವೇಳೆ ಅವರಿಬ್ಬರ ನಡುವಿನ ಮಾತುಕತೆಯು, ನಗು, ಆಹಾರವನ್ನು ಸವಿಯು ಮೂಲಕ ಪ್ರಾರಂಭವಾಯಿತು.

ಕೇರಳದ ಆರು ರಸ್ತೆ ಯೋಜನೆಗಳ ಕುರಿತು ಚರ್ಚಿಸಿದರು. ಕೆಲವು ಯೋಜನೆಗಳು ಕೇರಳ ಸರ್ಕಾರದ ಅಧೀನದಲ್ಲಿವೆ. ಆದ್ದರಿಂದ ಕೇಂದ್ರವು ಅವುಗಳನ್ನು ನಿರ್ವಹಿಸಲು ಸಾಧ್ಯವಿಲ್ಲ ಎಂದು ಹೆದ್ದಾರಿ ಸಚಿವರು ಹೇಳಿದರು. ಆದರೆ ಉಳಿದವುಗಳನ್ನು ಪರಿಶೀಲಿಸುವುದಾಗಿ ಭರವಸೆ ನೀಡಿದರು.

ಮಾತುಕತೆಯ ವೇಳೆ ಗಡ್ಕರಿ ಇತ್ತೀಚಿಗೆ ನಿಮ್ಮ ಸಹೋದರ ರಾಹುಲ್ ಗಾಂಧಿ (Rahul Gandhi) ಅವರು ತಮ್ಮ ಕ್ಷೇತ್ರ ರಾಯ್‌ಬರೇಲಿಯ ರಸ್ತೆಯ ಬಗ್ಗೆ ಭೇಟಿಯಾದ ವಿಚಾರವನ್ನು ಪ್ರಸ್ತಾಪಿಸಿ, ನಿಮ್ಮ ಸಹೋದರನ ಕೆಲಸಗಳನ್ನು ಮಾಡಿ ನಿಮ್ಮ ಕ್ಷೇತ್ರದ ಕೆಲಸಗಳನ್ನ ಮಾಡಿಲ್ಲ ಎಂದರೆ ಮಾಡಿಕೊಟಿಲ್ಲ ಎಂದು ದೂರುತ್ತೀರಿ ಅಲ್ವಾ ಎಂದು ಹೇಳಿ ಕಾಲೆಳೆದರು. ಗಡ್ಕರಿ ಅವರ ಈ ಮಾತಿಗೆ ಅಲ್ಲಿದ್ದ ಎಲ್ಲರೂ ನಗೆಗಡಲಲ್ಲಿ ತೇಲಿದರು.

ಕೇರಳದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ವಿಶ್ವಾಸ ವ್ಯಕ್ತಪಡಿಸಿದ ವಯನಾಡ್ ಸಂಸದೆ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಕೇಂದ್ರ ಸಚಿವರಿಗೆ ತಿಳಿಸಿದರು.

ಇನ್ನು, ಇವರಿಬ್ಬರ ಮಾತುಕತೆಯ ನಡುವೆ ರುಚಿಕರವಾದ ಆಹಾರವನ್ನೂ ಸಹ ಸವಿದರು. ಯೂಟ್ಯೂಬ್ ವಿಡಿಯೊ ನೋಡಿ ಗಡ್ಕರಿ ಅವರು ಅನ್ನದ ಖಾದ್ಯ ಮಾಡಿದ್ದರು. ಕಡುಬು ರೀತಿಯ ಈ ಖಾದ್ಯವನ್ನು ಸಾಸ್ ಮತ್ತು ಚಟ್ನಿಯೊಂದಿಗೆ ಬಡಿಸಲಾಯಿತು. ಪ್ರಿಯಾಂಕಾ ಗಾಂಧಿ ಗಡ್ಕರಿಯನ್ನು ಭೇಟಿ ಮಾಡಿದಾಗ, ಅವರಿಗೆ ಖಾದ್ಯ ಸವಿಯುವಂತೆ ಒತ್ತಾಯಿಸಿದರು. ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ವಾದ್ರಾ ಮತ್ತು ಅವರ ಪಕ್ಷದ ಸಹೋದ್ಯೋಗಿ ದೀಪೇಂದರ್ ಸಿಂಗ್ ಹೂಡಾ ಕೂಡ ಗಡ್ಕರಿ ಅವರೊಂದಿಗೆ ಮಾತನಾಡುತ್ತಾ ಕಡುಬು ರೀತಿಯ ಖಾದ್ಯವನ್ನು ಸವಿದರು.

error: Content is protected !!