ಹೊಸದಿಗಂತ ಡಿಜಿಟಲ್ ಡೆಸ್ಕ್:
ಡಿಜಿಟಲ್ ಟಿಕೆಟ್ ಬುಕ್ಕಿಂಗ್‌ನ್ನು ಇನ್ನಷ್ಟು ಉತ್ತೇಜಿಸುವ ನಿಟ್ಟಿನಲ್ಲಿ ಭಾರತೀಯ ರೈಲ್ವೆ ಜನರಲ್ ಅಥವಾ ಅನ್‌ರಿಸರ್ವ್ಡ್ ಟ್ರೈನ್ ಟಿಕೆಟ್‌ಗಳ ಮೇಲೆ ಹೊಸ ರಿಯಾಯಿತಿ ಯೋಜನೆಯನ್ನು ಜಾರಿಗೆ ತಂದಿದೆ. ಬಸ್ ಹಾಗೂ ವಿಮಾನ ಟಿಕೆಟ್‌ಗಳಂತೆ ಈಗ ರೈಲು ಪ್ರಯಾಣಿಕರಿಗೂ ಡಿಸ್ಕೌಂಟ್ ಮತ್ತು ಕ್ಯಾಶ್‌ಬ್ಯಾಕ್ ಲಾಭ ದೊರೆಯುತ್ತಿದೆ ಎಂಬುದು ವಿಶೇಷ.
ರೈಲ್ವೆ ಇಲಾಖೆಯ ಅಧಿಕೃತ RailOne ಆ್ಯಪ್ ಮೂಲಕ ಜನರಲ್ ಟಿಕೆಟ್ ಬುಕ್ ಮಾಡುವವರಿಗೆ ಈ ಸೌಲಭ್ಯ ಲಭ್ಯವಾಗುತ್ತದೆ. RailOne ಆ್ಯಪ್‌ನಲ್ಲಿ R-Wallet ಮೂಲಕ ಪಾವತಿ ಮಾಡಿದರೆ, ಈಗ ಹೆಚ್ಚುವರಿ 3 ಶೇಕಡಾ ಡಿಸ್ಕೌಂಟ್ ನೀಡಲಾಗುತ್ತಿದೆ. ಇದಕ್ಕೂ ಮೊದಲು R-Wallet ಬಳಕೆಗೆ 3 ಶೇಕಡಾ ಕ್ಯಾಶ್‌ಬ್ಯಾಕ್ ಮಾತ್ರ ಸಿಗುತ್ತಿತ್ತು. ಹೊಸ ವ್ಯವಸ್ಥೆಯಲ್ಲಿ ಡಿಸ್ಕೌಂಟ್ ಹಾಗೂ ಕ್ಯಾಶ್‌ಬ್ಯಾಕ್ ಸೇರಿ ಒಟ್ಟು 6 ಶೇಕಡಾ ಲಾಭವನ್ನು ಪ್ರಯಾಣಿಕರು ಪಡೆಯಬಹುದು.
ಈ ರಿಯಾಯಿತಿ ಯೋಜನೆ 2026 ಜನವರಿ 14ರಿಂದ ಜಾರಿಗೆ ಬಂದಿದ್ದು, ಆರು ತಿಂಗಳ ಕಾಲ ಅಂದರೆ 2026 ಜುಲೈ 14ರವರೆಗೆ ಮಾನ್ಯವಾಗಿರುತ್ತದೆ. RailOne ಆ್ಯಪ್ ಹೊರತುಪಡಿಸಿ ಬೇರೆ ಯಾವುದೇ ವೆಬ್‌ಸೈಟ್ ಅಥವಾ ಆ್ಯಪ್‌ಗಳಲ್ಲಿ ಈ ಸೌಲಭ್ಯ ಲಭ್ಯವಿರುವುದಿಲ್ಲ ಎಂಬುದನ್ನು ರೈಲ್ವೆ ಸ್ಪಷ್ಟಪಡಿಸಿದೆ.
R-Wallet ಎಂಬುದು ಭಾರತೀಯ ರೈಲ್ವೆಯ ಅಧಿಕೃತ ಡಿಜಿಟಲ್ ವಾಲೆಟ್ ಆಗಿದ್ದು, ಸುರಕ್ಷಿತ ಮತ್ತು ವೇಗದ ಪಾವತಿಗೆ ಅನುಕೂಲವಾಗುತ್ತದೆ. RailOne ಆ್ಯಪ್‌ನಲ್ಲಿ ಸರಳವಾಗಿ ರಿಜಿಸ್ಟ್ರೇಶನ್ ಮಾಡಿಕೊಂಡು ಜನರಲ್ ಟಿಕೆಟ್ ಬುಕ್ಕಿಂಗ್, ಟ್ರೈನ್ ಲೈವ್ ಸ್ಟೇಟಸ್ ಸೇರಿದಂತೆ ಹಲವು ಸೇವೆಗಳನ್ನು ಪ್ರಯಾಣಿಕರು ಪಡೆಯಬಹುದು. ಈ ಹೊಸ ಯೋಜನೆಯಿಂದ ಟಿಕೆಟ್ ಕೌಂಟರ್‌ಗಳಲ್ಲಿನ ಗೊಂದಲ ಕಡಿಮೆಯಾಗುವ ನಿರೀಕ್ಷೆ ಇದೆ.


