Wednesday, November 5, 2025

ನೀವು ಎಲ್ಲಾ ಪ್ರಶಂಸೆಗಳಿಗೆ ಅರ್ಹರು : ಬಿಗ್‌ ಕಂಗ್ರಾಟ್ಸ್‌ ಎಂದ ವಿರಾಟ್‌ ಕೊಹ್ಲಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಭಾರತ ಮಹಿಳಾ ತಂಡದ ಐದು ದಶಕಗಳ ಕಾಯುವಿಕೆ ಕೊನೆಗೂ ಅಂತ್ಯವಾಗಿದೆ. ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಸೌತ್ ಆಫ್ರಿಕಾ ವಿರುದ್ಧದ ಫೈನಲ್​ ಪಂದ್ಯದಲ್ಲಿ 52 ರನ್​ಗಳ ಜಯಭೇರಿ ಬಾರಿಸಿ ನಮ್ಮ ಟೀಂ ಇಂಡಿಯಾ ಚಾಂಪಿಯನ್ ಪಟ್ಟ ಅಲಂಕರಿಸಿದೆ.

ಈ ಗೆಲುವಿನ ಬೆನ್ನಲ್ಲೇ ಟೀಮ್ ಇಂಡಿಯಾ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಸೋಷಿಯಲ್ ಮೀಡಿಯಾ ಮೂಲಕ ಭಾರತ ವನಿತಾ ತಂಡಕ್ಕೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಮುಂದಿನ ಪೀಳಿಗೆಗೆ ಸ್ಫೂರ್ತಿ, ನಿಮ್ಮ ನಿರ್ಭೀತ ಕ್ರಿಕೆಟ್ ಮತ್ತು ನಂಬಿಕೆಯಿಂದ ನೀವು ಪ್ರತಿಯೊಬ್ಬ ಭಾರತೀಯನನ್ನು ಹೆಮ್ಮೆಪಡುವಂತೆ ಮಾಡಿದ್ದೀರಿ. ನೀವು ಎಲ್ಲಾ  ಪ್ರಶಂಸೆಗಳಿಗೆ ಅರ್ಹರು ಮತ್ತು ಈ ಕ್ಷಣವನ್ನು ಪೂರ್ಣವಾಗಿ ಆನಂದಿಸಿ. ಹರ್ಮನ್ ಮತ್ತು ತಂಡಕ್ಕೆ ಅಭಿನಂದನೆಗಳು. ಜೈ ಹಿಂದ್ ಎಂದು ವಿರಾಟ್ ಕೊಹ್ಲಿ ಸಾಮಾಜಿಕ ಜಾಲತಾಣದ ಮೂಲಕ ಅಭಿನಂದಿಸಿದ್ದಾರೆ.

error: Content is protected !!