Friday, January 2, 2026

Snacks Series 26 | ಚೀಸ್ ಬನ್ ತಿನ್ನೋಕೆ ಕೊರಿಯಾಗೆ ಹೋಗ್ಬೇಕಾಗಿಲ್ಲ! ಮನೆಯಲ್ಲೇ ಸಿಂಪಲ್ ಆಗಿ ಮಾಡ್ಬಹುದು

ಸಾಫ್ಟ್ ಆಗಿ ಬಾಯಲ್ಲಿ ಕರಗೋ ಸ್ನ್ಯಾಕ್ ಬೇಕಾ? ಹಾಗಿದ್ರೆ ಕೊರಿಯನ್ ಚೀಸ್ ಬನ್ ಪರ್ಫೆಕ್ಟ್. ಹೊರಗಿನಿಂದ ನೋಡಲು ಸಿಂಪಲ್ ಆಗಿದ್ರೂ, ಒಳಗೆ ತುಂಬಿದ ಚೀಸ್‌ ಫಿಲ್ಲಿಂಗ್ ಈ ಬನ್‌ಗೆ ವಿಶೇಷ ರುಚಿ ಕೊಡುತ್ತೆ. ಟೀ ಅಥವಾ ಕಾಫಿ ಜೊತೆ ಈ ಸ್ನ್ಯಾಕ್ ತುಂಬಾ ಚೆನ್ನಾಗಿ ಹೊಂದುತ್ತೆ.

ಬೇಕಾಗುವ ಸಾಮಗ್ರಿಗಳು

ಮೈದಾ – 2 ಕಪ್
ಯೀಸ್ಟ್– 1 ಟೀ ಸ್ಪೂನ್
ಸಕ್ಕರೆ – 2 ಟೀ ಸ್ಪೂನ್
ಉಪ್ಪು – ಚಿಟಿಕೆ
ಹಾಲು – ಅರ್ಧ ಕಪ್
ಬೆಣ್ಣೆ – 2 ಟೇಬಲ್ ಸ್ಪೂನ್
ಮೋಜಾರೆಲ್ಲಾ ಚೀಸ್ – 1 ಕಪ್ (ತುರಿದದ್ದು)
ಕ್ರೀಮ್ ಚೀಸ್ – ಅರ್ಧ ಕಪ್
ಬೆಳ್ಳುಳ್ಳಿ ಪೇಸ್ಟ್ – ½ ಟೀ ಸ್ಪೂನ್
ಒರಿಗ್ಯಾನೋ / ಚಿಲ್ಲಿ ಫ್ಲೇಕ್ಸ್ – ಸ್ವಲ್ಪ

ಮಾಡುವ ವಿಧಾನ

ಮೊದಲು ಒಂದು ಬೌಲಿನಲ್ಲಿ ಹಾಲು, ಸಕ್ಕರೆ ಮತ್ತು ಯೀಸ್ಟ್ ಸೇರಿಸಿ 10 ನಿಮಿಷ ಬಿಟ್ಟು ಫೋಮ್ ಬರಲು ಬಿಡಿ. ನಂತರ ಮೈದಾ, ಉಪ್ಪು, ಬೆಣ್ಣೆ ಸೇರಿಸಿ ಮೃದುವಾದ ಹಿಟ್ಟಾಗಿ ಕಲಸಿ. ಹಿಟ್ಟನ್ನು ಮುಚ್ಚಿ ಒಂದು ಗಂಟೆ ಫುಲ್ ಆಗಿ ಫರ್ಮೆಂಟ್ ಆಗಲು ಬಿಡಿ.

ಇನ್ನೊಂದು ಬೌಲ್‌ನಲ್ಲಿ ಕ್ರೀಮ್ ಚೀಸ್, ಮೋಜಾರೆಲ್ಲಾ, ಬೆಳ್ಳುಳ್ಳಿ ಪೇಸ್ಟ್ ಮತ್ತು ಒರೆಗಾನೋ ಮಿಕ್ಸ್ ಮಾಡಿ ಫಿಲ್ಲಿಂಗ್ ತಯಾರಿಸಿ. ಹಿಟ್ಟನ್ನು ಸಣ್ಣ ಗುಂಡಿಗಳಾಗಿ ಮಾಡಿ, ಮಧ್ಯದಲ್ಲಿ ಚೀಸ್ ಫಿಲ್ಲಿಂಗ್ ಇಟ್ಟು ಬನ್ ಆಕಾರ ಕೊಡಿ.

ಈ ಬನ್‌ಗಳನ್ನು ಗ್ರೀಸ್ ಮಾಡಿದ ಟ್ರೇನಲ್ಲಿ ಇಟ್ಟು 180 ಡಿಗ್ರಿ ಸೆಲ್ಸಿಯಸ್‌ನಲ್ಲಿ 18–20 ನಿಮಿಷ ಬೇಯಿಸಿ. ಮೇಲೆ ಸ್ವಲ್ಪ ಬೆಣ್ಣೆ ಹಚ್ಚಿದರೆ ರುಚಿ ಇನ್ನೂ ಹೆಚ್ಚಾಗುತ್ತೆ.

error: Content is protected !!