Friday, October 24, 2025

ಬೇಕಿತ್ತಾ ಇವೆಲ್ಲಾ? ಕಾರ್‌ ಮೇಲೆ ಕೂತ್ಕೊಂಡು ಸ್ಟಂಟ್‌ ಮಾಡೋಕೆ ಹೋಗಿ ಜೈಲುಪಾಲಾದ ಯುವಕರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮುಂಬೈ ನಗರದಲ್ಲಿನ ಆಂಧೇರಿ ಈಸ್ಟ್ ಪ್ರದೇಶದಲ್ಲಿ ಕಾರಿನ ಮೇಲೆ ಕುಳಿತು ಸಾಹಸ ಪ್ರದರ್ಶಿಸಿದ ಆರೋಪದಲ್ಲಿ ಮೂವರು ಯುವಕರನ್ನು ಪೊಲೀಸರು ಬಂಧಿಸಿದ ಘಟನೆ ನಡೆದಿದೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಮಿಡ್‌ಸಿ ಪೊಲೀಸ್ ಠಾಣೆಯ ಅಧಿಕಾರಿಯ ಪ್ರಕಾರ, ವಿಡಿಯೋದಲ್ಲಿ ಇಬ್ಬರು ವ್ಯಕ್ತಿಗಳು ಕಾರಿನ ಮೇಲೆ ಕುಳಿತು ಸ್ಟಂಟ್ ಮಾಡುತ್ತಿದ್ದು, ಇದರಿಂದ ಸೇತುವೆ ಮೇಲೆ ಸ್ವಲ್ಪ ಸಮಯಕ್ಕೆ ಸಂಚಾರ ವ್ಯತ್ಯಯ ಉಂಟಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಭಾರತೀಯ ನ್ಯಾಯ ಸಂಹಿತೆ ಮತ್ತು ಮೋಟಾರ್ ವಾಹನಗಳ ಕಾಯ್ದೆಯ ಅಡಿಯಲ್ಲಿ ನಾಲ್ಕು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈವರೆಗೂ ಮೂವರನ್ನು ಬಂಧಿಸಲಾಗಿದೆ. ನಾಲ್ಕನೇ ವ್ಯಕ್ತಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

error: Content is protected !!