ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಭಾರತ್ ಮಂಟಪದಲ್ಲಿ ನಡೆಯುತ್ತಿರುವ ಇಂಡಿಯಾ AI ಇಂಪ್ಯಾಕ್ಟ್ 2026ರ ಶೃಂಗಸಭೆಯಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಶರ್ಟ್ ಬಿಚ್ಚಿ ಪ್ರತಿಭಟನೆ ನಡೆಸಿದ್ದು, ಈ ನಡೆಯನ್ನು ಕೇಂದ್ರ ಸಚಿವ ಪಿಯೂಷ್ ಗೋಯಲ್ ತೀವ್ರವಾಗಿ ಖಂಡಿಸಿದ್ದಾರೆ.
ಯುವ ಕಾಂಗ್ರೆಸ್ ಕಾರ್ಯಕರ್ತರು ಶೃಂಗಸಭೆಯ ಸ್ಥಳದೊಳಗೆ ತಮ್ಮ ಶರ್ಟ್‌ಗಳನ್ನು ತೆಗೆದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆಗಳನ್ನು ಕೂಗಿದರು. ಬಳಿಕ ದೆಹಲಿ ಪೊಲೀಸರು ಕೆಲವು ವ್ಯಕ್ತಿಗಳನ್ನು ಬಂಧಿಸಿದ್ದಾರೆ.
ಕಾಂಗ್ರೆಸ್ ನ ಈ ನಡೆಗೆ ಕೇಂದ್ರ ಸಚಿವ ಪಿಯೂಷ್ ಗೋಯಲ್ ತ್ರೀವ ಅಸಮಾಧಾನ ವ್ಯಕ್ತಪಡಿಸಿದ್ದು,ದೇಶ ಮುಂದುವರೆಯುವುದು ಕೆಲವರಿಗೆ ಇಷ್ಟವಿಲ್ಲ. ಭಾರತ ಈಗ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಅಂತಹ ಅಂತಾರಾಷ್ಟ್ರೀಯ ಕಾರ್ಯಕ್ರಮಗಳನ್ನು ಅಡ್ಡಿಪಡಿಸುವುದು ಪ್ರಗತಿಯನ್ನು ತಡೆಯುವ ಪ್ರಯತ್ನವಾಗಿದೆ ಎಂದು ವಾಗ್ದಾಳಿ ನಡೆಸಿದರು.
ಯುವ ಕಾಂಗ್ರೆಸ್ ಪ್ರತಿಭಟನೆಯನ್ನು ಕಾಂಗ್ರೆಸ್‌ನ ದುರಹಂಕಾರ ಮತ್ತು ಹತಾಶೆ . ರಾಹುಲ್ ಗಾಂಧಿ, ಭಾರತವನ್ನು ಅವಮಾನಿಸುವುದು ಮತ್ತು ಸರ್ಕಾರದ ಮೇಲೆ ದಾಳಿ ಮಾಡುವುದು ನಿಮ್ಮ ವಿರೋಧದ ಕಲ್ಪನೆ! ಇತ್ತೀಚಿನ ವ್ಯಾಪಾರ ಒಪ್ಪಂದದ ಬಗ್ಗೆ ಸುಳ್ಳುಗಳನ್ನು ಹರಡುವ ಮೂಲಕ ನೀವು ಭಾರತದ ಅಭಿವೃದ್ಧಿಯನ್ನು ತಡೆಯಲು ಬಯಸುತ್ತೀರಿ. AI ಶೃಂಗಸಭೆಯಲ್ಲಿ ಶರ್ಟ್ ಧರಿಸದೆ ಪ್ರತಿಭಟನೆ ನಡೆಸುತ್ತಿರುವ ನಿಮ್ಮ ಯುವ ಕಾಂಗ್ರೆಸ್ ಭಾರತದ 1.4 ಶತಕೋಟಿ ಜನರಿಗೆ ಮಾಡಿದ ಅವಮಾನ. ಇಂತಹ ತಂತ್ರಗಳು ನಿಮ್ಮ ಮತ್ತು ನಿಮ್ಮ ಪಕ್ಷದ ದೂರದೃಷ್ಟಿಯ ಕೊರತೆಯನ್ನು ಪ್ರತಿಬಿಂಬಿಸುತ್ತವೆ ಎಂದು ಕಟುವಾಗಿ ಟೀಕಿಸಿದರು.



