March 15, 2026
Sunday, March 15, 2026
spot_img

ಯಪ್ಪಾ…! ಸ್ವಲ್ಪ ನೆಮ್ಮದಿ ಸಿಕ್ತು… ಬೆಂಗಳೂರಲ್ಲಿ ಕೊನೆಗೂ ಏರ್ ಕ್ವಾಲಿಟಿ ಸುಧಾರಣೆಯಾಗಿದ್ಯಂತೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದ ಹಲವು ನಗರಗಳಲ್ಲಿ ವಾಯು ಗುಣಮಟ್ಟದಲ್ಲಿ ತೀವ್ರ ಬದಲಾವಣೆಗಳು ಕಂಡುಬರುತ್ತಿದ್ದು, ಆರೋಗ್ಯದ ಬಗ್ಗೆ ಚಿಂತೆ ಮೂಡಿಸಿದೆ. ಕೆಲವು ದಿನಗಳಿಂದ ಕಳಪೆ ಮಟ್ಟಕ್ಕಿಳಿದಿದ್ದ ಬೆಂಗಳೂರಿನ ಗಾಳಿಯ ಗುಣಮಟ್ಟ ಇದೀಗ 137ಕ್ಕೆ ಸುಧಾರಣೆ ಕಂಡಿದೆ. ಆದರೆ ಇದು ಸಂಪೂರ್ಣ ಸುರಕ್ಷಿತ ಮಟ್ಟವಲ್ಲ ಎಂದು ತಜ್ಞರು ಎಚ್ಚರಿಸಿದ್ದಾರೆ.

ಇನ್ನೊಂದೆಡೆ ಮಂಗಳೂರಿನ ಪರಿಸ್ಥಿತಿ ಹದಗೆಟ್ಟಿದ್ದು, ಏರ್ ಕ್ವಾಲಿಟಿ ಇಂಡೆಕ್ಸ್ 199ಕ್ಕೆ ಏರಿಕೆಯಾಗಿದೆ. ಬಳ್ಳಾರಿ (179) ಮತ್ತು ಶಿವಮೊಗ್ಗ (166) ನಗರಗಳಲ್ಲೂ ಗಾಳಿ ಗುಣಮಟ್ಟ ಅನಾರೋಗ್ಯಕರ ಮಟ್ಟಕ್ಕೆ ತಲುಪಿದೆ. ಈ ಸ್ಥಿತಿ ಮುಂದುವರೆದರೆ ದೀರ್ಘಕಾಲದಲ್ಲಿ ಗಂಭೀರ ಆರೋಗ್ಯ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಇದನ್ನೂ ಓದಿ:

ಇಂದಿನ ಅಂಕಿಅಂಶಗಳ ಪ್ರಕಾರ ಮೈಸೂರು 144, ಕಲಬುರಗಿ 152, ಉಡುಪಿ 164 ಮತ್ತು ವಿಜಯಪುರ 154 ಅಂಕಗಳನ್ನು ದಾಖಲಿಸಿವೆ. ತಜ್ಞರು ಮಾಸ್ಕ್ ಧರಿಸುವುದು ಮತ್ತು ಅನಗತ್ಯ ಹೊರಾಂಗಣ ಚಟುವಟಿಕೆಗಳನ್ನು ಕಡಿಮೆ ಮಾಡಿಕೊಳ್ಳುವಂತೆ ಸಲಹೆ ನೀಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !