Tuesday, January 13, 2026
Tuesday, January 13, 2026
spot_img

ಜೋಹೋ ಸಂಸ್ಥಾಪಕ ಶ್ರೀಧರ್ ವೆಂಬು ದಾಂಪತ್ಯ ಜೀವನ ಅಂತ್ಯ: ಪತ್ನಿಗೆ ನೀಡಬೇಕು ಬರೋಬ್ಬರಿ15000 ಕೋಟಿ ವಿಚ್ಛೇದನ ಬಾಂಡ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜೋಹೋ ಸಂಸ್ಥಾಪಕ ಶ್ರೀಧರ್ ವೆಂಬು ದಾಂಪತ್ಯ ಜೀವನ ಡಿವೋರ್ಸ್ ಮೂಲಕ ಅಂತ್ಯಗೊಂಡಿದೆ. ಕಳೆದ ನಾಲ್ಕು ವರ್ಷಗಳಿಂದ ಕೋರ್ಟ್‌ನಲ್ಲಿ ನಡೆಯುತ್ತಿದ್ದ ಡಿವೋರ್ಸ್ ಕೇಸ್ ಇದೀಗ ಮಹತ್ವದ ಆದೇಶ ಬಂದಿದೆ. ವಿಚ್ಚೇದನ ನೀಡುವಾಗ ಶ್ರೀಧರ್ ವೆಂಬು, ತನ್ನ ಪತ್ನಿಗ ಪ್ರಮೀಳಾ ಶ್ರೀನಿವಾಸನ್‌ಗೆ ಬರೋಬ್ಬರಿ 15 ಸಾವಿರ ಕೋಟಿ ರೂಪಾಯಿ ಬಾಂಡ್ ನೀಡಲು ಸೂಚಿಸಿದೆ.

ಶ್ರೀಧರ್ ವೆಂಬು ಆರಂಭಿಸಿದ ಕಂಪನಿ, ಆಸ್ತಿ ಎಲ್ಲಾ ಮೌಲ್ಯ ಒಟ್ಟು 30,000 ಕೋಟಿ ರೂಪಾಯಿಗೂ ಹೆಚ್ಚು, ಇದರಲ್ಲಿ ಅರ್ಧ ಅಂದರೆ 15,278 ಕೋಟಿ ರೂಪಾಯಿ ಬಾಂಡ್ ರೂಪದಲ್ಲಿ ಪತ್ನಿಗೆ ನೀಡಲು ಕೋರ್ಟ್ ಸೂಚಿಸಿದೆ.

2021ರಲ್ಲೇ ಶ್ರೀಧರ್ ವೆಂಬು ಹಾಗೂ ಪ್ರಮೀಳಾ ಶ್ರೀನಿವಾಸನ್ ವಿಚ್ಚೇದನಕ್ಕಾಗಿ ಅಮೆರಿಕದ ಕ್ಯಾಲಿಫೋರ್ನಿಯಾ ಕೋರ್ಟ್ ಮೆಟ್ಟಿಲೇರಿದ್ದರು. ಬರೋಬ್ಬರಿ ನಾಲ್ಕು ವರ್ಷಗಳ ವಿಚಾರಣೆ ಬಳಿಕ ಇದೀಗ ಪ್ರಕರಣ ಅಂತಿಮ ಘಟ್ಟ ತಲುಪಿದ್ದು, ಬಾಂಡ್ ನೀಡಲು ಸೂಚನೆ ನೀಡಿದೆ.

ವ್ಯಾಟ್ಸಾಪ್‌ಗೆ ಪ್ರತಿಸ್ಪರ್ಧಿಯಾಗಿ ಭಾರತೀಯ ಆ್ಯಪ್ ಅರಟ್ಟೈ ಆರಂಭಿಸಿದ ಶ್ರೀಧರ್ ವೆಂಬು ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದರು. ಇದಕ್ಕೂ ಮೊದಲು ಶ್ರೀಧರ್ ವೆಂಬು ಆರಂಭಿಸಿದ ಜೋಹೋ, ಗೂಗಲ್, ಜಿಮೇಲ್, ಕ್ಲೌಡ್ ಸೇರಿದಂತೆ ಹಲವು ದೈತ್ಯ ಕಂಪನಿಗಳಿಗೆ ಪೈಪೋಟಿ ನೀಡಿದೆ.

ಮದ್ರಾಸ್‌ನಲ್ಲಿ ಶಿಕ್ಷಣ ಬಳಿಕ ಉನ್ನತ ವ್ಯಾಸಾಂಗಕ್ಕಾಗಿ ಅಮೆರಿಕ ತೆರಳಿದ ಶ್ರೀಧರ್ ವೆಂಬು 1993ರಲ್ಲಿ ಪ್ರಮೀಳಾ ಶ್ರೀನಿವಾಸನ್ ಮದುವೆಯಾಗಿದ್ದಾರೆ. ಪ್ರಮೀಳಾ ಅಮೆರಿದ ಕ್ಯಾಲಿಫೋರ್ನಿಯಾದಲ್ಲಿ ನೆಲೆಯಿದ ಭಾರತೀಯ ಮೂಲದವರು. ಶಿಕ್ಷಣ, ಆರೋಗ್ಯ, ಟೆಕ್ನಾಲಜಿ ಸೇರಿದಂತೆ ಹಲವು ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಮೂರು ದಶಕ ಅಂದರೆ ಸರಿಸುಮಾರು 30 ವರ್ಷ ಜೊತೆಯಾಗಿ ಕ್ಯಾಲಿಫೋರ್ನಿಯಾದಲ್ಲೇ ಜೀವನ ನಡೆಸಿದ್ದರು. 2019ರಲ್ಲಿ ಶ್ರೀಧರ್ ವೆಂಬು ಭಾರತಕ್ಕೆ ಸ್ಥಳಾಂತರಗೊಂಡರೆ, ಪ್ರಮೀಳಾ ಅಮೆರಿಕದಲ್ಲೇ ನೆಲೆಸಿದ್ದಾರೆ.

1996ರಲ್ಲಿ ಶ್ರೀಧರ್ ವೆಂಬು ಇಬ್ಬರು ಸಹೋದರರು ಹಾಗೂ ಗೆಳಯನ ಜೊತೆಗೂಡಿ ಸಾಫ್ಟ್‌ವೇರ್ ಡೆವಲಪ್ಪರ್ ಕಂಪನಿ ಆರಂಭಿಸಿದ್ದರು. 2009ರಲ್ಲಿ ಝೋಹೋ ಎಂದು ಮರುನಾಮಕರಣ ಮಾಡಲಾಗಿತ್ತು. ಝೋಹೋ ವಿಶ್ವದ ಅತೀ ದೊಡ್ಡ ಕಂಪನಿಯಾಗಿ ಬೆಳೆದಿದೆ. ಇತ್ತೀಚೆಗೆ ಅರಟ್ಟೈ ಅನ್ನೋ ಆ್ಯಪ್ ಕೂಡ ಆರಂಭಿಸಿ ಭಾರಿ ಜನಪ್ರಿಯರಾಗಿದ್ದಾರೆ.

ಡಿವೋರ್ಸ್‌ಗೆ ಕಾರಣವೇನು?
ವರದಿಗಳ ಪ್ರಕಾರ, ಝೋಹೋ ಕಂಪನಿ ವಿಶ್ವದ ಅತೀ ದೊಡ್ಡ ಕಂಪನಿಯಾಗಿ ಬೆಳೆದು ನಿಂತಿದೆ. ಇದರ ಅಧಿಪತ್ಯ ಸಾಧಿಸಲು ಪತ್ನಿ ಪ್ರಮೀಳಾ ಶ್ರೀನಿವಾಸನ್ ಬಯಸಿದ್ದರು. ಕಂಪನಿಯ ಬಹುತೇಕ ಪಾಲು ತನಗೆ ಸೇರಬೇಕು ಎಂದು ಜಗಳ ಶುರುವಾಗಿದೆ. ಇದರ ನಡುವೆ ಶ್ರೀಧರ್ ವೆಂಬು ಕಂಪನಿ ಪಾಲುಗಳನ್ನು ಪ್ರಮೀಳಾ ಶ್ರೀನಿವಾಸನ್‌ಗೆ ಗೊತ್ತಲ್ಲದೆ ವರ್ಗಾವಣೆ ಮಾಡಿದ್ದಾರೆ ಅನ್ನೋ ಆರೋಪಗಳು ಇದೆ. ಪ್ರಮುಖವಾಗಿ ಆಸ್ತಿ ಹಾಗೂ ಪಾಲುದಾರಿಕೆಯಲ್ಲಿ ಆರಂಭವಾದ ಜಗಳ ಡಿವೋರ್ಸ್‌ನಲ್ಲಿ ಅಂತ್ಯಗೊಂಡಿದೆ.

Most Read

error: Content is protected !!