Monday, October 13, 2025

ನಮ್ಮ ಮೆಟ್ರೋದಲ್ಲಿ ಇದೇ ಮೊದಲ ಬಾರಿಗೆ ಯಕೃತ್‌ ಸಾಗಣೆ: ಯುವಕನಿಗೆ ಅಂಗಾಂಗ ಕಸಿ ಯಶಸ್ವಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ನಮ್ಮ ಮೆಟ್ರೋದಲ್ಲಿ ಇದೇ ಮೊದಲ ಬಾರಿಗೆ ದಾನಿಯಯೊಬ್ಬರ ಯಕೃತ್ ಅಂಗಾಂಗವನ್ನು ಸಾಗಣೆ ಮಾಡಿ ಸೂಕ್ತ ಸಮಯದಲ್ಲಿ ಅಂಗಾಂಗ ಕಸಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಲಾಗಿದೆ.

ವೈಟ್ ಫೀಲ್ಡ್​ನಿಂದ ಯುವಕನೋರ್ವನ ಲಿವರ್ ಅನ್ನು “ಗ್ರೀನ್ ಕಾರಿಡಾರ್” ಯೋಜನೆಯಡಿ ತ್ವರಿತವಾಗಿ ಮೆಟ್ರೋದಲ್ಲಿ ರಾಜರಾಜೇಶ್ವರಿ ನಗರದ ಸ್ಪರ್ಶ ಆಸ್ಪತ್ರೆ ಸಾಗಿಸಿ ಸಕಾಲದಲ್ಲಿ ಅಂಗಾಂಗ ಕಸಿ ನಡೆಸಿ ಯುವಕನೋರ್ವನಿಗೆ ಜೀವದಾನ ನೀಡಲಾಗಿದೆ.

ಬೆಂಗಳೂರು ಮಹಾ ನಗರದ ಸಂಚಾರ ದಟ್ಟಣೆ ನಡುವೆ ತ್ವರಿತವಾಗಿ ಅಂಗಾಂಗ ಸಾಗಾಟ ಮಾಡುವುದು ಸವಾಲಿನ ಕೆಲಸವಾಗಿತ್ತು. ವೈಟ್ ಫೀಲ್ಡ್​ನಿಂದ ರಾಜರಾಜೇಶ್ವರಿ ನಗರಕ್ಕೆ ವಾಹನದಲ್ಲಿ ಅಂಗಾಂಗ ಸಾಗಾಟ ಮಾಡಲು 3 – 4 ತಾಸುಗಳ ಸಮಯ ಹಿಡಿಯುತ್ತಿತ್ತು. ಅಂಗಾಂಗ ಸಾಗಣೆಗೆ ನಮ್ಮ ಮೆಟ್ರೋ ಕೈ ಜೋಡಿಸಿದ್ದರಿಂದ ತ್ವರಿತವಾಗಿ ಸಾಗಿಸಲು ಸಹಾಯವಾಯಿತು.

ವೈಟ್‌ಫೀಲ್ಡ್‌ (ಕಾಡುಗೋಡಿ) ಮೆಟ್ರೋ ನಿಲ್ದಾಣದಿಂದ ರಾಜರಾಜೇಶ್ವರಿ ನಗರದ ಮೆಟ್ರೋ ನಿಲ್ದಾಣಕ್ಕೆ ಯಕೃತ್‌ನ್ನು ಮೆಟ್ರೋ ಬೋಗಿಯ ಮೂಲಕ ತಂದು ಯಕೃತ್‌ ಕಸಿಯನ್ನು ಯಶಸ್ವಿಯಾಗಿ ನೆರವೇರಿಸಲಾಗಿದೆ.

ವಾರಾಂತ್ಯದ ಸಂಚಾರ ದಟ್ಟಣೆ ಮತ್ತು ಅಂಗಾಂಗವು ಕೆಡದಂತೆ ಕೆಲವೇ ಗಂಟೆಗಳಲ್ಲಿ ಶಸ್ತ್ರಚಿಕಿತ್ಸೆ ಮೂಲಕ ಯಕೃತ್‌ ಕಸಿ ನೆರವೇರಿಸಬೇಕಾಗಿದ್ದ ಹಿನ್ನೆಲೆಯಲ್ಲಿ ಯಕೃತ್‌ ಸಾಗಾಟಕ್ಕೆ ನಮ್ಮ ಮೆಟ್ರೋ ನೆರವನ್ನು ಸ್ಪರ್ಶ ಆಸ್ಪತ್ರೆ ಆಡಳಿತ ಮಂಡಳಿ ಕೋರಿತ್ತು. ಮೆಟ್ರೋ ನಿಗಮವು ಇದಕ್ಕೆ ತಕ್ಷಣವೇ ಸ್ಪಂದಿಸಿದೆ.

error: Content is protected !!