Thursday, September 11, 2025

ಮಳೆಗೆ ಕುಸಿದುಬಿದ್ದ ಅಪಾರ್ಟ್‌ಮೆಂಟ್ ಮೆಟ್ಟಿಲು, ಮನೆಗಳಲ್ಲಿಯೇ ಸಿಲುಕಿಕೊಂಡ ಹಲವಾರು ಕುಟುಂಬಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಗಾಜಿಯಾಬಾದ್​ನ ವಸುಂಧರದಲ್ಲಿರುವ ವಸತಿ ಕಟ್ಟಡದ ಮೆಟ್ಟಿಲುಗಳ ಒಂದು ಭಾಗ ಕುಸಿದಿದ್ದು, ನಿವಾಸಿಗಳು 10 ಗಂಟೆಗಳ ಕಾಲ ತಮ್ಮ ಫ್ಲಾಟ್​​ನಲ್ಲೇ ಸಿಲುಕಿಕೊಂಡಿರುವ ಘಟನೆ ನಡೆದಿದೆ.

ಯಾವುದೇ ಸಾವುನೋವುಗಳು ವರದಿಯಾಗಿಲ್ಲ. ಆದಾಗ್ಯೂ, ಲಿಫ್ಟ್ ಅಥವಾ ಯಾವುದೇ ಸುರಕ್ಷಿತ ನಿರ್ಗಮನ ಮಾರ್ಗವಿಲ್ಲದ ಕಾರಣ ಮೇಲಿನ ಮಹಡಿಯಲ್ಲಿ ಹಲವಾರು ಕುಟುಂಬಗಳು ಕುಸಿತದಲ್ಲಿ ಸಿಲುಕಿಕೊಂಡಿತ್ತು.

ಮೆಟ್ಟಿಲು ಕುಸಿತದಿಂದಾಗಿ ಹಲವಾರು ಫ್ಲಾಟ್‌ಗಳಿಗೆ ನೇರ ಪ್ರವೇಶ ಕಡಿತಗೊಂಡಿದ್ದು, ಕನಿಷ್ಠ ಆರು ಕುಟುಂಬಗಳು ಸುಮಾರು 10 ಗಂಟೆಗಳ ಕಾಲ ತಮ್ಮ ಮನೆಗಳೊಳಗೆ ಸಿಲುಕಿಕೊಂಡಿವೆ. ಮೂರನೇ ಮಹಡಿಯಲ್ಲಿರುವ  ಫ್ಲಾಟ್  H-110 ಗೆ ಹೋಗುವ ಕಾರಿಡಾರ್ ಕೂಡ ಈ ಘಟನೆಯಲ್ಲಿ ಕುಸಿದಿದೆ. 10 ಗಂಟೆಗಳ ನಂತರ ಅಗ್ನಿಶಾಮಕ ದಳದ ತಂಡ ಸ್ಥಳಕ್ಕೆ ತಲುಪಿ, ಏಣಿಯನ್ನು ಬಳಸಿ ಸಿಕ್ಕಿಬಿದ್ದ ನಿವಾಸಿಗಳನ್ನು ಸ್ಥಳಾಂತರಿಸುವಲ್ಲಿ ಯಶಸ್ವಿಯಾಯಿತು.

ಇದನ್ನೂ ಓದಿ