Tuesday, September 9, 2025

ರಸ್ತೆ ಕುಸಿದು ಉಕ್ಕಿ ಹರಿದ ನೀರು: ಮಾನವ ರಸ್ತೆ ನಿರ್ಮಿಸಿ ಮಕ್ಕಳನ್ನು ದಡಕ್ಕೆ ಕರೆತಂದ ಜನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ರಸ್ತೆ ಕುಸಿದು ಉಕ್ಕಿ ಹರಿಯುತ್ತಿದ್ದ ನೀರಿನ ನಡುವೆ ಎರಡೂ ಬದಿಗೆ ಸೇತುವೆಯಂತೆ ನಿಂತು ಶಾಲಾ ಮಕ್ಕಳನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ದಾಟಿಸಿದ ಘಟನೆ ಪಂಜಾಬ್‌ನಲ್ಲಿ ನಡೆದಿದೆ.

ಭಾರೀ ಮಳೆಯಿಂದಾಗಿ ರಸ್ತೆ ಕುಸಿದು ಗದ್ದೆಗಳು ಜಲಾವೃತಗೊಂಡಿದ್ದವು. ಪಂಜಾಬ್‌ನ ಮೋಗಾದಲ್ಲಿ ವೇಗವಾಗಿ ಹರಿಯುತ್ತಿದ್ದ ನೀರಿನ ಮಧ್ಯೆ ರಸ್ತೆ ಎರಡೂ ಬದಿಗೆ ಸಂಪರ್ಕ ಕೊಂಡಿಯಂತೆ ನಿಂತು 35 ಶಾಲಾ ಮಕ್ಕಳನ್ನು ರಸ್ತೆಯ ಒಂದು ಬದಿಯಿಂದ ಮತ್ತೊಂದು ಬದಿಗೆ ದಾಟಿಸಿದ್ದಾರೆ. ‘ಜುಗಾಡ್’ ಎಂದು ಕರೆಯಲ್ಪಡುವ ಈ ವಿಶಿಷ್ಟ ವಿಧಾನದ ಮೂಲಕ ಶಾಲಾ ಮಕ್ಕಳಿಗೆ ನೆರವಾದವರನ್ನು ಮಲ್ಲೆಯನ್ ಗ್ರಾಮದ ಪಂಚಾಯಿತಿ ಗೌರವಿಸಿದೆ. 

ಮಲ್ಲೆಯಾನ್‌ನಲ್ಲಿ ಭಾರೀ ಮಳೆಯಿಂದಾಗಿ ಹೊಲ, ಗದ್ದೆಗಳು ಜಲಾವೃತಗೊಂಡಿದ್ದವು. ಶಾಲೆಗೆ ಹೋಗಿದ್ದ ಮಕ್ಕಳಿಗೆ ರಜೆ ಘೋಷಿಸಲಾಗಿತ್ತು. ಹೀಗಾಗಿ, ಮಕ್ಕಳು ಶಾಲೆಯಿಂದ ವಾಪಸ್‌ ಆಗಬೇಕಾಯಿತು. ಆದರೆ, ಗುರುದ್ವಾರದಲ್ಲಿ ಭಾರೀ ಮಳೆಯಿಂದಾಗಿ ರಸ್ತೆ ಕುಸಿದು ಕನಿಷ್ಠ 35 ಮಕ್ಕಳು ಸಿಲುಕಿಕೊಂಡಿದ್ದರು. ಸುಖ್ಬಿಂದರ್ ಸಿಂಗ್ ಮತ್ತು ಗಗನ್‌ದೀಪ್ ಸಿಂಗ್ ಇತರರೊಂದಿಗೆ ಮಕ್ಕಳಿಗೆ ಸಹಾಯ ಮಾಡಿದ್ದಾರೆ. ಇವರ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ ಉಂಟಾಗಿದೆ.

ಇದನ್ನೂ ಓದಿ